ಸುಪ್ರೀಂ ಕೋರ್ಟ್‌ನಲ್ಲಿ ಕಾವೇರಿ ಪ್ರಕರಣದ ವಿಚಾರಣೆ ಶುಕ್ರವಾರ ನಡೆಯುವುದು ಅನುಮಾನ; ಕಾರಣ ಇಲ್ಲಿದೆ

| Updated By: ಗಣಪತಿ ಶರ್ಮ

Updated on: Aug 31, 2023 | 7:52 PM

ಸಂವಿಧಾನ ಪೀಠದಲ್ಲಿ ಬಿಆರ್ ಗವಾಯಿ ಇರುವ ಕಾರಣ ಕಾವೇರಿ ನೀರು ಬಿಡುಗಡೆ ಸಂಬಂದದ ಅರ್ಜಿ ವಿಚಾರಣೆ ನಡೆಯುವುದು ಅನುಮಾನವಾಗಿದೆ. ಆದರೆ, ತಮಿಳುನಾಡು ಸರ್ಕಾರ ಅರ್ಜಿ ವಿಚಾರಣೆ ಮಾಡಲು ಪ್ರಸ್ತಾಪಿಸುವ ಸಾದ್ಯತೆ ಇದ್ದು, ಕಾವೇರಿ ನೀರು ಹಂಚಿಕೆ ಕುರಿತ ಅರ್ಜಿ ವಿಚಾರಣೆ ಸೋಮವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ.

ಸುಪ್ರೀಂ ಕೋರ್ಟ್‌ನಲ್ಲಿ ಕಾವೇರಿ ಪ್ರಕರಣದ ವಿಚಾರಣೆ ಶುಕ್ರವಾರ ನಡೆಯುವುದು ಅನುಮಾನ; ಕಾರಣ ಇಲ್ಲಿದೆ
ಸುಪ್ರೀಂ ಕೋರ್ಟ್‌
Follow us on

ನವದೆಹಲಿ, ಆಗಸ್ಟ್ 31: ಕಾವೇರಿ ನದಿ ನೀರು ಹಂಚಿಕೆ ಪ್ರಕರಣದ (Cauvery water dispute) ವಿಚಾರಣೆಯನ್ನು ಸುಪ್ರೀಂ ಕೋರ್ಟ್​​​ (Supreme Court) ಶುಕ್ರವಾರ ನಡೆಸುವುದು ಅನುಮಾನವಾಗಿದೆ. ನ್ಯಾಯಮೂರ್ತಿ ಗವಾಯಿ ನೇತೃತ್ವದ ಪೀಠದ ವಿಚಾರಣಾ ಪಟ್ಟಿಯಲ್ಲಿ ಪ್ರಕರಣದ ಬಗ್ಗೆ ಉಲ್ಲೇಖಿಸದೇ ಇರುವುದು ಗುರುವಾರ ತಿಳಿದುಬಂದಿದೆ. ಶುಕ್ರವಾರ ಸಾಂವಿಧಾನಿಕ ಪೀಠದಲ್ಲಿ ಆರ್ಟಿಕಲ್‌ 370 ಪ್ರಕರಣದ ವಿಚಾರಣೆ ನಡೆಯಲಿದೆ. ಸಂವಿಧಾನ ಪೀಠದಲ್ಲಿ ಬಿಆರ್ ಗವಾಯಿ ಇರುವ ಕಾರಣ ಕಾವೇರಿ ನೀರು ಬಿಡುಗಡೆ ಸಂಬಂದದ ಅರ್ಜಿ ವಿಚಾರಣೆ ನಡೆಯುವುದು ಅನುಮಾನವಾಗಿದೆ.

ಆದರೆ, ತಮಿಳುನಾಡು ಸರ್ಕಾರ ಅರ್ಜಿ ವಿಚಾರಣೆ ಮಾಡಲು ಪ್ರಸ್ತಾಪಿಸುವ ಸಾದ್ಯತೆ ಇದ್ದು, ಕಾವೇರಿ ನೀರು ಹಂಚಿಕೆ ಕುರಿತ ಅರ್ಜಿ ವಿಚಾರಣೆ ಸೋಮವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ.

ಈ ಮಧ್ಯೆ, ಕರ್ನಾಟಕದ ಉಪ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರು ದೆಹಲಿ ವಕೀಲರ ಜತೆ ಈಗಾಗಲೇ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ. ಸುಪ್ರೀಂ ಕೋರ್ಟ್​​ನಲ್ಲಿ ರಾಜ್ಯ ಸರ್ಕಾರದ ಪರ ವಾದ ಮಂಡನೆಗೆ ಪೂರಕ ಮಾಹಿತಿ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ತಜ್ಞರ ಜತೆಗೂ ಸಭೆ ನಡೆಸಿದ್ದಾರೆ. ನಾವು ನೀರು ಬಿಟ್ಟಿದ್ದೇವೆ, ತಮಿಳುನಾಡು ಹೇಗೆ ಬಳಕೆ‌ ಮಾಡಿಕೊಂಡಿದ್ದಾರೆ ಎಂಬುದು ನಮಗೆ ಅಗತ್ಯ ಇಲ್ಲ. ನಾವು ಆ ವಿಚಾರ ಚರ್ಚೆ ಬಗ್ಗೆ ಮಾಡಲ್ಲ. ಮೇಕೆದಾಟು ಒಂದೇ ಪರಿಹಾರ, ಇದು ತಮಿಳುನಾಡಿಗೆ ಅನುಕೂಲ. ವಾಸ್ತವಾಂಶ ನೋಡಲು ಕಾವೇರಿ ನೀರು ನಿಯಂತ್ರಣ ಸಮಿತಿ ತಂಡ ಕರೆಯಲಿದ್ದೇವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ಕಾವೇರಿ ನೀರು ಹಂಚಿಕೆ ವಿವಾದ; ಸುಪ್ರೀಂ ಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿದ ತಮಿಳುನಾಡು ಹೇಳಿದ್ದೇನು?

ಈ ಮಧ್ಯೆ, ಕಾವೇರಿ ನೀರು ನಿರ್ವಹಣ ಪ್ರಾಧಿಕಾರ ಸೂಚನೆ ನೀಡಿರುವ ಪ್ರಮಾಣದಲ್ಲಿ ಕರ್ನಾಟಕ ನೀರು ಬಿಡುಗಡೆ ಮಾಡುತ್ತಿಲ್ಲ ಎಂದು ತಮಿಳುನಾಡು ಸರ್ಕಾರ ದೂರಿದೆ. ಈ ವಿಚಾರವಾಗಿ ಸುಪ್ರೀಂ ಕೋರ್ಟ್​ಗೆ ಸಲ್ಲಿಸಿದ ಅಫಿಡವಿಟ್​​ನಲ್ಲಿ ತಮಿಳುನಾಡು ಉಲ್ಲೇಖಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ