ಚುನಾವಣಾ ಪ್ರಚಾರ ಬ್ಯುಸಿ ಮಧ್ಯೆ, ಡಿಕೆಶಿಗೆ ಐಟಿ ಬಿಸಿ

ಬೆಂಗಳೂರು: ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್​ನ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಐಟಿ ಇಲಾಖೆ ಡಿಕೆಶಿ ಮತ್ತು ಕುಟುಂಬಕ್ಕೆ ನೋಟಿಸ್ ನೀಡಿದೆ. ಅಕ್ರಮ ಹಣ ಪತ್ತೆ ಪ್ರಕಣದಲ್ಲಿ ಈಗಾಗಲೇ ತಿಹಾರ್ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಬಂದಿದ್ದಾರೆ. ಈ ಮಧ್ಯೆ, ವಿಚಾರಣೆಗೆ ಹಾಜರಾಗುವಂತೆ ಡಿ.ಕೆ.ಶಿವಕುಮಾರ್ ಮತ್ತು ಕುಟುಂಬಸ್ಥರಿಗೆ ಐಟಿ ಇಲಾಖೆ ನೋಟಿಸ್ ಮೇಲೆ ನೋಟಿಸ್ ನೀಡಿದೆ. ವಿಚಾರಣೆಗೆ ಹಾಜರಾಗುವಂತೆ ಡಿಕೆಶಿ ಮತ್ತು ಕುಟುಂಬಸ್ಥರಿಗೆ ಒಂದೇ ತಿಂಗಳಲ್ಲಿ 30 ನೋಟಿಸ್ ನೀಡಿದೆ. ಡಿ.ಕೆ.ಶಿವಕುಮಾರ್, ಪತ್ನಿ ಉಷಾ, ಸೋದರ […]

ಚುನಾವಣಾ ಪ್ರಚಾರ ಬ್ಯುಸಿ ಮಧ್ಯೆ, ಡಿಕೆಶಿಗೆ ಐಟಿ ಬಿಸಿ
ಸಾಧು ಶ್ರೀನಾಥ್​

Updated on: Dec 02, 2019 | 11:48 AM

ಬೆಂಗಳೂರು: ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್​ನ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಐಟಿ ಇಲಾಖೆ ಡಿಕೆಶಿ ಮತ್ತು ಕುಟುಂಬಕ್ಕೆ ನೋಟಿಸ್ ನೀಡಿದೆ. ಅಕ್ರಮ ಹಣ ಪತ್ತೆ ಪ್ರಕಣದಲ್ಲಿ ಈಗಾಗಲೇ ತಿಹಾರ್ ಜೈಲುವಾಸ ಅನುಭವಿಸಿ ಜಾಮೀನಿನ ಮೇಲೆ ಬಂದಿದ್ದಾರೆ. ಈ ಮಧ್ಯೆ, ವಿಚಾರಣೆಗೆ ಹಾಜರಾಗುವಂತೆ ಡಿ.ಕೆ.ಶಿವಕುಮಾರ್ ಮತ್ತು ಕುಟುಂಬಸ್ಥರಿಗೆ ಐಟಿ ಇಲಾಖೆ ನೋಟಿಸ್ ಮೇಲೆ ನೋಟಿಸ್ ನೀಡಿದೆ.

ವಿಚಾರಣೆಗೆ ಹಾಜರಾಗುವಂತೆ ಡಿಕೆಶಿ ಮತ್ತು ಕುಟುಂಬಸ್ಥರಿಗೆ ಒಂದೇ ತಿಂಗಳಲ್ಲಿ 30 ನೋಟಿಸ್ ನೀಡಿದೆ. ಡಿ.ಕೆ.ಶಿವಕುಮಾರ್, ಪತ್ನಿ ಉಷಾ, ಸೋದರ ಡಿ.ಕೆ.ಸುರೇಶ್ ಹಾಗೂ ಡಿಕೆಶಿ ಪುತ್ರಿ ಐಶ್ವರ್ಯಾ ಹೀಗೆ ಕುಟುಂಬಸ್ಥರಿಗೆಲ್ಲಾ, ದಿನ ಬಿಟ್ಟು ದಿನ ಐಟಿ ಇಲಾಖೆ ನೋಟಿಸ್ ನೀಡುತ್ತಾ ಬಂದಿದೆ .

ಮನವಿ ಮಾಡಿದ್ರೂ ನೋಟಿಸ್ ಮೇಲೆ ನೋಟಿಸ್:
ಉಪಚುನಾವಣೆ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಲು ಬೇರೆ ದಿನಾಂಕ ನಿಗದಿಗೆ ಡಿಕೆಶಿ ಮನವಿ ಮಾಡಿದ್ರೂ ನೋಟಿಸ್ ಮೇಲೆ ನೋಟಿಸ್ ನೀಡುತ್ತಿದೆ. ಹೀಗಾಗಿ ಇಂದು ಐಟಿ ಅಧಿಕಾರಿಗಳ ಎದುರು ಡಿ.ಕೆ.ಶಿವಕುಮಾರ್ ವಿಚಾರಣೆಗೆ ಹಾಜರಾಗಲಿದ್ದಾರೆ.

ಡಿಕೆಶಿ ಬೆಳಗಾವಿ ಪ್ರವಾಸ ರದ್ದು:
ಡಿ.ಕೆ.ಶಿವಕುಮಾರ್‌ಗೆ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ಬೆಳಗಾವಿ ಪ್ರವಾಸ ರದ್ದುಗೊಳಿಸಿ, ಬೆಂಗಳೂರಿನತ್ತ ತೆರಳಿದ್ದಾರೆ. ಇಂದು ಡಿಕೆಶಿ ಅಥಣಿ, ಕಾಗವಾಡ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳ ಪರ ಪ್ರಚಾರ ನಡೆಸಬೇಕಿತ್ತು.

Published On - 10:06 am, Mon, 2 December 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us