7 ಸೆಕೆಂಡ್​ನಲ್ಲಿ ಕರೆ ಸ್ವೀಕರಿಸ್ತೇವೆ, 9 ನಿಮಿಷದಲ್ಲಿ ಸ್ಪಾಟ್​ನಲ್ಲಿ ಇರ್ತೀವಿ: ಕಮಿಷನರ್ ಅಭಯ

ಬೆಂಗಳೂರು: ಹೈದರಾಬಾದ್​ನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ವಿಚಾರ ಸಂಬಂಧಿಸಿ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಮಹಿಳೆಯರಿಗೆ ಸುರಕ್ಷತೆಯ ಕರೆ ನೀಡಿದ್ದಾರೆ. ಮಹಿಳೆಯರು ಸಂಕಷ್ಟದಲ್ಲಿ ಇದ್ದಾಗ ಯಾವ ರೀತಿ ಸಹಾಯ ಪಡೆಯಬಹುದು ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ. ಮಹಿಳೆಯರಿಗೆ ಯಾವುದೇ ಸಮಸ್ಯೆ ಇದ್ರು ತಕ್ಷಣ 100 ಕ್ಕೆ ದೂರವಾಣಿ ಕರೆ ಮಾಡಿ. ಕರೆ ಮಾಡಿದ 7 ಸೆಕೆಂಡ್ ನಲ್ಲಿ ಕರೆ ಸ್ವೀಕರಿಸಲಾಗುತ್ತೆ. ನಂತ್ರ ಕೆಲವೆ ನಿಮಿಷಗಳಲ್ಲಿ ಪೊಲೀಸರು ಸ್ಪಾಟ್ ಗೆ ಬರ್ತಾರೆ. ಸುರಕ್ಷ […]

7 ಸೆಕೆಂಡ್​ನಲ್ಲಿ ಕರೆ ಸ್ವೀಕರಿಸ್ತೇವೆ, 9 ನಿಮಿಷದಲ್ಲಿ ಸ್ಪಾಟ್​ನಲ್ಲಿ ಇರ್ತೀವಿ: ಕಮಿಷನರ್ ಅಭಯ
ಸ್ವಯಂ ನಿವೃತ್ತಿ ಕೋರಿ ಅರ್ಜಿ ಸಲ್ಲಿಸಿದ ಹಿರಿಯ ಐಪಿಎಸ್ ಅಧಿಕಾರಿ​ ಭಾಸ್ಕರ್ ರಾವ್
Follow us
ಸಾಧು ಶ್ರೀನಾಥ್​
|

Updated on:Dec 02, 2019 | 11:54 AM

ಬೆಂಗಳೂರು: ಹೈದರಾಬಾದ್​ನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ವಿಚಾರ ಸಂಬಂಧಿಸಿ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಮಹಿಳೆಯರಿಗೆ ಸುರಕ್ಷತೆಯ ಕರೆ ನೀಡಿದ್ದಾರೆ. ಮಹಿಳೆಯರು ಸಂಕಷ್ಟದಲ್ಲಿ ಇದ್ದಾಗ ಯಾವ ರೀತಿ ಸಹಾಯ ಪಡೆಯಬಹುದು ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ. ಮಹಿಳೆಯರಿಗೆ ಯಾವುದೇ ಸಮಸ್ಯೆ ಇದ್ರು ತಕ್ಷಣ 100 ಕ್ಕೆ ದೂರವಾಣಿ ಕರೆ ಮಾಡಿ. ಕರೆ ಮಾಡಿದ 7 ಸೆಕೆಂಡ್ ನಲ್ಲಿ ಕರೆ ಸ್ವೀಕರಿಸಲಾಗುತ್ತೆ. ನಂತ್ರ ಕೆಲವೆ ನಿಮಿಷಗಳಲ್ಲಿ ಪೊಲೀಸರು ಸ್ಪಾಟ್ ಗೆ ಬರ್ತಾರೆ.

ಸುರಕ್ಷ ಆ್ಯಪ್ ಬಳಸಿ: 9 ನಿಮಿಷದಲ್ಲಿ ಸ್ಪಾಟ್​ಗೆ ಬರ್ತೀವಿ ಬೆಂಗಳೂರಿಗರು ಭಯ ಪಡುವ ಅವಶ್ಯಕತೆ ಇಲ್ಲಾ. ಸಾರ್ವಜನಿಕರ ಪ್ರತಿಯೊಂದು ಕರೆಯನ್ನೂ ನಾವು ಸ್ವೀಕರಿಸುತ್ತೇವೆ. ಸಾರ್ವಜನಿಕರು ಈ ಕ್ಷಣದಿಂದಲೆ ಕರೆ ಮಾಡಬಹುದು. ಕರೆ ಮಾಡಿದ 9 ನಿಮಿಷದಲ್ಲಿ ನಾವು ನಿಮ್ಮ ಸ್ಪಾಟ್​ಗೆ ಬರ್ತೀವಿ ಎಂದು ಮಹಿಳೆಯರ ಸುರಕ್ಷತೆಗೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಮಹಿಳೆಯರು, ಯುವತಿಯರು ಮತ್ತು ಪುರುಷರು ಸುರಕ್ಷ ಆ್ಯಪ್ ಬಳಸಿ. ನಿಮಗೆ ಸಮಸ್ಯೆ  ಎದುರಾದಾಗ ಆ್ಯಪ್ ನಿಮಗೆ ಸಹಾಯ ಮಾಡುತ್ತೆ. ಒಂದು ಬಟನ್ ಪ್ರೆಸ್ ಮಾಡುವುದರಿಂದ ಪೊಲೀಸರು ಬರ್ತಾರೆ. ಕ್ಯಾಮರಾ ಆನ್ ಆಗುತ್ತೆ. ಕಂಟ್ರೋಲ್‌ ರೂಮ್​ನಲ್ಲಿ ನಿಮಗೆ ಏನಾಗಿದೆ ಅನ್ನೋದು ಗೊತ್ತಾಗುತ್ತೆ. ಎಲ್ಲರು ಇದನ್ನು ಬಳಸಿ ಸುರಕ್ಷತೆ ಕಾಪಾಡಬೇಕು ಎಂದು ಸುರಕ್ಷ ಆ್ಯಪ್ ಬಳಸುವಂತೆ ಅವರು ಕರೆ ನೀಡಿದ್ದಾರೆ. https://www.facebook.com/BlrCityPolice/posts/2887850141249730

Published On - 11:34 am, Mon, 2 December 19

ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ