ನಕಲಿ ಅಂಕಪಟ್ಟಿ ನೀಡಿ ಉದ್ಯೋಗ ಗಿಟ್ಟಿಸಿಕೊಂಡಿದ್ದವ ಸೇರಿ ನಾಲ್ವರ ಸೆರೆ
ಧಾರವಾಡ: ನಕಲಿ ಅಂಕಪಟ್ಟಿ ನೀಡಿ ಕಿರಿಯ ಲೈನ್‌ಮನ್ ನೌಕರಿ ಗಿಟ್ಟಿಸಿಕೊಂಡಿದ್ದವರನ್ನು ಹಳೇ ಹುಬ್ಬಳ್ಳಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. 2017ರಲ್ಲಿ ಕಿರಿಯ ಲೈನ್‌ಮನ್ ಹುದ್ದೆ ನೇಮಕಾತಿ ಪ್ರಕ್ರಿಯೆ ನಡೆದಿತ್ತು. ಈ ವೇಳೆ ಎಸ್‌ಎಸ್‌ಎಲ್‌ಸಿ ನಕಲಿ ಅಂಕಪಟ್ಟಿ ನೀಡಿ ಹಾವೇರಿಯ ಹಾದ್ರಿಹಳ್ಳಿ ಗ್ರಾಮದ ನಿವಾಸೆ ಸಿದ್ದಪ್ಪ ಹೊನ್ನಪ್ಪ ಕೆಲಸಕ್ಕೆ ಸೇರಿಕೊಂಡಿದ್ದ. ಈತನಿಗೆ ಹಾದ್ರಿಹಳ್ಳಿ ಗ್ರಾಮದ ಶಿವಕುಮಾರ್ ಉಪ್ಪಾರ, ಕಲಬುರಗಿ ಜಿಲ್ಲೆ ಜೇವರ್ಗಿಯ ಕರಣಪ್ಪಗೌಡ ಹಾಗೂ ಕಲಬುರಗಿಯ ಶಿವಶರಣಪ್ಪ ಪಾಟೀಲ್ ಸಹಕರಿಸಿದ್ದರು. ಈ ಬಗ್ಗೆ ಅನುಮಾನಗೊಂಡ ಕೆಪಿಟಿಸಿಎಲ್ ಹುಬ್ಬಳ್ಳಿಯ ಕಾರ್ಯನಿರ್ವಾಹಕ ಅಭಿಯಂತರ […]
ಧಾರವಾಡ: ನಕಲಿ ಅಂಕಪಟ್ಟಿ ನೀಡಿ ಕಿರಿಯ ಲೈನ್‌ಮನ್ ನೌಕರಿ ಗಿಟ್ಟಿಸಿಕೊಂಡಿದ್ದವರನ್ನು ಹಳೇ ಹುಬ್ಬಳ್ಳಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
2017ರಲ್ಲಿ ಕಿರಿಯ ಲೈನ್‌ಮನ್ ಹುದ್ದೆ ನೇಮಕಾತಿ ಪ್ರಕ್ರಿಯೆ ನಡೆದಿತ್ತು. ಈ ವೇಳೆ ಎಸ್‌ಎಸ್‌ಎಲ್‌ಸಿ ನಕಲಿ ಅಂಕಪಟ್ಟಿ ನೀಡಿ ಹಾವೇರಿಯ ಹಾದ್ರಿಹಳ್ಳಿ ಗ್ರಾಮದ ನಿವಾಸೆ ಸಿದ್ದಪ್ಪ ಹೊನ್ನಪ್ಪ ಕೆಲಸಕ್ಕೆ ಸೇರಿಕೊಂಡಿದ್ದ. ಈತನಿಗೆ ಹಾದ್ರಿಹಳ್ಳಿ ಗ್ರಾಮದ ಶಿವಕುಮಾರ್ ಉಪ್ಪಾರ, ಕಲಬುರಗಿ ಜಿಲ್ಲೆ ಜೇವರ್ಗಿಯ ಕರಣಪ್ಪಗೌಡ ಹಾಗೂ ಕಲಬುರಗಿಯ ಶಿವಶರಣಪ್ಪ ಪಾಟೀಲ್ ಸಹಕರಿಸಿದ್ದರು.
ಈ ಬಗ್ಗೆ ಅನುಮಾನಗೊಂಡ ಕೆಪಿಟಿಸಿಎಲ್ ಹುಬ್ಬಳ್ಳಿಯ ಕಾರ್ಯನಿರ್ವಾಹಕ ಅಭಿಯಂತರ ಗಿರೀಶ್ ಕಮಶಿಕರ ಎಂಬುವರು ದೂರು ನೀಡಿದ್ದರು. ಪ್ರಕರಣದ ತನಿಖೆ ಆರಂಭಿಸಿದ ಹಳೇ ಹುಬ್ಬಳ್ಳಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.