ಮಂಗಳೂರು: ವಿಧಾನಸಭೆ ಪ್ರತಿಪಕ್ಷದ ನಾಯಕ, ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ದೊಡ್ಡ ಭಯೋತ್ಪಾದಕ ಎಂದು ಅನಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ. ಆರ್.ಎಸ್.ಎಸ್. ಕುರಿತಾದ ಮಾಜಿ ಸಿಂಎ ಸಿದ್ದರಾಮಯ್ಯ ಅವರ ಇತ್ತೀಚಿನ ಹೇಳಿಕೆಗೆ ನಳಿನ್ ಕುಮಾರ್ ಕಟೀಲು ಹೀಗೆ ಪ್ರತ್ರಿಕ್ರಿಯೆ ನೀಡಿದ್ದಾರೆ.
ಸಿದ್ದರಾಮಯ್ಯ ಒಬ್ಬ ದೊಡ್ಡ ಭಯೋತ್ಪಾದಕ ಅನ್ನೋದು ನನಗೆ ಅನಿಸುತ್ತೆ. ಸಿದ್ದರಾಮಯ್ಯ ಅತಂತ್ರ ಸ್ಥಿತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯರದ್ದು ತಾಲಿಬಾನ್ ಸಂಸ್ಕೃತಿ. ಅವರು ಸಿಎಂ ಆಗಿದ್ದಾಗ ಅತೀ ಹೆಚ್ಚು ಹತ್ಯೆಗಳು ನಡೆದಿವೆ. 24ಕ್ಕೂ ಹೆಚ್ಚು ಹಿಂದೂಗಳ ಹತ್ಯೆಗಳು ಆಗಿತ್ತು. ಅವರ ಕಾಲಘಟ್ಟದಲ್ಲೇ ಅತೀ ಹೆಚ್ಚು ನಡೆದಿದೆ, ಅದಕ್ಕೆ ಹೇಳಿದ್ದು ಅವರದ್ದು ತಾಲಿಬಾನ್ ಸಂಸ್ಕೃತಿ, ಅವರೇ ಭಯೋತ್ಪಾದಕ ಅಂತ. ಕೊಲೆ, ಸುಲಿಗೆ, ಗೋಹತ್ಯೆ ಅವರ ಕಾಲದಲ್ಲೇ ಹೆಚ್ಚು ನಡೆದಿರುವಾಗ ಅವರಿಗೆ ನಮ್ಮ ಬಗ್ಗೆ ಕೇಳುವುದಕ್ಕೆ ನೈತಿಕತೆ ಎಲ್ಲಿದೆ ಎಂದು ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಈಗ ಮುಳುಗಿದ ಹಡಗು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಅನ್ನೋ ವಿಶ್ವಾಸ ಜನರಿಗಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷದ ಹತ್ತಾರು ಜನ ಬಿಜೆಪಿ ಸೇರಲು ಸಿದ್ದತೆ ಮಾಡಿದ್ದಾರೆ. ಕಾಂಗ್ರೆಸ್‌ನ ಹತ್ತಾರು ಶಾಸಕರ ಸಹಿತ ಕೆಲ ಪ್ರಮುಖರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪುನರುಚ್ಚರಿಸಿದರು.
ಇದನ್ನೂ ಓದಿ:
ಹಳೆಯದನ್ನೆಲ್ಲ ನೆನೆದು ಸಿದ್ದರಾಮಯ್ಯ ವಿರುದ್ಧ ಕೆಂಡ ಕಾರಿದರು ಜೆಡಿಎಸ್ ಪಿತಾಮಹ ಹೆಚ್ ಡಿ ದೇವೇಗೌಡ !
ಇದನ್ನೂ ಓದಿ:
ವಿಧಾನ ಸಭೆಯಲ್ಲಿ ಪಂಚೆ ಬೀಳಿಸಿಕೊಂಡ ಸಿದ್ದರಾಮಯ್ಯ: ಮುಂದೇನಾಯ್ತು?
(It seems siddaramaiah is a terrorist describes karnataka bjp chief nalin kumar kateel)
Published On - 12:37 pm, Wed, 29 September 21