AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನ ಸಭೆಯಲ್ಲಿ ಪಂಚೆ ಬೀಳಿಸಿಕೊಂಡ ಸಿದ್ದರಾಮಯ್ಯ: ಮುಂದೇನಾಯ್ತು?

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಗ್ಯಾಂಗ್​ ರೆಪ್​ ಬಗ್ಗೆ ಮಾತನಾಡುವಾಗ ವಿಧಾನಸಭೆಯಲ್ಲಿ ವಿಶೇಷ ಪ್ರಸಂಗವೊಂದು ನಡೆಯಿತು. ಪ್ರಕರಣದ ಬಗ್ಗೆ ಸಿದ್ದರಾಮಯ್ಯ ಅವರು ಮಾತನಾಡುವಾಗ ಸದನದಲ್ಲಿ ಸಿದ್ದರಾಮಯ್ಯ ತಮ್ಮ ಪಂಚೆ ಬೀಳಿಸಿಕೊಂಡರು.

ವಿಧಾನ ಸಭೆಯಲ್ಲಿ ಪಂಚೆ ಬೀಳಿಸಿಕೊಂಡ ಸಿದ್ದರಾಮಯ್ಯ: ಮುಂದೇನಾಯ್ತು?
ಸಿದ್ದರಾಮಯ್ಯ
TV9 Web
| Edited By: ಸಾಧು ಶ್ರೀನಾಥ್​|

Updated on:Sep 22, 2021 | 1:43 PM

Share

ಬೆಂಗಳೂರು: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಗ್ಯಾಂಗ್​ ರೆಪ್​ ಬಗ್ಗೆ ಮಾತನಾಡುವಾಗ ವಿಧಾನಸಭೆಯಲ್ಲಿ ವಿಶೇಷ ಪ್ರಸಂಗವೊಂದು ನಡೆಯಿತು. ಪ್ರಕರಣದ ಬಗ್ಗೆ ಸಿದ್ದರಾಮಯ್ಯ ಅವರು ಮಾತನಾಡುವಾಗ ಸದನದಲ್ಲಿ ಸಿದ್ದರಾಮಯ್ಯ ತಮ್ಮ ಪಂಚೆ ಬೀಳಿಸಿಕೊಂಡರು.

ತಕ್ಷಣ ಅವರ ನೆರವಿಗೆ ಬಂದ ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯ ಬಳಿ ಬಂದು ಪಂಚೆ ಕಳಚಿದೆ ಎಂದು ಸಿದ್ದರಾಮಯ್ಯ ಕಿವಿಯಲ್ಲಿ ಹೇಳಿದರು. ಆಗ ಸ್ವಲ್ಪ ಪಂಚೆ ಕಳಚಿಕೊಂಡಿದೆ ಸರಿಮಾಡಿಕೊಂಡು ಮಾತನಾಡುತ್ತೇನೆ. ಪಂಚೆ ಕಳಚಿಕೊಂಡಿದೆ ಈಶ್ವರಪ್ಪ ಏಕೋ ದಪ್ಪವಾಗಿದ್ದೇನೆ ಎಂದು ತಮ್ಮ ಆರೋಗ್ಯದ ಬಗ್ಗೆ ಹೇಳಿದರು.

ಮೈಸೂರು ರೇಪ್ ಪ್ರಕರಣ ಚರ್ಚೆ ವೇಳೆ ಸದನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪಂಚೆ ಬಿಚ್ಚಿಕೊಂಡಿತು. ಸಿದ್ದರಾಮಯ್ಯ ಪಂಚೆ ಜಾರಿದ್ದನ್ನು ಗಮನಿಸಿದ ಡಿ.ಕೆ. ಶಿವಕುಮಾರ್ ತಕ್ಷಣ ಸಿದ್ದರಾಮಯ್ಯ ಹತ್ತಿರ ಬಂದು ಕಿವಿಯಲ್ಲಿ ಹೇಳಿದರು. ನಂತರ ಸಿದ್ದರಾಮಯ್ಯ ಕುಳಿತುಕೊಂಡು ಪಂಚೆ ಕಟ್ಟಿಕೊಂಡರು.

ಆ ವೇಳೆ ಸಿದ್ದರಾಮಯ್ಯ ಅವರು ನಗುನಗುತಾ ಪಂಚೆ ಬಿಚ್ಚಿ ಹೋಗಿದೆ, ಸರಿ ಮಾಡಿಕೊಳ್ಳುತ್ತೇನೆ, ಈಶ್ವರಪ್ಪಾ ಪಂಚೆ ಬಿಚ್ಚಿ ಹೋಗಿದೆ ಎಂದರು. ಇದನ್ನೆಲ್ಲಾ ಗಮನಿಸಿದ ರಮೇಶ್ ಕುಮಾರ್ ನಮ್ಮ ಅಧ್ಯಕ್ಷರು ಪಂಚೆ ಬಿಚ್ಚಿದ್ದನ್ನು ಕಿವಿಯಲ್ಲಿ ಬಂದು ಹೇಳಿದರೆ, ಇವರು ಅದನ್ನು ಊರಿಗೆಲ್ಲಾ ಹೇಳಿದರು ಎಂದರು.

ಮೊದಲು ಪಂಚೆ ಕಟ್ಟಿದರೆ ಬಿಚ್ಚಿಕೊಳ್ಳುತ್ತಿರಲಿಲ್ಲ,‌ ಈಗ ಕೊರೋನಾ‌ ಬಂದ ಬಳಿಕ ಬೊಜ್ಜು ಜಾಸ್ತಿ ಬಂದಿದೆ, ಪಂಚೆ ಬಿಚ್ಚಿಕೊಳ್ಳುತ್ತದೆ, ಅದಕ್ಕೆ ಯಾವಾಗಲೂ ಜುಬ್ಬಾ ಹಾಕಿಕೊಳ್ಳೋದು ಎಂದರು ಸಿದ್ದರಾಮಯ್ಯ. ಬಹಳಷ್ಟು ಮಂದಿ ನಿಲುವಂಗಿ ಹಾಕಿಕೊಳ್ಳುತ್ತಾರೆ. ಇದರಿಂದ ಪಂಚೆನೂ ಬೇಕಿಲ್ಲ, ಪ್ಯಾಂಟ್ ಕೂಡ ಬೇಕಿಲ್ಲ ಎಂದು ಪಂಚೆಯ ಬಗ್ಗೆ ಸಿದ್ದರಾಮಯ್ಯ ತಮ್ಮ ವಿಶೇಷ ವಿಶ್ಲೇಷಣೆ ನೀಡಿ, ಪ್ರಸಂಗ ಕೊನೆಗಾಣಿಸಿದರು.

ಸದನದಲ್ಲಿ ಸಿದ್ದರಾಮಯ್ಯ ಪಂಚೆ ಪುರಾಣ.. ಪಂಚೆ ಬಿಚ್ಚೋಗಿದೆ ನೋಡಿ ಸರ್ ಎಂದ ಡಿಕೆಶಿ | Siddaramaiah in Session |

(Opposition leader siddaramaiah dhoti loses in assembly session)

Published On - 1:34 pm, Wed, 22 September 21

Follow Us
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ