ಶಾಲಾ ಕಾಲೇಜು ಪ್ರಾರಂಭ ಆದರೂ ಬಸ್ಗಳನ್ನು ಬಿಟ್ಟಿಲ್ಲ ವಿಧಾನಸಭೆಯಲ್ಲಿ ಬೇಲೂರು ಶಾಸಕ ಪ್ರಸ್ತಾಪ, ಇದಕ್ಕೆ ಸಾರಿಗೆ ಸಚಿವರು ನೀಡಿದ ಉತ್ತರ ಏನು?
ಮಲೆನಾಡು ಭಾಗದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗ್ತಿದೆ, ಕಾಡು ಪ್ರಾಣಿಗಳ ಹಾವಳಿ ಇದೆ. ಈ ನಡುವೆ ವಿದ್ಯಾರ್ಥಿಗಳು ಬಸ್ಗಳಿಲ್ಲದೆ ಹೇಗೆ ಕಾಲೇಜುಗಳಿಗೆ ಹೋಗ್ತಾರೆ ಎಂದು ಬೇಲೂರು ಶಾಸಕ ಲಿಂಗೇಶ್ ಪ್ರಸ್ತಾಪಿಸಿದ್ದಾರೆ.
ಬೆಂಗಳೂರು: ಶಾಲಾ ಕಾಲೇಜು ಪ್ರಾರಂಭ ಆದರೂ ಬಸ್ಗಳನ್ನು ಇನ್ನೂ ಬಿಟ್ಟಿಲ್ಲ ಎಂದು ಬೇಲೂರು ಶಾಸಕ ಲಿಂಗೇಶ್ ಇಂದು ನಡೆದ ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ್ದಾರೆ. ಮಲೆನಾಡು ಭಾಗದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗ್ತಿದೆ, ಕಾಡು ಪ್ರಾಣಿಗಳ ಹಾವಳಿ ಇದೆ. ಈ ನಡುವೆ ವಿದ್ಯಾರ್ಥಿಗಳು ಬಸ್ಗಳಿಲ್ಲದೆ ಹೇಗೆ ಕಾಲೇಜುಗಳಿಗೆ ಹೋಗ್ತಾರೆ ಎಂದು ಪ್ರಸ್ತಾಪಿಸಿದ್ದಾರೆ.
ಇನ್ನು ಇದಕ್ಕೆ ಸಾರಿಗೆ ಸಚಿವ ಶ್ರೀರಾಮುಲು ಉತ್ತರಿಸಿದ್ದು, ಹಾಸನದಲ್ಲಿ 9 ಡಿಪೋಗಳಿವೆ. ಅಲ್ಲಿ ಒಟ್ಟು 696 ಬಸ್ಗಳಿವೆ. 59 ಬಸ್ಸುಗಳು ಓಡಾಡ್ತಿರಲಿಲ್ಲ. ಇದೀಗ ಅವುಗಳನ್ನು ಕೂಡಲೇ ಓಡಾಡಲು ಕ್ರಮ ವಹಿಸುತ್ತೇವೆ. ಮೊದಲ ಆದ್ಯತೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಇಷ್ಟು ದಿನ ಕೊವಿಡ್ ಇರುವ ಕಾರಣ ನಿಲ್ಲಿಸಿರೋದು ಸತ್ಯ, ಇದೀಗ ಬಸ್ಸುಗಳು ಓಡಾಡೋ ರೀತಿ ಮಾಡ್ತೇವೆ ಎಂದರು.
ಇದೇ ವೇಳೆ ಸಾರಿಗೆ ನೌಕರರ ಮುಷ್ಕರ ಆಗದಂತೆ ಸಾರಿಗೆ ಇಲಾಖೆ ನೋಡಿಕೊಳ್ಳಬೇಕಿತ್ತು, ಮುಷ್ಕರ ಮಾಡಿದವರ ಮೇಲೆ ಕ್ರಮ ತೆಗೆದುಕೊಂಡಿದ್ದಕ್ಕೆ ಅವರ ಜೀವನ ದುಸ್ಥರ ಆಗಿದೆ, ಮುಗ್ಧರ ಮೇಲೆ ಕ್ರಮ ಕೈಗೊಳ್ಳಬಾರದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಸ್ತಾಪ ಮಾಡಿದ್ರು.
ಇದಕ್ಕೆ ಉತ್ತರಿಸಿದ ಸಾರಿಗೆ ಸಚಿವ ಶ್ರೀರಾಮಲು, ಮುಷ್ಕರ ಸಮಯದಲ್ಲಿ 6644 ಸಾವಿರ ಪ್ರಕರಣ ದಾಖಲಾಗಿತ್ತು, ಕೆಲವರ ಸಸ್ಪೆಂಡ್, ಕೆಲವರ ವರ್ಗಾವಣೆ ಈ ರೀತಿ ದಾಖಲಾಗಿದೆ. ಅವರ ಯುನಿಯನ್ ಜೊತೆ, ಎಂಡಿಗಳ ಜೊತೆ ಮಾತಾಡಿದ್ದೇನೆ, ಬಿಎಂಟಿಸಿಯಲ್ಲಿ 3.500 ಪ್ರಕರಣ ದಾಖಲಾಗಿತ್ತು. 2100 ಕೇಸ್ ಬೇರೆ ಪ್ರಕರಣಗಳಲ್ಲಿ ದಾಖಲೆ ಆಗಿದೆ. ಆ ಕೇಸ್ ವಾಪಸ್ ಪಡೆಯುವ ಕೆಲಸ ಮಾಡುತ್ತೇವೆ ಎಂದರು.
ಇದನ್ನೂ ಓದಿ: ವಿಧಾನಸಭೆಯಲ್ಲಿ ಚಾಣಕ್ಯ ವಿವಿ ವಿಧೇಯಕ ಅಂಗೀಕಾರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರೋಧ