ಮುನಿಸಿಕೊಂಡಿದ್ದ ಜಗದೀಶ್ ಶೆಟ್ಟರ್ ವಾಪಸ್ಸು ಕರೆತಂದ ಹೈಕಮಾಂಡ್ ತೀರ್ಪನ್ನು ಸ್ವಾಗತಿಸುತ್ತೇನೆ: ವಿ ಸೋಮಣ್ಣ
ಇವತ್ತಿನ ರಾಜಕೀಯ ವಿದ್ಯಮಾನಗಳಲ್ಲಿ ಸಮುದಾಯಗಳ ವೋಟು ಮುಖ್ಯವಲ್ಲ, ದೇಶಕ್ಕೆ ಯಾವ ಪಕ್ಷ ಮತ್ತು ಯಾರ ಮುಂದಾಳತ್ವದ ಅವಶ್ಯಕತೆ ಇದೆ ಅನ್ನೋದು ಮುಖ್ಯ, ಅದನ್ನು ದೇಶದ 142 ಕೋಟಿ ಜನ ಈಗಾಗಲೇ ನಿರ್ಧರಿಸಿದ್ದಾರೆ. ದೇಶದ ಸರ್ವಾಂಗೀಣ ಅಭಿವೃದ್ಧಿ ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಸಾಧ್ಯ ಅನ್ನೋದು ಅವರಿಗೆ ಮನವರಿಕೆಯಾಗಿದೆ ಎಂದು ಸೋಮಣ್ಣ ಹೇಳಿದರು.
ಬೆಂಗಳೂರು: ರಾಜ್ಯದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಅವರ ಇಡೀ ಕುಟುಂಬ ಆರೆಸ್ಸೆಸ್ ನೊಂದಿಗೆ (RSS) ಬೆಳೆದು ಬಂದಿದೆ ಮತ್ತು ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡಿದೆ, ಅದ್ಯಾವುದೋ ಕಾರಣಕ್ಕೆ ಅವರು ಮುನಿಸಿಕೊಂಡು ಪಕ್ಷ ತೊರೆದು ಹೋದವರು ಈಗ ವಾಪಸ್ಸಾಗಿದ್ದಾರೆ, ಅವರನ್ನು ವಾಪಸ್ಸು ಕರೆತಂದ ಹೈಕಮಾಂಡ್ ನಿರ್ಧಾರ ಸ್ವಾಗತಿಸುತ್ತೇನೆ ಎಂದು ಹಿರಿಯ ಬಿಜೆಪಿ ನಾಯಕ ವಿ ಸೋಮಣ್ಣ (V Somanna) ಹೇಳಿದರು. ತಮ್ಮ ಕಚೇರಿಯಲ್ಲಿ ಇಂದು ಟಿವಿ9 ಬೆಂಗಳೂರು ವರದಿಗಾರನೊಂದಿಗೆ ಮಾತುಕತೆ ನಡೆಸಿದ ಸೋಮಣ್ಣ, ಇವತ್ತಿನ ರಾಜಕೀಯ ವಿದ್ಯಮಾನಗಳಲ್ಲಿ ಸಮುದಾಯಗಳ ವೋಟು ಮುಖ್ಯವಲ್ಲ, ದೇಶಕ್ಕೆ ಯಾವ ಪಕ್ಷ ಮತ್ತು ಯಾರ ಮುಂದಾಳತ್ವದ ಅವಶ್ಯಕತೆ ಇದೆ ಅನ್ನೋದು ಮುಖ್ಯ, ಅದನ್ನು ದೇಶದ 142 ಕೋಟಿ ಜನ ಈಗಾಗಲೇ ನಿರ್ಧರಿಸಿದ್ದಾರೆ. ದೇಶದ ಸರ್ವಾಂಗೀಣ ಅಭಿವೃದ್ಧಿ ಪ್ರಧಾನಿ ನರೇಂದ್ರ ಮೋದಿ ಅವರಿಂದಲೇ ಸಾಧ್ಯ ಅನ್ನೋದು ಅವರಿಗೆ ಮನವರಿಕೆಯಾಗಿದೆ ಎಂದು ಸೋಮಣ್ಣ ಹೇಳಿದರು. ಅಯೋಧ್ಯೆಯಲ್ಲಿ ರಾಮಮಂದಿರವನ್ನು ನೋಡುವುದು ಭಾರತೀಯ ಶತಮಾನಗಳ ಕನಸನ್ನು ಪ್ರಧಾನಿ ಮೋದಿ ಸಾಕಾರಗೊಳಿಸಿದ್ದಾರೆ, ಯಾರಿಂದಲೂ ಸಾಧ್ಯವಾಗದ್ದನ್ನು ಸಾಧಿಸಿ ತೋರಿಸಿದ್ದಾರೆ ಎಂದು ಮಾಜಿ ಸಚಿವ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ