ಸೋಮಣ್ಣ ಬೆನ್ನಲ್ಲೇ ಕುಮಾರಸ್ವಾಮಿ ಭೇಟಿಯಾದ ಬಿಜೆಪಿ ನಾಯಕ ಸಿಟಿ ರವಿ; ಕುತೂಹಲ ಮೂಡಿಸಿದ ಭೇಟಿ

ಇತ್ತೀಚೆಗಷ್ಟೇ ಬಿಜೆಪಿ ನಾಯಕ ವಿ ಸೋಮಣ್ಣ ಅವರು ಜೆಡಿಎಸ್ ವರಷ್ಠ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿರುವ ಸಿ.ಟಿ.ರವಿ‌ ಅವರು ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದು, ಇದು ಸೌಹಾರ್ದಯುತವಾಗಿ ಭೇಟಿಯಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಸೋಮಣ್ಣ ಬೆನ್ನಲ್ಲೇ ಕುಮಾರಸ್ವಾಮಿ ಭೇಟಿಯಾದ ಬಿಜೆಪಿ ನಾಯಕ ಸಿಟಿ ರವಿ; ಕುತೂಹಲ ಮೂಡಿಸಿದ ಭೇಟಿ
ಹೆಚ್​ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾದ ಸಿಟಿ ರವಿ
Follow us
| Updated By: Rakesh Nayak Manchi

Updated on: Jan 07, 2024 | 5:25 PM

ಬೆಂಗಳೂರು, ಜ.7: ಇತ್ತೀಚೆಗಷ್ಟೇ ಬಿಜೆಪಿ ನಾಯಕ ವಿ ಸೋಮಣ್ಣ ಅವರು ಜೆಡಿಎಸ್ ವರಷ್ಠ, ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಅವರನ್ನು ಭೇಟಿಯಾಗಿ ತುಮಕೂರು ಹಾಗೂ ಬೆಂಗಳೂರು ಉತ್ತರ ಕ್ಷೇತ್ರದ ಬಗ್ಗೆ ಮಾತುಕತೆ ನಡೆಸಿದ್ದರು. ಇದರ ಬೆನ್ನಲ್ಲೇ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿರುವ ಬಿಜೆಪಿ ನಾಯಕ ಸಿ.ಟಿ.ರವಿ‌ (CT Ravi) ಅವರು ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದು, ಕುತೂಹಲ ಮೂಡಿಸಿದೆ.

ಬಳಿಕ ಮಾತನಾಡಿದ ಕುಮಾರಸ್ವಾಮಿ, ಕೃಷಿ ಇಲಾಖೆ ಕಾರ್ಯಕ್ರಮಕ್ಕೆ ಬಂದವರು ನಮ್ಮ ಮನೆಗೆ ಬಂದಿದ್ದಾರೆ. ಇದು ಸೌಹಾರ್ದಯುತವಾಗಿ ಭೇಟಿಯಾಗಿದೆ ಎಂದರು. ಕೊಬ್ಬರಿ ಬೆಳೆಗೆ ಇರುವ ಸಮಸ್ಯೆಗಳಿಂದ ರಾಜ್ಯದ ರೈತರು ನಿರಾಶೆಯಲ್ಲಿದ್ದಾರೆ. ಪ್ರಧಾನಿ ಭೇಟಿ ಸಂದರ್ಭದಲ್ಲಿ 250 ರೂ. ಹೆಚ್ಚಳಕ್ಕೆ ಮನವಿ ಮಾಡಿದ್ದೆವು. ಹಲವು ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಕಾಡುಗೊಲ್ಲ ಸಮುದಾಯದ ಬೇಡಿಕೆ ಬಗ್ಗೆಯೂ ಚರ್ಚೆ ಮಾಡಿದ್ದೇವೆ ಎಂದರು.

ಸಿಟಿ ರವಿ ಟ್ವೀಟ್

ರಾಜ್ಯ ಕಾಂಗ್ರೆಸ್ ನಾಯಕರ ದುರಹಂಕಾರಕ್ಕೆ ಕಡಿವಾಣ ಹಾಕಬೇಕಿದೆ ಎಂದು ಹೇಳಿದ ಕುಮಾರಸ್ವಾಮಿ, ನಾನು ಕೇಂದ್ರ ಸಚಿವ ಸ್ಥಾನದ ಬಗ್ಗೆ ಚಿಂತನೆ ಮಾಡಿಲ್ಲ. ರಾಜ್ಯದಲ್ಲಿ 28 ಸ್ಥಾನಗಳನ್ನೂ ಗೆಲ್ಲಬೇಕು ಎಂಬುದಷ್ಟೇ ನಮ್ಮ ಯೋಚನೆ. ಈಗ ಕೇಂದ್ರದ ಸಚಿವರಾಗಿ ಏನು ಮಾಡುವುದು ಇದೆ? ನಾನಂತೂ ಆ ಬಗ್ಗೆ ಯೋಚನೆ ಮಾಡಿಲ್ಲ, ನನಗೆ ಮಾಹಿತಿಯೂ ಇಲ್ಲ ಎಂದರು.

ಜೆಡಿಎಸ್ ಮುಗಿಸುವುದಷ್ಟೇ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಉದ್ದೇಶ

ಜೆಡಿಎಸ್ ಮುಗಿಸುವುದಷ್ಟೇ ಸಿದ್ದರಾಮಯ್ಯ, ಡಿಕೆ ಉದ್ದೇಶ ತಾನೇ ಎಂದು ಕೇಳಿದ ಕುಮಾರಸ್ವಾಮಿ, ವಿರೋಧಿಗಳಿಗೂ ಸಹ ದೇವೇಗೌಡರು ಎಂದೂ ಶಾಪ ಕೊಟ್ಟವರಲ್ಲ. ನಡವಳಿಕೆ ಸಮಾಪ್ತಿ ಮಾಡುತ್ತಾರೆ ಅಷ್ಟೇ ಎಂದು ದೇವೇಗೌಡರು ಹೇಳಿದ್ದಾರೆ. ನಾಡಿನ ಜನ ಕಾಂಗ್ರೆಸ್​​ನ ನಡವಳಿಕೆ ಸಮಾಪ್ತಿ ಮಾಡುತ್ತಾರೆ ಅಂತಾ ಹೇಳಿದ್ದಾರೆ ಎಂದರು.

ಇದನ್ನೂ ಓದಿ: ಪ್ರತಾಪ್ ಸಿಂಹ ಮುಗಿಸಲು ಹೂಡಿದ ಟರ್ಮಿನೇಟರ್ ಸಿನಿಮಾಕ್ಕೆ ಚಿತ್ರಕಥೆ, ಸಂಭಾಷಣೆ ಎಲ್ಲವೂ ಸಿದ್ದರಾಮಣ್ಣಂದೇ: ಕುಮಾರಸ್ವಾಮಿ ವ್ಯಂಗ್ಯ

ಕೆಪಿಸಿಸಿ ಅಧ್ಯಕ್ಷರು ಕಾಂಗ್ರೆಸ್​​ಗೆ 135 ವರ್ಷಗಳ ಇತಿಹಾಸವಿದೆ ಅಂದಿದ್ದಾರೆ. ಈಗಿನ ಇತಿಹಾಸ? ಗಾಂಧೀಜಿ ಕಟ್ಟಿದ ಕಾಂಗ್ರೆಸ್​ನ ಆಗಿನ ಇತಿಹಾಸ ಬೇರೆ. ಈಸ್ಟ್ ಇಂಡಿಯಾ ಕಂಪನಿಯವರ ರೀತಿ ದರೋಡೆ ಮುಂದುವರಿಸಿದ್ದಾರೆ. ಈಗಿನ ಕಾಂಗ್ರೆಸ್​ನವರು ದರೋಡೆ ಮುಂದುವರಿಸಿಕೊಂಡು ಹೋಗಿದ್ದಾರೆ. ಹಿಂದಿನ ಕಾಂಗ್ರೆಸ್​​ ರಾಜಕಾರಣಿಗಳು ಆಸ್ತಿ ಮಾರಿ ಪಕ್ಷ, ದೇಶ ಕಟ್ಟಿದ್ದಾರೆ. ಆದರೆ ಈಗಿನವರು ಈಸ್ಟ್​ ಇಂಡಿಯಾ ಕಂಪನಿ ರೀತಿ ಲೂಟಿ ಮಾಡುತ್ತಿದ್ದಾರೆ ಎಂದರು.

ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆ ಹಲವಾರು ನಾಯಕರು ಭೇಟಿ ಆಗುತ್ತಿದ್ದಾರೆ. ಸೌಹಾರ್ದತೆಯಿಂದ ಕೆಲಸ ಮಾಡಬೇಕೆಂದು ಹಲವರು ಭೇಟಿ ಆಗಿದ್ದಾರೆ. ಅಗತ್ಯಬಿದ್ದರೆ ಬಿಜೆಪಿಯಲ್ಲಿ ಮುಂದುವರಿದರೆ ಸುಮಲತಾ ಭೇಟಿ ಆಗುತ್ತೇನೆ. ಎಲ್ಲಿ ಸ್ಪರ್ಧೆ ಮಾಡಬೇಕು ಎಂಬ ಬಗ್ಗೆ ನಾನು ಆಲೋಚನೆ ಮಾಡಿಲ್ಲ. ಕೆಲವರು ತುಮಕೂರು ಅಂತಿದ್ದೀರಿ, ಇನ್ನೂ ಕೆಲವರು ಮಂಡ್ಯ ಅಂತೀರಿ. ಬೆಂಗಳೂರು ಗ್ರಾಮಾಂತರದಲ್ಲಿ ಸ್ಪರ್ಧೆ ಮಾಡಬಹುದು ಅಂದ್ಕೊಂಡಿದ್ದಾರೆ. ನಾನು ಸ್ಪರ್ಧಿಸುತ್ತೇನೆ ಅಂದುಕೊಂಡು ಪಾಪ ಕೆಲವರು ನಿದ್ದೆಯೇ ಮಾಡುತ್ತಿಲ್ಲ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ