ಅಸಮಾಧಾನ ಪ್ರದರ್ಶಿಸುತ್ತಿರುವ ಎಲ್ಲ ನಾಯಕನ್ನು ಜೊತೆಗೂಡಿಸಿಕೊಂಡು ಚುನಾವಣೆಯಲ್ಲಿ ಸಾಮೂಹಿಕ ಹೋರಾಟ ನಡೆಸುತ್ತೇವೆ: ಸಿಟಿ ರವಿ

ಲೋಕಸಭಾ ಚುನಾವಣೆಯಲ್ಲಿ ಪ್ರತಿ ವೋಟು, ಪ್ರತಿ ಸೀಟಿನ ಜೊತೆ ಪ್ರತಿ ನಾಯಕ ಮುಖ್ಯವಾಗುತ್ತಾರೆ, ಸಮನ್ವಯತೆಯೊಂದಿಗೆ ಕೆಲಸ ಮಾಡಿದರೆ ತಾವಂದುಕೊಳ್ಳುವ ಫಲಿತಾಂಶ ಸಿಗುತ್ತದೆ ಎಂದು ರವಿ ಹೇಳುತ್ತಾರೆ. ಆದರೆ, ಬಸನಗೌಡ ಪಾಟೀಲ್ ಯತ್ನಾಳ್ ವಿಷಯದಲ್ಲಿ ಮಾತಡುವಾಗ ರವಿಯವರಲ್ಲಿ ಸ್ಪಷ್ಟತೆ ಮತ್ತು ನಿಖರತೆ ಕಾಣಿಸುವುದಿಲ್ಲ, ಸಂದಿಗ್ಧತೆಯೊಂದಿಗೆ ಮಾತಾಡುತ್ತಾರೆ.

ಅಸಮಾಧಾನ ಪ್ರದರ್ಶಿಸುತ್ತಿರುವ ಎಲ್ಲ ನಾಯಕನ್ನು ಜೊತೆಗೂಡಿಸಿಕೊಂಡು ಚುನಾವಣೆಯಲ್ಲಿ ಸಾಮೂಹಿಕ ಹೋರಾಟ ನಡೆಸುತ್ತೇವೆ: ಸಿಟಿ ರವಿ
|

Updated on: Jan 06, 2024 | 2:23 PM

ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಹಿರಿಯ ಬಿಜೆಪಿ ನಾಯಕ ಸಿಟಿ ರವಿ (CT Ravi) ರಾಜ್ಯ ಘಟಕದ ಕೆಲ ನಾಯಕರಲ್ಲಿರುವ ಅಸಮಾಧಾನ ಮತ್ತು ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಿ, ಲೋಕಸಭಾ ಚುನಾವಣೆಯಲ್ಲಿ (Lok Sabha polls) ಎಲ್ಲರೂ ಒಟ್ಟಿಗೆ ಕೆಲಸ ಮಾಡುವ ಸನ್ನಿವೇಶ ನಿರ್ಮಿಸಲಾಗುವುದು ಎಂದು ಹೇಳಿದರು. ಹಿರಿಯ ನಾಯಕರಾದ ವಿ ಸೋಮಣ್ಣ (V Somanna), ಅರವಿಂದ ಲಿಂಬಾವಳಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರೊಂದಿಗೆ ಮಾತಾಡಿ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮತ್ತು ಗೌರವಯುತವಾಗಿ ಕೆಲಸ ಮಾಡುವ ವಾತಾವರಣ ಸೃಷ್ಟಿಸಲಾಗುವುದು ಎಂದು ಹೇಳಿದ ಅವರು ಪಕ್ಷದ ಎಲ್ಲ ನಾಯಕರಿಗೆ ಈಗಾಗಲೇ ಜವಾಬ್ದಾರಿಗಳನ್ನು ವಹಿಸಲಾಗಿದೆ ಎಂದರು. ಪತ್ರಕರ್ತರು ಯತ್ನಾಳ್ ವಿಷಯಯವನ್ನು ಮತ್ತೊಮ್ಮೆ ಪ್ರಶ್ನಿಸಿ ಪಕ್ಷದ ಬೇರೆ ನಾಯಕರು ಹೆಣೆಯುವ ರಾಜೀಸೂತ್ರಗಳನ್ನು ಒಪ್ಪುತ್ತಾರೆಯೇ ಅಂತ ಕೇಳಿದಾಗ ರವಿಯವರು, ಯಾರೂ ಶೇಕಡ 100 ರಷ್ಟು ಪರಿಪೂರ್ಣರಾಗಿರುವುದಿಲ್ಲ, ಕೆಲವು ನೂನ್ಯತೆಗಳಿರುವುದು ಸಾಮಾನ್ಯ, ಜವಾಬ್ದಾರಿಗಳನ್ನು ಹೊತ್ತುಕೊಂಡು ಕೆಲಸ ಮಾಡಲು ಮನವೊಲಿಸಲಾಗುವುದು ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us