ಬೆಳಗಾವಿಯಲ್ಲೊಂದು ಮನೆ ಮಾಡಿ, ಯುಗಾದಿಯಂದು ಗೃಹ ಪ್ರವೇಶಿಸಿದ ಜಗದೀಶ್​ ಶೆಟ್ಟರ್ ಹೇಳಿದ್ದಿಷ್ಟು

| Updated By: ಗಂಗಾಧರ​ ಬ. ಸಾಬೋಜಿ

Updated on: Apr 09, 2024 | 3:00 PM

ಲೋಕಸಭೆ ಚುನಾವಣಾ ಹಿನ್ನಲೆ ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್​ ಶೆಟ್ಟರ್​ ಬೆಳಗಾವಿ ಕುಮಾರಸ್ವಾಮಿ ಲೇಔಟ್‌ನಲ್ಲಿ ಬಾಡಿಗೆ ಮನೆ ಮಾಡಿರುವ ಜಗದೀಶ್​ ಶೆಟ್ಟರ್​, ಯುಗಾದಿ ಹಬ್ಬದಂದೇ ಗೃಹ ಪ್ರವೇಶ ನೆರವೇರಿಸಿದ್ದಾರೆ. ಜಗದೀಶ್ ಶೆಟ್ಟರ್ ಹೊರಗಿನವರು, ವಿಳಾಸ ಹೇಳಲಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಸವಾಲು ಹಾಕಿದ್ದ ಬೆನ್ನಲ್ಲೇ ಇದೀಗ ಮನೆ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ. 

ಬೆಳಗಾವಿಯಲ್ಲೊಂದು ಮನೆ ಮಾಡಿ, ಯುಗಾದಿಯಂದು ಗೃಹ ಪ್ರವೇಶಿಸಿದ ಜಗದೀಶ್​ ಶೆಟ್ಟರ್ ಹೇಳಿದ್ದಿಷ್ಟು
ಗೃಹ ಪ್ರವೇಶ
Follow us on

ಬೆಳಗಾವಿ, ಏಪ್ರಿಲ್​ 09: ಲೋಕಸಭೆ ಚುನಾವಣಾ ಹೊತ್ತಲ್ಲಿ ಕಾಂಗ್ರೆಸ್‌ಗೆ ಶಾಕ್ ಕೊಟ್ಟಿದ್ದ ಮಾಜಿ ಸಿಎಂ ಜಗದೀಶ್​ ಶೆಟ್ಟರ್ (Jagadish Shettar) ಮರಳಿ ತಮ್ಮ ಗೂಡು ಸೇರಿಕೊಂಡಿದ್ದರು. ಆ ಮೂಲಕ ಬೆಳಗಾವಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಸಹ ಪಡೆದುಕೊಂಡಿದ್ದಾರೆ. ಇದೀಗ ಚುನಾವಣಾ ಹಿನ್ನೆಲೆ ಬೆಳಗಾವಿ ಕುಮಾರಸ್ವಾಮಿ ಲೇಔಟ್‌ನಲ್ಲಿ ಬಾಡಿಗೆ ಮನೆ ಮಾಡಿರುವ ಜಗದೀಶ್​ ಶೆಟ್ಟರ್​, ಯುಗಾದಿ ಹಬ್ಬದಂದೇ ಗೃಹ ಪ್ರವೇಶ ನೆರವೇರಿಸಿದ್ದಾರೆ. ಜಗದೀಶ್ ಶೆಟ್ಟರ್ ಹೊರಗಿನವರು, ವಿಳಾಸ ಹೇಳಲಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಸವಾಲು ಹಾಕಿದ್ದ ಬೆನ್ನಲ್ಲೇ ಇದೀಗ ಮನೆ ಮಾಡುವ ಮೂಲಕ ತಿರುಗೇಟು ನೀಡಿದಂತಿದೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಇಂದು ಯುಗಾದಿ ಹಿನ್ನೆಲೆ ಗೃಹ ಪ್ರವೇಶ ಮಾಡಿದ್ದೇನೆ. ಬೆಳಗಾವಿಯಲ್ಲಿ ನಾನು ಕಚೇರಿಯನ್ನೂ ತೆರೆಯುತ್ತೇನೆ. ವಿಪಕ್ಷದವರಿಗೆ ಉತ್ತರ ಕೊಡುವುದಕ್ಕೆ ಮನೆ ಮಾಡಿಲ್ಲ. ನಾನು ಮನೆ ಮಾಡುವುದಾಗಿ ಹೇಳಿದ್ದೆ, ಮಾಡಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜಗದೀಶ್ ಶೆಟ್ಟರ್​ಗೆ ಲೋಕಸಭಾ ಟಿಕೆಟ್ ಕನ್ಫರ್ಮ್: ಖಚಿತಪಡಿಸಿದ ಸಹೋದರ ಪ್ರದೀಪ್ ಶೆಟ್ಟರ್

ನಾನು ಕಾಂಗ್ರೆಸ್ ಪಕ್ಷಕ್ಕೆ ಹೋದಾಗ ಬಿಜೆಪಿ ಬೈದಿಲ್ಲ. ಪ್ರಧಾನಿ ಮೋದಿ, ಬಿಎಸ್​ ಯಡಿಯೂರಪ್ಪ, ಬಿಜೆಪಿ ಪಕ್ಷ ಟೀಕಿಸಿಲ್ಲ. ಸುಮ್ಮನೆ ಸುಳ್ಳು ಹೇಳಿಕೆ ನೀಡಬಾರದು. ನಾನು ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಟೀಕೆ ಮಾಡೋದಿಲ್ಲ. ಟೀಕಿಸಿದ್ರೆ ದೊಡ್ಡವರಾಗಬಹುದೆಂದು ಟೀಕಿಸ್ತಿರಬಹುದು. ಬೆಳಗಾವಿಯಲ್ಲಿ ನನಗೆ ನಿರೀಕ್ಷೆಗೂ ಮೀರಿ ಬೆಂಬಲ ಸಿಗ್ತಿದೆ. ಎಲ್ಲ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಬಲ ಸಿಗುತ್ತಿದೆ ಎಂದಿದ್ದಾರೆ.

ಇದು ಜಾತಿ ಧರ್ಮದ ಮೇಲೆ ನಡೆಯುವ ಚುನಾವಣೆ ಅಲ್ಲ: ಜಗದೀಶ್​ ಶೆಟ್ಟರ್

ಬೆಳಗಾವಿಯಲ್ಲಿ ಪಂಚಮಸಾಲಿ ವೋಟ್ ಪಾಲಿಟಿಕ್ಸ್ ವಿಚಾರವಾಗಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ರಾಷ್ಟ್ರೀಯ ವಿಚಾರಧಾರೆ ಮೇಲೆ ಚುನಾವಣಾ ಆಗುತ್ತೆ. ಇದು ಜಾತಿ ಧರ್ಮದ ಮೇಲೆ ನಡೆಯುವ ಚುನಾವಣೆ ಅಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಕ್ಷೇತ್ರದಲ್ಲಿ ನಾನು ನೂರಕ್ಕೆ ನೂರಷ್ಟು ಗೆಲ್ಲುತ್ತೇನೆ: ಜಗದೀಶ್ ಶೆಟ್ಟರ್

ವಿಧಾನಸಭೆ, ಜಿಲ್ಲಾ ಪಂಚಾಯತ್​, ತಾಲೂಕು ಪಂಚಾಯತ್​, ಪಂಚಾಯಿತಿ ಜಾತಿ ಸ್ಥಳೀಯ ನಾಯಕತ್ವ ಮೇಲೆ ನಡೆಯುತ್ತೆ. ಈ ಚುನಾವಣೆ ಜಾತಿ ಆಧಾರದ ಮೇಲೆ‌ ನಡೆಯಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 2:57 pm, Tue, 9 April 24