ಮೈಸೂರು: ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಎಚ್. ವಿಶ್ವನಾಥ್ ಅವರು ಸುದ್ದಿಗೋಷ್ಠಿ ನಡೆಸಿದ್ದು, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಅವರು ಮಾಜಿ ಪ್ರಧಾನಿ ನೆಹರು ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದಕ್ಕೆ ಖೇದ ವ್ಯಕ್ತಪಡಿಸಿದ್ದಾರೆ. ಜವಾಹರ ಲಾಲ್ ನೆಹರು ಅಧಿಕಾರದ ಅವಧಿಗಿಂತಾ ಹೆಚ್ಚಿನ ಅವಧಿ ಜೈಲಲ್ಲಿ ಕಳೆದರು. ಇಡೀ ಕುಟುಂಬವೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿತ್ತು. ಅವರ ಬಗ್ಗೆ ಸಿ.ಟಿ. ರವಿ ಅವರ ಅವಹೇಳನಕಾರಿ ಮಾತು ಯಾರೂ ಮೆಚ್ಚುವಂಥದಲ್ಲ ಎಂದು ಗುಡುಗಿದ್ದಾರೆ.
ಸಿ.ಟಿ. ರವಿಗೂ ಮತ್ತು ಬಿಜೆಪಿ ಗೂ ಈ ಮಾತು ಶೋಭೆ ತರುವುದಿಲ್ಲ. ಸಿ.ಟಿ. ರವಿ ಅವರು ನೆಹರು ಬಗ್ಗೆ ಓದಿಕೊಳ್ಳಬೇಕು. ವಾಜಪೇಯಿ ಅವರು ನೆಹರು (jawaharlal nehru) ನಿಧನರಾದಾಗ ಏನು ಭಾಷಣ ಮಾಡಿದ್ದರು ಎಂಬುದನ್ನು ಸಿ.ಟಿ. ರವಿ ಓದಿಕೊಳ್ಳಬೇಕು. ನೆಹರು ಅವರ ಬಗ್ಗೆ ವಾಜಪೇಯಿ ಅವರು ಚರಿತ್ರಾರ್ಹ ಭಾಷಣ ಮಾಡಿದ್ದಾರೆ. ನೆಹರು ಅವರ ಬಗ್ಗೆ ಇಷ್ಟು ಲಘುವಾಗಿ ಮಾತಾಡಬಾರದು. ನಿಮಗೆ ನೆಹರು ಬಗ್ಗೆ ಏನು ಗೊತ್ತಿದೆ? ಏನು ತಿಳಿದು ಕೊಂಡಿದ್ದೀರಿ? ಎಂದು ರವಿ (ct ravi) ಅವರನ್ನು ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಭಾರತದ ಅಸ್ಮಿತೆ ನೆಹರು ಭಾರತದ ಗರ್ವದ ಸಂಕೇತ. ಇಂತಹ ನೆಹರು ಬಗ್ಗೆ ನೀವು ಕೀಳಾಗಿ ಮಾತಾಡುವುದು ತಪ್ಪು. ಪ್ರಚಾರಕ್ಕಾಗಿ, ಯಾರನ್ನೋ ಓಲೈಸಲು ನೀವು ಈ ರೀತಿ ಮಾತಾಡಬೇಡಿ. ವಾಜಪೇಯಿ ಅವರನ್ನು ಕಾಂಗ್ರೆಸ್ ನಾಯಕರು ಕುಡುಕ ಎಂದಿದ್ದಾರೆ. ಇದೂ ಖಂಡನೀಯ. ನೆಹರು, ವಾಜಪೇಯಿ ಇಬ್ಬರೂ ಈ ದೇಶದ ಶ್ರೇಷ್ಠ ಆಡಳಿತಗಾರರು. ಪ್ರಿಯಾಂಕಾ ಖರ್ಗೆ ತಮ್ಮ ತಂದೆ ನೋಡಿ ಮಾತಾಡುವುದು ಕಲಿಯಲಿ. ಕರ್ನಾಟಕದಲ್ಲಿ ಐದು ಜನ ಮಾಜಿ ಸಿಎಂ ಗಳಿದ್ದಾರೆ. ನೀವು ಯಾಕೆ ಇದನ್ನು ಖಂಡಿಸುತ್ತಿಲ್ಲ? ನಿಮ್ಮ ಪಕ್ಷದ ನಾಯಕರಿಗೆ ಬಾಯಿ ಮುಚ್ಚಿಕೊಂಡಿರಿ ಎಂದು ಹೇಳುವಷ್ಟು ನೈತಿಕತೆ ಕಳೆದು ಕೊಂಡಿದ್ದೀರಾ? ರಾಜಕಾರಣವನ್ನು ಎಲ್ಲಿಗೆ ತಂದು ನಿಲ್ಲಿಸುತ್ತಿದ್ದಿರಿ? ನೆಹರು ಅವರ ತಂದೆ (Motilal Nehru) ತಮ್ಮ ಇಡೀ ಆಸ್ತಿಯನ್ನು ದೇಶಕ್ಕೆ ಬರೆದು ಕೊಟ್ಟರು. ಸಿ.ಟಿ. ರವಿ ಏನು ಕೊಟ್ಟಿದ್ದಾರೆ. ಐದು ಪೈಸೆಯನ್ನು ದೇಶಕ್ಕೆ ಕೊಟ್ಟಿದ್ದೀರಾ? ಎಂದು ವಿಶ್ವನಾಥ್ (h vishwanath) ಪ್ರಶ್ನಿಸಿದರು.
ಸಿದ್ದರಾಮಯ್ಯ ಬಾಯಲ್ಲಿ ಉಲ್ಟಾ ಮಚ್ಚೆ ಇದೆ; ಹೇಳಿದ್ದು ಉಲ್ಟಾ ಆಗುತ್ತೆ: ಸಿ ಟಿ ರವಿ
(jawaharlal nehru father donated entire property to the country whats ct ravi contribution asks h vishwanath)
Published On - 12:57 pm, Mon, 16 August 21