ಸಿದ್ದರಾಮಯ್ಯ ದಲಿತರ ಹೆಸರಲ್ಲಿ ಅಕ್ರಮ ಮಾಡಿರುವ ಮಾಹಿತಿ ನನ್ನ ಬಳಿ ಇದೆ; ಹೆಚ್.ಡಿ.ಕುಮಾರಸ್ವಾಮಿ

ಕಾಂತರಾಜು ಕೇವಲ ಠಸ್ಸೆ ಹೊಡೆದಿರುವುದಷ್ಟೇ. ಸಿದ್ದರಾಮಯ್ಯ ಕ್ರೆಡಿಟ್ ತೆಗೆದುಕೊಳ್ಳಲು ಹೊರಟಿದ್ದಾರೆ. ಜಾತಿಗಣತಿ ವರದಿ ಸ್ವೀಕರಿಸಲು ಸಿದ್ದರಾಮಯ್ಯ ಹೇಳಿದ್ರಾ? ನಾನು ಸಿಎಂ ಆಗಿದ್ದಾಗ ಸಿದ್ದರಾಮಯ್ಯ ನನಗೆ ಹೇಳಿದ್ರಾ? ಅಂತ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ದಲಿತರ ಹೆಸರಲ್ಲಿ ಅಕ್ರಮ ಮಾಡಿರುವ ಮಾಹಿತಿ ನನ್ನ ಬಳಿ ಇದೆ; ಹೆಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ
Follow us
| Updated By: sandhya thejappa

Updated on: Aug 16, 2021 | 12:25 PM

ರಾಮನಗರ: ಜಾತಿಗಣತಿ ವರದಿಯನ್ನ ಸಮ್ಮಿಶ್ರ ಸರ್ಕಾರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸ್ವೀಕರಿಸಲಿಲ್ಲ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಬೇರೆ ಕೆಲಸ ಇಲ್ಲ. ಅದು ಕಾಂತರಾಜು ಕೊಟ್ಟಿರುವಂತಹ ಜಾತಿಗಣತಿ ಅಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯ ಕೊಟ್ಟಿರುವ ಜಾತಿಗಣತಿ. ನಾನು ಕೂಡ ದೊಡ್ಡ ಮಟ್ಟದಲ್ಲಿ ರಾಜಕೀಯ ಬೆರೆಸಬಲ್ಲೆ. ಸಿದ್ದರಾಮಯ್ಯನವರು ಬರೆಸಿರುವ ವರದಿ ಅದು ಅಂತ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಕಾಂತರಾಜು ಕೇವಲ ಠಸ್ಸೆ ಹೊಡೆದಿರುವುದಷ್ಟೇ. ಸಿದ್ದರಾಮಯ್ಯ ಕ್ರೆಡಿಟ್ ತೆಗೆದುಕೊಳ್ಳಲು ಹೊರಟಿದ್ದಾರೆ. ಜಾತಿಗಣತಿ ವರದಿ ಸ್ವೀಕರಿಸಲು ಸಿದ್ದರಾಮಯ್ಯ ಹೇಳಿದ್ರಾ? ನಾನು ಸಿಎಂ ಆಗಿದ್ದಾಗ ಸಿದ್ದರಾಮಯ್ಯ ನನಗೆ ಹೇಳಿದ್ರಾ? ಅಂತ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ನಾನು ಸಿಎಂ ಆಗಿದ್ದಾಗ ಯಾರೂ ನನ್ನ ಗಮನಕ್ಕೆ ತಂದಿಲ್ಲ. ಈಗ ಸುಳ್ಳು ಹೇಳಿದ್ರೆ ನಾನು ಏನೂ ಮಾಡುವುದಕ್ಕೆ ಆಗುತ್ತೆ? ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಈಗ ರಾಜಕೀಯ ಬೇಕು. ಹೀಗಾಗಿ ದಲಿತ, ಹಿಂದುಳಿದವರ ಬಗ್ಗೆ ಚರ್ಚೆ ಮಾಡುತ್ತಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಎಷ್ಟು ರಕ್ಷಣೆ ಕೊಟ್ಟಿದ್ದಾರೆ. ದಲಿತರು, ಹಿಂದುಳಿದವರಿಗೆ ಎಷ್ಟು ರಕ್ಷಣೆ ಕೊಟ್ಟಿದ್ದಾರೆ ಎಂದು ಹೆಚ್ಡಿಕೆ ಪ್ರಶ್ನಿಸಿದ್ದಾರೆ.

ದಲಿತರಿಗೆ ಕೊಡಬೇಕಾಗಿದ್ದ ಮನೆಗಳನ್ನು ರದ್ದು ಮಾಡಿದ್ದರು. ಆ ಮನೆಗಳನ್ನು ಬೇರೆ ಸಮುದಾಯಕ್ಕೆ ಕೊಟ್ಟಿದ್ದಾರೆ. ದಲಿತರ ಹೆಸರಲ್ಲಿ ಏನು ಅಕ್ರಮ ಮಾಡಿದ್ದಾರೆಂದು ಮಾಹಿತಿ ಇದೆ ಎಂದು ಹೇಳಿಕೆ ನೀಡಿದ ಕುಮಾರಸ್ವಾಮಿ, ಸಿದ್ದರಾಮಯ್ಯ ಒಬ್ಬರೇ ಅಲ್ಲ ಅಹಿಂದ ಉಳಿಸುವವರು. ಅಹಿಂದ ಉಳಿಸಲು ಬಹಳ ಜನ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಟಿಫಿಕೇಟ್ ತೆಗೆದುಕೊಳ್ಳಲು ಹೊರಟಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ

ಬೆಂಗಳೂರಿಗೆ ಆಗಮಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಹಾರ ಹಾಕಿ, ಪುಸ್ತಕ ನೀಡಿ ಸಿಎಂ ಸ್ವಾಗತ

ಎಲ್ಲೋ ಅಪರಾಧ ನಡೆದರೆ ಮೊದಲು ನಾವೇ ಟಾರ್ಗೆಟ್; 75 ವರ್ಷ ಕಳೆದರೂ ಪೊಲೀಸರಿಂದ ನಮಗೆ ಸಿಕ್ಕಿಲ್ಲ ಸ್ವಾತಂತ್ರ್ಯ!

(I have information that is illegal in name of Dalits said HD Kumaraswamy)