ಕುಮಾರಸ್ವಾಮಿಗೂ ಹೇಮಾವತಿಗೂ ನಂಟು ಇನ್ನೂ ಇದ್ಯಾ -ಮಾಧುಸ್ವಾಮಿ ಪ್ರಶ್ನೆ

|

Updated on: Oct 22, 2019 | 7:22 PM

ಕೋಲಾರ: ಹಾಸನಕ್ಕೂ ಹೆಚ್​.ಡಿ.ಕುಮಾರಸ್ವಾಮಿ ಅವರಿಗೂ ಏನೂ ಸಂಬಂಧ? ಅವರು ಹಾಸನ ತ್ಯಜಿಸಿ ಎಷ್ಟು ವರ್ಷವಾಯ್ತು, ಕುಮಾರಸ್ವಾಮಿಗೂ ಹಾಸನಕ್ಕೂ ಇದ್ದ ನಂಟು ಹೋಗಿ ಬಹಳ ದಿನಗಳಾಗಿದೆ ಎಂದು ಸಚಿವ ಮಾಧುಸ್ವಾಮಿ ಕಿಡಿಕಾರಿದ್ದಾರೆ. ಕುಮಾರಸ್ವಾಮಿಗೆ ಹಾಸನ, ಹೇಮಾವತಿ ನಂಟು ಇನ್ನೂ ಇದ್ಯಾ? ಹಾಸನಕ್ಕೆ ಮಾಧುಸ್ವಾಮಿ ಕಾಟಾಚಾರಕ್ಕೆ ಬಂದು ಹೋಗುತ್ತಿದ್ದಾರೆ ಎಂದು ಹೆಚ್​ಡಿಕೆ ಹೇಳಿಕೆ ನೀಡಿದ್ದರು. ಈ ಸಂಬಂಧ ಪ್ರತಿಕ್ರಿಯಿಸಿದ ಅವರು, ನಾನು ಹಾಸನಕ್ಕೆ ಕೂಲಿ ಮಾಡಲು ಹೋಗ್ತಿಲ್ಲ, ಮಂತ್ರಿಗಿರಿ ಮಾಡಲು ಹೋಗ್ತಿದ್ದೇನೆ ಎಂದರು. ಕುಮಾರಸ್ವಾಮಿ ಏಕೆ ಹಾಸನದ ಬಗ್ಗೆ ಮಾತನಾಡುತ್ತಿದ್ದಾರೆ? […]

ಕುಮಾರಸ್ವಾಮಿಗೂ ಹೇಮಾವತಿಗೂ ನಂಟು ಇನ್ನೂ ಇದ್ಯಾ -ಮಾಧುಸ್ವಾಮಿ ಪ್ರಶ್ನೆ
Follow us on

ಕೋಲಾರ: ಹಾಸನಕ್ಕೂ ಹೆಚ್​.ಡಿ.ಕುಮಾರಸ್ವಾಮಿ ಅವರಿಗೂ ಏನೂ ಸಂಬಂಧ? ಅವರು ಹಾಸನ ತ್ಯಜಿಸಿ ಎಷ್ಟು ವರ್ಷವಾಯ್ತು, ಕುಮಾರಸ್ವಾಮಿಗೂ ಹಾಸನಕ್ಕೂ ಇದ್ದ ನಂಟು ಹೋಗಿ ಬಹಳ ದಿನಗಳಾಗಿದೆ ಎಂದು ಸಚಿವ ಮಾಧುಸ್ವಾಮಿ ಕಿಡಿಕಾರಿದ್ದಾರೆ.

ಕುಮಾರಸ್ವಾಮಿಗೆ ಹಾಸನ, ಹೇಮಾವತಿ ನಂಟು ಇನ್ನೂ ಇದ್ಯಾ?
ಹಾಸನಕ್ಕೆ ಮಾಧುಸ್ವಾಮಿ ಕಾಟಾಚಾರಕ್ಕೆ ಬಂದು ಹೋಗುತ್ತಿದ್ದಾರೆ ಎಂದು ಹೆಚ್​ಡಿಕೆ ಹೇಳಿಕೆ ನೀಡಿದ್ದರು. ಈ ಸಂಬಂಧ ಪ್ರತಿಕ್ರಿಯಿಸಿದ ಅವರು, ನಾನು ಹಾಸನಕ್ಕೆ ಕೂಲಿ ಮಾಡಲು ಹೋಗ್ತಿಲ್ಲ, ಮಂತ್ರಿಗಿರಿ ಮಾಡಲು ಹೋಗ್ತಿದ್ದೇನೆ ಎಂದರು. ಕುಮಾರಸ್ವಾಮಿ ಏಕೆ ಹಾಸನದ ಬಗ್ಗೆ ಮಾತನಾಡುತ್ತಿದ್ದಾರೆ? ಕುಮಾರಸ್ವಾಮಿ ಹಾಸನ ತ್ಯಜಿಸಿ ಎಷ್ಟು ವರ್ಷವಾಯಿತೆಂದು ಅವರನ್ನೇ ಕೇಳಿ. ಯಾವುದೇ ಸಣ್ಣ ಘರ್ಷಣೆ ಇಲ್ಲದೆ ಎರಡೂ ಜಿಲ್ಲೆಯಲ್ಲಿ ಹೇಮಾವತಿ ನದಿ ನೀರು ಹರಿದಿದೆ. ಇತಿಹಾಸದಲ್ಲಿ ಆ ರೀತಿಯ ಕೆಲಸ ಕುಮಾರಸ್ವಾಮಿ ಮಾಡಿಲ್ಲ ಎಂದರು.

25 ಸೀಟು ಗೆದ್ದು ಹೆದರೋಕಾಗುತ್ತಾ?
ಯಾರ ಯಾವಾಗ ಸಾಯುತ್ತಾರೆ ಎಂದು ಹೇಗೆ ಹೇಳೋಕಾಗುತ್ತೆ? ಮುಂದೇ ಏನು ಆಗುತ್ತೆ ಎಂದು ಯಾರಿಗೆ ಗೊತ್ತಿರುತ್ತೆ. ಇರುವವರೆಗೂ ಸರ್ಕಾರ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಮಾತನಾಡಿದ ಮಾಧುಸ್ವಾಮಿ, ಲೋಕಸಭೆಯಲ್ಲಿ 25 ಸೀಟು ಗೆದ್ದು ಹೆದರಲು ಆಗುತ್ತಾ? ಸಿದ್ದರಾಮಯ್ಯನವರಿಗೆ ಭ್ರಮನಿರಸನವಾಗಿದೆ. ಸಿದ್ದರಾಮಯ್ಯನವರು ಸ್ವಕ್ಷೇತ್ರದಲ್ಲಿ ಸೋತಿರುವ ಸೋಲನ್ನು ಒಪ್ಪಿಕೊಳ್ಳಲು ಹೇಳಿ ಎಂದು ಗುಡುಗಿದರು.

ಸಚಿವ ಮಾಧುಸ್ವಾಮಿಗೆ ಮುತ್ತಿಗೆ:
ಮಾಲೂರು ತಾಲೂಕಿನ ಶಿವಾರಪಟ್ಟಣ ಕೆರೆಯಲ್ಲಿ ಕೆ.ಸಿ.ವ್ಯಾಲಿ ಯೋಜನೆ ವೀಕ್ಷಣೆ ಮಾಡಿ ಪಂಪ್ ಹೌಸ್​ಗೆ ಚಾಲನೆ ನೀಡಿದರು. ಈ ವೇಳೆ ಜಿಲ್ಲೆಯ ವಿವಿಧ ಸಂಘಟನೆಗಳ‌ ಮುಖಂಡರು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿಗೆ ಮುತ್ತಿಗೆ ಹಾಕಿ ಕೆ.ಸಿ.ವ್ಯಾಲಿ ನೀರನ್ನು ಮೂರು ಹಂತದ ಶುದ್ಧೀಕರಣ ಖಾತ್ರಿ ಬಳಿಕ ನೀರು ಹರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮನವಿ ಸಲ್ಲಿಸಿದರು. ಇದೇ ವೇಳೆ ಕೋಲಾರ ನಗರಕ್ಕೆ ನೀರು ಸರಬರಾಜು‌ ಮಾಡುವ ಅಮ್ಮೇರಹಳ್ಳಿ, ಮಡೇರಹಳ್ಳಿ ಹಾಗೂ ಅಮ್ಮಾನಿಕೆರೆಗಳಿಗೆ ನೀರು ಹರಿಸದಂತೆ ಒತ್ತಾಯಿಸಿದರು.

Published On - 7:10 pm, Tue, 22 October 19