ಕೋಲಾರ: ಜಾತ್ಯಾತೀತ ಜನತಾ ದಳದ ಹಿರಿಯ ಶಾಸಕರೊಬ್ಬರು ಬಿಜೆಪಿಗೆ ಸೇರುವ ಸೂಚನೆ ಲಭಿಸಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲವನ್ನ ಸೂಚಿಸಿದ್ದೆ. ಮೈತ್ರಿ ಧರ್ಮ ಮುರಿದು ಬಿಜೆಪಿಗೆ ಬೆಂಬಲವನ್ನು ಸೂಚಿಸಿದ್ದೆ ಎಂದು ಜೆಡಿಎಸ್ ಹಾಲಿ ಶಾಸಕ, ಮಾಜಿ ಸಚಿವ ಕೆ ಶ್ರೀನಿವಾಸ ಗೌಡ ಹೇಳಿದ್ದಾರೆ.
ಜೆಡಿಎಸ್ ಕದಡಿದ ನೀರು: ರಾಜಕಾರಣ ಹರಿಯೋ ನೀರು
ಬಹಿರಂಗವಾಗೇ ನಾನು BJP ಪರವಾಗಿ ಕೆಲಸ ಮಾಡಿದ್ದೇನೆ. ಬಿಜೆಪಿ ಪರವಾಗಿ ಕೆಲಸ ಮಾಡಲು ಬೇರೆ ಕಾರಣಗಳು ಇವೆ. ನಾನು 4 ಬಾರಿ ಗೆದ್ದಿದ್ದೇನೆ, ಮುಂದೆ ಏನಾಗುತ್ತೋ ಗೊತ್ತಿಲ್ಲ. ರಾಜಕಾರಣ ಹರಿಯೋ ನೀರು, ಯಾರೂ ಅಡ್ಡಿಪಡಿಸಲಾಗಲ್ಲ ಎಂದು ಕೋಲಾರದಲ್ಲಿ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ಹೇಳಿದ್ದಾರೆ.
ಬಿಜೆಪಿಯಿಂದ 30 ಕೋಟಿ ಆಫರ್:
ಬಿಜೆಪಿ ನಾಯಕರು ತಮ್ಮ ಪಕ್ಷ ಸೇರುವಂತೆ ನನಗೆ ದುಂಬಾಲು ಬಿದ್ದಿದ್ದು 30 ಕೋಟಿ ಆಫರ್ ನೀಡಿದ್ದರು ಎಂದು ಶ್ರೀನಿವಾಸ ಗೌಡ ವಿಧಾನಸಭೆಯಲ್ಲಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.