‘ಪ್ರಧಾನಿ ಮೋದಿ ಈ ಹಿಂದೆ ಕರ್ನಾಟಕದಲ್ಲಿ 10 ಪರ್ಸೆಂಟ್​ ಸರ್ಕಾರವಿದೆ ಅಂದಿದ್ದರು.. ಆದ್ರೆ ಇವತ್ತು ಏನಾಗಿದೆ?’

ಕರ್ನಾಟಕದಲ್ಲಿ 10 ಪರ್ಸೆಂಟ್​ ಸರ್ಕಾರವಿದೆ ಅಂದಿದ್ದರು. ಮೋದಿ ಈ ಹಿಂದೆ 10 ಪರ್ಸೆಂಟ್​ ಸರ್ಕಾರ ಎಂದಿದ್ದರು. ಆದರೆ ಇವತ್ತು ಏನಾಗಿದೆ.. ಝೀರೋ ಪರ್ಸೆಂಟಾ? ಈ ಸರ್ಕಾರ 25 ಪರ್ಸೆಂಟ್​​ ಅಂತಾರೆ ಕೆಲ ಶಾಸಕರು. ಮೈಯೆಲ್ಲಾ ಪೂರ್ತಿ ಕಪ್ಪು ಆವರಿಸಿಕೊಂಡಿದೆ. ಎರಡು ವರ್ಷ ಉಳಿದಿದೆ, ಅದನ್ನು ಸರಿಪಡಿಸಿಕೊಳ್ಳಿ ಎಂದು ಸಿಡಿಮಿಡಿಗೊಂಡರು.

‘ಪ್ರಧಾನಿ ಮೋದಿ ಈ ಹಿಂದೆ ಕರ್ನಾಟಕದಲ್ಲಿ 10 ಪರ್ಸೆಂಟ್​ ಸರ್ಕಾರವಿದೆ ಅಂದಿದ್ದರು.. ಆದ್ರೆ ಇವತ್ತು ಏನಾಗಿದೆ?’
ಪ್ರಧಾನಿ ಮೋದಿ
Follow us
KUSHAL V
|

Updated on:Mar 17, 2021 | 6:40 PM

ಬೆಂಗಳೂರು: ಉಪ್ಪಾರಪೇಟೆ ಪೊಲೀಸ್ ಠಾಣೆ ರಾಜ್ಯದಲ್ಲೇ ನಂಬರ್​ 1. ಆದರೆ ಯಾವುದರಲ್ಲಿ ನಂಬರ್​ ಒನ್ ಅನ್ನೋದು ಗೊತ್ತಿಲ್ಲ ಎಂದು ವಿಧಾನಸಭೆಯಲ್ಲಿ ಶಾಸಕ ಎ.ಟಿ.ರಾಮಸ್ವಾಮಿ ಲೇವಡಿ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡೋದರಲ್ಲಿ ನಂಬರ್ ಒನ್ನಾ? ಅನ್ನೋಣ ಅಂದ್ರೆ ಪ್ರಕರಣ ದಾಖಲಿಸುವುದಕ್ಕೆ ಒಂದು ದಿನ ಕಾಯಿಸುತ್ತಾರೆ. ಫೇಕ್‌ ದಾಖಲೆ ಕುರಿತು ದೂರುಗಳನ್ನೇ ತೆಗೆದುಕೊಳ್ಳಲ್ಲ ಎಂದು ಉಪ್ಪಾರಪೇಟೆ ಠಾಣೆಯ ಕಾರ್ಯವೈಖರಿ ಬಗ್ಗೆ ವಿಧಾನಸಭೆಯಲ್ಲಿ ಶಾಸಕ ಎ.ಟಿ.ರಾಮಸ್ವಾಮಿ ಲೇವಡಿ ಮಾಡಿದರು.

‘ರಾಜ್ಯದಲ್ಲಿ ನುಂಗಣ್ಣ ವ್ಯವಸ್ಥೆ ವಿಜೃಂಭಿಸುತ್ತಿದೆ’ ವಿಧಾನಸಭೆಯಲ್ಲಿ ಬಜೆಟ್​ ಮೇಲೆ ಶಾಸಕ ರಾಮಸ್ವಾಮಿ ಚರ್ಚೆ ನಡೆಸುತ್ತಾ ರಾಜ್ಯದಲ್ಲಿ ನುಂಗಣ್ಣ ವ್ಯವಸ್ಥೆ ವಿಜೃಂಭಿಸುತ್ತಿದೆ. ಕರ್ನಾಟಕದಲ್ಲಿ ಸಂಪತ್ತು ಸಾಕಷ್ಟು ಇದೆ, ಸ್ವರ್ಗ ಇಲ್ಲೇ ಇದೆ. ಸ್ವರ್ಗ ಇಲ್ಲೇ ಇದೆ ಆದರೆ, ನರಕವನ್ನ ಸೃಷ್ಟಿ ಮಾಡುತ್ತಿದ್ದೇವೆ. ಸಂಪತ್ತು ಲೂಟಿಗೆ ಆಡಳಿತ ವೈಫಲ್ಯವೇ ಮುಖ್ಯ ಕಾರಣ ಎಂದು ತಮ್ಮ ಆಕ್ರೋಶ ಹೊರಹಾಕಿದರು.

AT RAMASWAMY 1

ಎ.ಟಿ.ರಾಮಸ್ವಾಮಿ

‘ಕರ್ನಾಟಕದಲ್ಲಿ 10 ಪರ್ಸೆಂಟ್​ ಸರ್ಕಾರವಿದೆ ಅಂದಿದ್ದರು’ ಕರ್ನಾಟಕದಲ್ಲಿ 10 ಪರ್ಸೆಂಟ್​ ಸರ್ಕಾರವಿದೆ ಅಂದಿದ್ದರು. ಮೋದಿ ಈ ಹಿಂದೆ 10 ಪರ್ಸೆಂಟ್​ ಸರ್ಕಾರ ಎಂದಿದ್ದರು. ಆದರೆ ಇವತ್ತು ಏನಾಗಿದೆ.. ಝೀರೋ ಪರ್ಸೆಂಟಾ? ಈ ಸರ್ಕಾರ 25 ಪರ್ಸೆಂಟ್​​ ಅಂತಾರೆ ಕೆಲ ಶಾಸಕರು. ಮೈಯೆಲ್ಲಾ ಪೂರ್ತಿ ಕಪ್ಪು ಆವರಿಸಿಕೊಂಡಿದೆ. ಎರಡು ವರ್ಷ ಉಳಿದಿದೆ, ಅದನ್ನು ಸರಿಪಡಿಸಿಕೊಳ್ಳಿ ಎಂದು ಸಿಡಿಮಿಡಿಗೊಂಡರು.

‘BSY ಗುಡುಗಿದರೆ ವಿಧಾನಸೌಧ ಅಲ್ಲಾಡುತ್ತೆ ಅನ್ನುತ್ತಿದ್ದರು’ 25 ಸಂಸದರಿದ್ದರೂ ಧ್ವನಿ ಎತ್ತದಿರಲು ಕಾರಣ ಏನು? BSY ಗುಡುಗಿದರೆ ವಿಧಾನಸೌಧ ಅಲ್ಲಾಡುತ್ತೆ ಅನ್ನುತ್ತಿದ್ದರು. ಈಗ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಅನ್ಯಾಯ ಆಗಿದೆ. ಆದರೆ ಹೆಚ್ಚು ತೆರಿಗೆ ಕೊಡುವ ರಾಜ್ಯಕ್ಕೆ ಕಡಿಮೆ ಹಣ ಸಂದಾಯವಾಗುತ್ತಿದೆ. ಈ ತಾರತಮ್ಯ ಧೋರಣೆ ವಿರುದ್ಧ BSY ಗುಡುಗಬೇಕು ಎಂದು ರಾಮಸ್ವಾಮಿ ಹೇಳಿದರು.

‘ಸರ್ಕಾರಿ ಹಣ ಬೇರೆ ಬೇರೆ ಎಫ್‌ಡಿ ಇಟ್ಟಿದ್ದರು’ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಸಾವಿರಾರು ಕೋಟಿ ಲೂಟಿ ಆಗಿದೆ. ಸರ್ಕಾರಿ ಹಣ ಬೇರೆ ಬೇರೆ ಎಫ್‌ಡಿ ಇಟ್ಟಿದ್ದರು. ಅದು ಏನಾಯ್ತು, ಎಲ್ಲಿ ಹೋಯ್ತು ಗೊತ್ತಾಯ್ತಾ? ಎಂದು ಪ್ರಶ್ನೆ ಹಾಕಿದರು. ಈ ಬಗ್ಗೆ ಅಧಿಕಾರಿಗಳು ಏನ್ಮಾಡ್ತಿದ್ದಾರೆಂದು ರಾಮಸ್ವಾಮಿ ಪ್ರಶ್ನೆ ಮಾಡಿದರು. ಅನ್ನ ತಿನ್ನುತ್ತಿದ್ದೀರೋ ಮಣ್ಣು ತಿನ್ನುತ್ತಿದ್ದೀರೋ ಎಂದು ಗುಡುಗಿದರು.

15, 20 ಲಕ್ಷ ಕಾಮಗಾರಿಗೆ ಶೇ.25ರಷ್ಟು ಕಡಿಮೆ ಹಾಕುತ್ತಾರೆ. ಇವರು ಇಲ್ಲಿಗೆ ಬಂದು ಹಣ ಬಿಡಿಸೋಕೆ ಆಗುತ್ತಾ? ದೊಡ್ಡ ದೊಡ್ಡ ಕಂಟ್ರ್ಯಾಕ್ಟರ್ ಬರ್ತಾರೆ, ಕೊಟ್ಟು ತೆಗೆದುಕೊಳ್ತಾರೆ. ಇದರ ಬಗ್ಗೆ ನೀವೇಕೆ ಮೌನ ವಹಿಸಿದ್ದು? ಎಂದು ಪ್ರಶ್ನೆ ಹಾಕಿದರು.

‘ಕೆಪಿಎಸ್‌ಸಿಯಲ್ಲಿ ಏನೇನು ಕರ್ಮಕಾಂಡ ಆಯ್ತು?’ ಕೆಪಿಎಸ್‌ಸಿಯಲ್ಲಿ ಏನೇನು ಕರ್ಮಕಾಂಡ ಆಯ್ತು. ಆಡಳಿತದಲ್ಲಿ ಪಾರದರ್ಶಕತೆ ತರಲು ಇದನ್ನ ಮಾಡಿದ್ದು. ಇವತ್ತು ಕೋಟಿಗಟ್ಟಲೆ ಕೊಟ್ಟು ಬರಬೇಕು. ಬಂದವರು ಶುದ್ಧವಾಗಿ ಕೆಲಸ ಮಾಡ್ತಾರಾ? ಎಷ್ಟು ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಲಿಲ್ಲ? ಬಡ ಪ್ರತಿಭಾನ್ವಿತರಿಗೆ ಅನ್ಯಾಯವಾಗ್ತಿಲ್ವಾ? ದುಡ್ಡು ಕೊಟ್ಟು ಕೆಲಸ ಮಾಡೋಕೆ ಇಲ್ಲಿಗೆ ಬರಬೇಕೇ? ಇದನ್ನ ತಡೆಯೋಕೆ ಸ್ಪಷ್ಟ ಕಾರ್ಯಕ್ರಮ ಯಾಕೆ ರೂಪಿಸ್ತಿಲ್ಲ? ಕಾನೂನಿನಲ್ಲಿ ಇದಕ್ಕೆ ಅವಕಾಶ ಇಲ್ವೇ?ಎಂದು ರಾಮಸ್ವಾಮಿ ಪ್ರಶ್ನೆಗಳ ಸುರಿಮಳೆಗೈದರು.

ಎಷ್ಟು ಪಡಿತರ ಕಾಳಸಂತೆಯಲ್ಲಿ ಬಿಕರಿಯಾಗ್ತಿಲ್ಲ? ಸೀಜ್ ಮಾಡೋದು, ದುಡ್ಡು ಪಡೆದು ಬಿಡೋದು. ಒಂದು ಕೆಲಸಕ್ಕಾಗಿ 10 ಟೇಬಲ್ ಚೇಂಜ್ ಆಗಬೇಕು. ಕೈಯಲ್ಲಿ ನೂಕಿದರೆ ಫೈಲ್ ಮೂವ್ ಆಗಲ್ಲ. ಖಾಸಗಿಯವರ ಫೈಲ್ ಜೋರಾಗಿ ಹೋಗುತ್ತದೆ. ಸಾರ್ವಜನಿಕರ ಫೈಲ್ ಕೊಟ್ರೆ ಅಲ್ಲೇ ಉಳಿಯುತ್ತದೆ. ಕಾಸು ಕೊಟ್ಟರೆ ಮಾತ್ರ ಬೇಗ ಮೂವ್ ಆಗುತ್ತದೆ ಎಂದು ಶಾಸಕರು ತಮ್ಮ ವಾಗ್ದಾಳಿ ಮುಂದುವರಿಸಿದರು.

ಬಿಳಿಯಾನೆಗಳನ್ನು ಕಡಿಮೆ ಮಾಡಿ. ಶ್ರೇಣೀಕೃತ ಅಧಿಕಾರಿ ವರ್ಗ ಕಡಿಮೆ ಮಾಡಿ. ಆಗ ಮಾತ್ರ ಕಾರ್ಯಾಂಗ ಚುರುಕುಗೊಳಿಸಬಹುದು ಎಂದು ರಾಜ್ಯ ಸರ್ಕಾರಕ್ಕೆ ಶಾಸಕ ರಾಮಸ್ವಾಮಿ ಸಲಹೆ ನೀಡಿದರು.

‘2 ವರ್ಷದ ಸರ್ಕಾರದ ಬಜೆಟ್ ಮೊತ್ತವನ್ನು ಬಿಎಂಆರ್​ಡಿಎ ವ್ಯಾಪ್ತಿಯಲ್ಲೇ ಸಂಗ್ರಹಿಸಬಹುದು’ BMRDA ವ್ಯಾಪ್ತಿಯಲ್ಲಿ ಲಕ್ಷಾಂತರ ಕೋಟಿ ಭೂ ಹಗರಣ ನಡೆದಿದೆ. ಎರಡು ವರ್ಷದ ಸರ್ಕಾರದ ಬಜೆಟ್ ಮೊತ್ತವನ್ನು ಬಿಎಂಆರ್​ಡಿಎ ವ್ಯಾಪ್ತಿಯಲ್ಲೇ ಸಂಗ್ರಹಿಸಬಹುದು. ಸಂಗ್ರಹವಾಗಲಿಲ್ಲ ಅಂದರೆ ನಾನು ಈ ಸದನಕ್ಕೆ ಬರಲ್ಲ. ಈ ಸವಾಲನ್ನು ಸ್ವೀಕರಿಸಲು ನಾನು ಸಿದ್ಧ ಎಂದು ರಾಮಸ್ವಾಮಿ ಹೇಳಿದರು.

NARAYANAGOWDA

‘ಏಯ್​.. ಸುಮ್ನೆ ಕೂರಿಽ, ಏಯ್​ ಸುಮ್ನೆ ಕೂರಿಽ’

‘ಏಯ್​.. ಸುಮ್ನೆ ಕೂರಿಽ, ಏಯ್​ ಸುಮ್ನೆ ಕೂರಿಽ’ ಈ ವೇಳೆ, ಎ.ಟಿ.ರಾಮಸ್ವಾಮಿ ಆರೋಪಕ್ಕೆ ಮಾಜಿ ಸಚಿವ ಬಂಡೆಪ್ಪ ಕಾಶಂಪುರ ಸಾಥ್ ಕೊಟ್ಟರು. ನಾವು ಕ್ಷೇತ್ರಗಳಿಗೆ ಅನುದಾನ ತರಲು ಒದ್ದಾಡಬೇಕು. ಆದರೆ ಬೇರೆಯವರು 3, 4 ಕೋಟಿ ರೂ. ಹೇಗೆ ತರ್ತಾರೆ? ನಾನು ಮಾಜಿ ಸಚಿವನಾಗಿ, ಶಾಸಕನಾಗಿ ಏನು ಮಾಡಬೇಕು? ಸರ್ಕಾರದ ವಿರುದ್ಧ ಶಾಸಕ ಬಂಡೆಪ್ಪ ಕಾಶಂಪುರ ಆಕ್ರೋಶ ಹೊರಹಾಕಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಸಚಿವ ನಾರಾಯಣಗೌಡ ನಿಮ್ಮ ಸರ್ಕಾರದಲ್ಲೂ ಹಾಗೇ ಇತ್ತು ಎಂದರು. ಅದಕ್ಕೇ ಏಯ್​.. ಸುಮ್ನೆ ಕೂರಿಽ, ಏಯ್​ ಸುಮ್ನೆ ಕೂರಿಽ ಎಂದು ಬಂಡೆಪ್ಪ ಕಾಶಂಪುರ ಗುಡುಗಿದರು. ಇದು ನಾಚಿಕೆಗೇಡಿನ ಸರ್ಕಾರ ಎಂದು ನಾರಾಯಣಗೌಡ ವಿರುದ್ಧ ಕಿಡಿಕಾರಿದರು. ಇವರು ಕೊಟ್ಟ ಭರವಸೆ ಒಂದೂ ಈಡೇರುವುದಿಲ್ಲ. ನಾವು ಶಾಸಕರಾಗಿ ಇಲ್ಲಿ ಹೇಳೋದು ಬಿಟ್ಟು ಎಲ್ಲಿ ಹೇಳಬೇಕು? ಸರ್ಕಾರದಲ್ಲಿ ತಾರತಮ್ಯ ತುಂಬಾ ಮಿತಿ ಮೀರಿ ಹೋಗಿದೆ ಎಂದು ವಿಧಾನಸಭೆಯಲ್ಲಿ JDS ಶಾಸಕ ಬಂಡೆಪ್ಪ ಕಾಶಂಪುರ ಆಕ್ರೋಶ ವ್ಯಕ್ತಪಡಿಸಿದರು.

BANDEPPA KASHEMPUR 2

ಬಂಡೆಪ್ಪ ಕಾಶಂಪುರ

‘ಮಾಫಿಯಾದವರನ್ನ ಸರ್ಕಾರ ನಿಯಂತ್ರಿಸುತ್ತಿಲ್ಲ.. ಸರ್ಕಾರವನ್ನೇ ಮಾಫಿಯಾ ನಿಯಂತ್ರಿಸುತ್ತಿದೆ’ ಬಳಿಕ ತಮ್ಮ ಮಾತು ಮುಂದುವರಿಸಿದ ಶಾಸಕ ಎ.ಟಿ. ರಾಮಸ್ವಾಮಿ ಮಾಫಿಯಾದವರನ್ನ ಸರ್ಕಾರ ನಿಯಂತ್ರಿಸುತ್ತಿಲ್ಲ. ಸರ್ಕಾರವನ್ನೇ ಮಾಫಿಯಾ ನಿಯಂತ್ರಿಸುತ್ತಿದೆ. ಭೂಗಳ್ಳರಿಗೆ ರಾಜ್ಯ ಸ್ವರ್ಗವಾಗ್ತಿದೆ. ಕಂದಾಯ ಸಚಿವರೇ ಇದರ ಬಗ್ಗೆ ಹೇಳಿದ್ದಾರೆ. ಬೆಂಗಳೂರಿನಲ್ಲಿ 43 ಸಬ್ ರಿಜಿಸ್ಟಾರ್ ಆಫೀಸ್ ಇವೆ. ಬೆಂಗಳೂರನ್ನು‌ ವಿಂಗ್ ಮಾಡಿಕೊಂಡಿದ್ದಾರೆ. ಇಲ್ಲಿರುವ ಸಬ್ ರಿಜಿಸ್ಟಾರ್, ಪೊಲೀಸ್, ಸರ್ವೆ ಡಿಪಾರ್ಟ್​ಮೆಂಟ್ ಅವರನ್ನ ಹೊರಗೆ ಹಾಕಿ. ಆಗ ಆಡಳಿತದಲ್ಲಿ ಚುರುಕು ಬರುತ್ತದೆ ಎಂದು ಸರ್ಕಾರಕ್ಕೆ ಎ.ಟಿ.ರಾಮಸ್ವಾಮಿ ಒತ್ತಾಯ ಮಾಡಿದರು.

ಈ ವೇಳೆ ಮಧ್ಯಪ್ರವೇಶಿಸಿದ ಕಾಂಗ್ರೆಸ್ ಶಾಸಕ ಪರಮೇಶ್ವರ್ ನಾಯ್ಕ್, ನಾವು ಅವರನ್ನ ಹೊರ ಹಾಕಲು ಆಗಲ್ಲ. ಅವರೇ ನಮ್ಮನ್ನ ಹೊರಗೆ ಹಾಕಿಬಿಡ್ತಾರೆಂಬ ಭಯವಿದೆ ಎಂದು ಅಧಿಕಾರಿಗಳ ಬಗ್ಗೆ ಪರಮೇಶ್ವರ್ ನಾಯ್ಕ್ ತಮ್ಮ ಆತಂಕ ಹೊರಹಾಕಿದರು.

ಇದನ್ನೂ ಓದಿ: KIADB ಭೂ ಡಿನೋಟಿಫಿಕೇಷನ್ ಪ್ರಕರಣ: ಸಿಎಂ ಬಿಎಸ್‌ವೈ, ಕಟ್ಟಾ ಸುಬ್ರಹ್ಮಣ್ಯನಾಯ್ಡುಗೆ ಎದುರಾಯ್ತು ಸಂಕಷ್ಟ

Published On - 6:29 pm, Wed, 17 March 21

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!