ಡಿಕೆಶಿಗೆ ಭಾರಿ ಹಿನ್ನಡೆ, ಯೇಸು ಪ್ರತಿಮೆ ನಿರ್ಮಾಣಕ್ಕೆ ಸರ್ಕಾರದಿಂದ ಬ್ರೇಕ್?

|

Updated on: Dec 28, 2019 | 3:02 PM

ಬೆಂಗಳೂರು: ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಉಯ್ಯಂಬಳ್ಳಿ ಬಳಿ ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಬ್ರೇಕ್​ ಹಾಕುತ್ತಾ? ಎಂಬ ಪ್ರಶ್ನೆ ಉದ್ಭವವಾಗಿದೆ. ಈಗಾಗಲೇ ಕಂದಾಯ ಸಚಿವ ಆರ್.ಅಶೋಕ್ ರಾಮನಗರ ಜಿಲ್ಲಾಧಿಕಾರಿಯಿಂದ ವರದಿ ಕೇಳಿದ್ದಾರೆ. ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳುವುದಾಗಿಯೂ ಅಶೋಕ್ ತಿಳಿಸಿದ್ದಾರೆ. ಹಾಗಾದರೆ, ವರದಿ ಪರಿಶೀಲನೆ ಬಳಿಕ ಜಮೀನು ಮುಟ್ಟುಗೋಲಿಗೆ ಮುಂದಾಗಲಿದ್ಯಾ ಸರ್ಕಾರ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. 10 ಎಕರೆ ಪ್ರದೇಶ ಮುಟ್ಟುಗೋಲು ಹಾಕಲು ಸರ್ಕಾರ ಚಿಂತನೆ ನಡೆಸುತ್ತಿದೆ. ಪ್ರತಿಮೆ […]

ಡಿಕೆಶಿಗೆ ಭಾರಿ ಹಿನ್ನಡೆ, ಯೇಸು ಪ್ರತಿಮೆ ನಿರ್ಮಾಣಕ್ಕೆ ಸರ್ಕಾರದಿಂದ ಬ್ರೇಕ್?
Follow us on

ಬೆಂಗಳೂರು: ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಉಯ್ಯಂಬಳ್ಳಿ ಬಳಿ ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ಬ್ರೇಕ್​ ಹಾಕುತ್ತಾ? ಎಂಬ ಪ್ರಶ್ನೆ ಉದ್ಭವವಾಗಿದೆ. ಈಗಾಗಲೇ ಕಂದಾಯ ಸಚಿವ ಆರ್.ಅಶೋಕ್ ರಾಮನಗರ ಜಿಲ್ಲಾಧಿಕಾರಿಯಿಂದ ವರದಿ ಕೇಳಿದ್ದಾರೆ. ವರದಿ ಬಂದ ಬಳಿಕ ಸೂಕ್ತ ಕ್ರಮ ಕೈಗೊಳ್ಳುವುದಾಗಿಯೂ ಅಶೋಕ್ ತಿಳಿಸಿದ್ದಾರೆ. ಹಾಗಾದರೆ, ವರದಿ ಪರಿಶೀಲನೆ ಬಳಿಕ ಜಮೀನು ಮುಟ್ಟುಗೋಲಿಗೆ ಮುಂದಾಗಲಿದ್ಯಾ ಸರ್ಕಾರ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.

10 ಎಕರೆ ಪ್ರದೇಶ ಮುಟ್ಟುಗೋಲು ಹಾಕಲು ಸರ್ಕಾರ ಚಿಂತನೆ ನಡೆಸುತ್ತಿದೆ. ಪ್ರತಿಮೆ ನಿರ್ಮಿಸುವ ಜಾಗ ವಾಪಸ್​​ ಪಡೆಯಲು ಪ್ಲ್ಯಾನ್ ರೂಪಿಸುತ್ತಿದೆ. ಆ ಜಾಗವನ್ನು ವಶಪಡಿಸಿಕೊಳ್ಳಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ. ಈ ಮೂಲಕ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣ ಮಾಡಬೇಕು ಎಂಬ ಡಿಕೆ ಶಿವಕುಮಾರ್ ಪ್ರಯತ್ನಕ್ಕೆ ಭಾರಿ ಹಿನ್ನಡೆಯಾಗುತ್ತಾ ಎಂಬ ಶಂಕೆ ವ್ಯಕ್ತವಾಗಿದೆ.

ಡಿಕೆಶಿ ಗೋಮಾಳ ಜಮೀನು ಖರೀದಿಸಿದ್ದಾರೆ:
ಕಪಾಲ ಬೆಟ್ಟದಲ್ಲಿ ಯೇಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಮಾಡಲು ಡಿ.ಕೆ.ಶಿವಕುಮಾರ್ ಗೋಮಾಳ ಜಮೀನು ಖರೀದಿ ಮಾಡಿದ್ದಾರೆ. ಟ್ರಸ್ಟ್​​ ಮೂಲಕ ಪ್ರತಿಮೆ ನಿರ್ಮಿಸಲು ಅವಕಾಶವಿದೆಯಾ ಎಂದು ಗೊತ್ತಾಗಬೇಕು. ಟ್ರಸ್ಟ್​​ನ ಉದ್ದೇಶ ಏನು ಎಂಬುದನ್ನು ಮೊದಲು ಡಿಕೆಶಿ ಬಹಿರಂಗಪಡಿಸಬೇಕು. ಈ ವಿಚಾರದಲ್ಲಿ ಕಾನೂನು ಸಚಿವರು ಮಧ್ಯಪ್ರವೇಶಿಸಲಿ. ಪ್ರತಿಮೆ ವಿಚಾರವಾಗಿ ನಾನು ಸಿಎಂಗೆ ಪತ್ರ ಬರೆಯುತ್ತೇನೆ ಎಂದು ಟಿವಿ9ಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್​​​.ರವಿಕುಮಾರ್​ ಪ್ರತಿಕ್ರಿಯಿಸಿದ್ದಾರೆ.

Published On - 3:23 pm, Fri, 27 December 19