ಕಲಬುರಗಿ: ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗೆ ಖದೀಮರು ಕನ್ನ ಹಾಕಿರುವ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ನಿಡಗುಂದಾ ಬ್ರ್ಯಾಂಚ್ನಲ್ಲಿ ನಡೆದಿದೆ. ಕಳ್ಳರು 50 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 12 ಲಕ್ಷಕ್ಕೂ ಹೆಚ್ಚು ನಗದು ಕದ್ದೊಯ್ದಿದ್ದಾರೆ ಎಂದು ಹೇಳಲಾಗಿದೆ.
ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗೆ ಕನ್ನ ಹಾಕಿದ ಇಬ್ಬರು ಮುಸುಕುಧಾರಿಗಳು ಕಟ್ಟಡದ ಕಿಟಕಿಯಿಂದ ಒಳನುಗ್ಗಿ ಕಳ್ಳತನ ಮಾಡಿದ್ದಾರೆ. ಅಂದ ಹಾಗೆ, ಈ ಚಾಲಾಕಿ ಖದೀಮರು ಬ್ಯಾಂಕ್ನ ಸಿಸಿಟಿವಿ ಕ್ಯಾಮರಾರ ಲೈನ್ ಕಟ್ ಮಾಡಿ ನಂತರ ಲಾಕರ್ನಲ್ಲಿದ್ದ ಹಣ ಮತ್ತು ಚಿನ್ನಾಭರಣವನ್ನು ಲೂಟಿ ಮಾಡಿದ್ದಾರೆ.
ಇನ್ನು, ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದರು. ಸುಲೇಪೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆ ಮಾರಿ ಆನ್‌ಲೈನ್ ಜೂಜಾಟ: ಎಲ್ಲವನ್ನೂ ಕಳೆದುಕೊಂಡವ ಸಾವಿಗೂ ಮುನ್ನ ಏನು ಬರೆದಿಟ್ಟ?
Published On - 5:44 pm, Mon, 21 December 20