ಹಾಸನ: ಜೀನ್ಸ್ ಪ್ಯಾಂಟ್ ಧರಿಸಿದ್ದ ಮಲ್ಲಾಪುರ ಪಿಡಿಒಗೆ ಜಿ.ಪಂ. ಸಿಇಒ ನೋಟಿಸ್ ನೀಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಮಲ್ಲಾಪುರ ಗ್ರಾಮ ಪಂಚಾಯತಿ ಪಿಡಿಒ ರುದ್ರೇಗೌಡಗೆ ಹಾಸನ ಜಿಲ್ಲಾ ಪಂಚಾಯತಿ ಸಿಇಒ ಪರಮೇಶ್ ಜೀನ್ಸ್ ಪ್ಯಾಂಟ್ ಧರಿಸಿದ್ದಕ್ಕೆ ನೋಟಿಸ್ ನೀಡಿದ್ದಾರೆ.
ಡಿಸೆಂಬರ್ 20ರಂದು ಜಿ.ಪಂ. ಕಚೇರಿಗೆ ಪಂಚಾಯತಿ ಅಧಿಕಾರಿ ಅಧಿಕಾರಿ (PDO) ರುದ್ರೇಗೌಡ ಭೇಟಿ ನೀಡಿದ್ದ ವೇಳೆ ಪಿಡಿಒ ಜೀನ್ಸ್ ಧರಿಸಿ ಬೇಜವಾಬ್ದಾರಿ ತೋರಿದ್ದಾರೆಂದು ವಸ್ತ್ರ ಸಂಹಿತೆ ಉಲ್ಲಂಘನೆ ಆರೋಪದಡಿ ನೋಟಿಸ್ ನೀಡಿದ್ದಾರೆ. ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ ನಿಮ್ಮ ವಿರುದ್ಧ ಏಕೆ ಶಿಸ್ತುಕ್ರಮ ಜರುಗಿಸಬಾರದೆಂದು ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.
Published On - 11:55 am, Mon, 23 December 19