ಚಿತ್ರದುರ್ಗದಲ್ಲಿ ಒಂದು ವಾರ ನಡೆಯುವ ಜಾತ್ರೆಗೆ ಆಗಮಿಸಿದ ಹೊರ ರಾಜ್ಯದ ಭಕ್ತರು

|

Updated on: Mar 10, 2021 | 7:33 PM

ಕಾಡುಗೊಲ್ಲರ ಆರಾಧ್ಯ ದೈವ ರಂಗಸ್ವಾಮಿ, ಸಾಂಸ್ಕೃತಿಕ ನಾಯಕ ಎತ್ತಪ್ಪ ಜಾತ್ರೆ ಅಂಗವಾಗಿ ವಿಶೇಷ ಆಚರಣೆಗಳು ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೊಲ್ಲರಹಟ್ಟಿಯಲ್ಲಿ ನಡೆಯಿತು. ವಾರ ಕಾಲ‌ ನಡೆಯುವ ಜಾತ್ರೆ ವೇಳೆ ಗಂಗಾಪೂಜೆ, ಉತ್ಸವ ಮೂರ್ತಿಗಳ ಮೆರವಣಿಗೆ, ಅನ್ನ ಸಂತರ್ಪಣೆ, ಭೂತ‌ಮಣೇವು, ಭಂಡಾರ ಉತ್ಸವ ನಡೆಯಿತು.

ಚಿತ್ರದುರ್ಗದಲ್ಲಿ ಒಂದು ವಾರ ನಡೆಯುವ ಜಾತ್ರೆಗೆ ಆಗಮಿಸಿದ ಹೊರ ರಾಜ್ಯದ ಭಕ್ತರು
ಕಾಡುಗೊಲ್ಲರ ಆರಾಧ್ಯ ದೈವ ರಂಗಸ್ವಾಮಿ
Follow us on

ಚಿತ್ರದುರ್ಗ: ಬುಡಕಟ್ಟು ಸಂಸ್ಕೃತಿಯ ತವರಾದ ಕೋಟೆನಾಡಿನಲ್ಲಿ ಇಂದಿಗೂ ಅನೇಕ ವಿಶೇಷ ಆಚರಣೆಗಳು ಜಾರಿಯಲ್ಲಿವೆ. ಕಾಡುಗೊಲ್ಲ ಸಮುದಾಯದ ಭೂತ‌ಮಣೆವು, ಭಂಡಾರದ ಉತ್ಸವ ಆಚರಣೆ ನಾಡಿನ ಜನಮನ ಸೆಳೆಯುತ್ತಿದೆ.

ಕಾಡುಗೊಲ್ಲರ ಆರಾಧ್ಯ ದೈವ ರಂಗಸ್ವಾಮಿ, ಸಾಂಸ್ಕೃತಿಕ ನಾಯಕ ಎತ್ತಪ್ಪ ಜಾತ್ರೆ ಅಂಗವಾಗಿ ವಿಶೇಷ ಆಚರಣೆಗಳು ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೊಲ್ಲರಹಟ್ಟಿಯಲ್ಲಿ ನಡೆಯಿತು. ವಾರ ಕಾಲ‌ ನಡೆಯುವ ಜಾತ್ರೆ ವೇಳೆ ಗಂಗಾಪೂಜೆ, ಉತ್ಸವ ಮೂರ್ತಿಗಳ ಮೆರವಣಿಗೆ, ಅನ್ನ ಸಂತರ್ಪಣೆ, ಭೂತ‌ಮಣೇವು, ಭಂಡಾರ ಉತ್ಸವ ನಡೆಯಿತು. ಸಮುದಾಯದ ಜನ ಬಾಳೆಹಣ್ಣು ಮತ್ತು ಬೆಲ್ಲವನ್ನು‌ ದೇವರಿಗೆ ಅರ್ಪಿಸುತ್ತಾರೆ. ಅದೇ ಬೆಲ್ಲ, ಬಾಳೆಹಣ್ಣನ್ನು ದೇಗುಲದ ಆವರಣದಲ್ಲಿ ಐದು ಕಡೆ ಕುಪ್ಪೆ ಹಾಕಲಾಗುತ್ತದೆ. ಆ ನಂತರ ದಾಸಯ್ಯಗಳ ಗುಂಪು ವಾದ್ಯ ಮೇಳದ ಸದ್ದಿನ ಜೊತೆಗೆ ಬುಡಕಟ್ಟು ನೃತ್ಯ ಮಾಡುತ್ತಾ ಬೆಲ್ಲ, ಬಾಳೆಹಣ್ಣಿನ ಹಾಕಿದ ಕುಪ್ಪೆಗೆ ಮೂರು ಸಲ ಸುತ್ತುವರೆದು ಕೊನೆಗೆ ನೆಲಕ್ಕೆ ಬಿದ್ದು ಬಾಳೆಹಣ್ಣು, ಬೆಲ್ಲ ಸ್ವೀಕರಿಸುತ್ತಾರೆ. ಬಳಿಕ ಪೂಜೆ ಸಲ್ಲಿಸಿ ದೇಗುಲದಲ್ಲಿ ನೀಡಿದ ಭಂಡಾರವನ್ನು ತಟ್ಟೆಯಲ್ಲಿ ಹೊತ್ತು ತಂದು ಭಂಡಾರ ಚೆಲ್ಲುತ ಭಂಡಾರ ಉತ್ಸವ ಆಚರಿಸುತ್ತಾರೆ.

ನೂರಾರು ವರ್ಷದ ಪುರಾತನ ಆಚರಣೆ
ಈ ಸಾಂಪ್ರದಾಯಿಕ ಆಚರಣೆ ನೂರಾರು ವರ್ಷಗಳಿಂದ ನಮ್ಮ ಪುರಾತನರು ಆಚರಿಸಿಕೊಂಡು ಬಂದಿದ್ದಾರೆ. ಈ ಆಚರಣೆ ಮೂಲಕ ಭಕ್ತಿ ಸಮರ್ಪಿಸಿದರೆ ದೇವರು ಸಂತೃಪ್ತನಾಗುತ್ತಾನೆ. ಇಡೀ ಸಮುದಾಯ ಮತ್ತು ನಾಡಿನ ಜನರಿಗೆ ಒಳಿತಾಗುತ್ತದೆ. ಮಳೆ, ಬೆಳೆ ಸಮೃದ್ಧವಾಗುತ್ತದೆ ಎಂಬ ನಂಬಿಕೆ‌ ಇದೆ ಎಂದು ಗ್ರಾಮದ ಮುಖಂಡರು ಹೇಳುತ್ತಾರೆ.

ಬೆಲ್ಲ, ಬಾಳೆಹಣ್ಣನ್ನು ದೇಗುಲದ ಆವರಣದಲ್ಲಿ ಐದು ಕಡೆ ಕುಪ್ಪೆ ಹಾಕಲಾಯಿತು

ಕುಪ್ಪೆ ಹಾಕಿದ ಬೆಲ್ಲ, ಬಾಳೆ ಹಣ್ಣಿನ ರಾಶಿಗೆ ಪೂಜೆ

ದೈವ ರಂಗಸ್ವಾಮಿ

ಸಾಂಪ್ರದಾಯಿಕ ಆಚರಣೆಯಲ್ಲಿ ಭಕ್ತರು

ಚಿತ್ರದುರ್ಗದ ಗೊಲ್ಲರಹಟ್ಟಿಯಲ್ಲಿ ಕಾಡುಗೊಲ್ಲ ಸಮುದಾಯದ ವಿಶಿಷ್ಟ ಆಚರಣೆಯನ್ನು ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿದೆ. ವಿಶೇಷ ಉತ್ಸವದಲ್ಲಿ ಊರ ಜನ ಮಾತ್ರವಲ್ಲದೆ ರಾಜ್ಯ, ಹೊರ ರಾಜ್ಯದಿಂದಲೂ ಭಕ್ತರು ಆಗಮಿಸಿ ಪಾಲ್ಗೊಳ್ಳುತ್ತಾರೆ. ಆ ಮೂಲಕ ಆರಾಧ್ಯ ದೇವರ ಕೃಪೆಗೆ ಪಾತ್ರರಾಗುವುದರ ಜೊತೆಗೆ ನಾಡಿಗೆ ಒಳಿತಾಗಲಿ ಎಂದು ಪ್ರಾರ್ಥಿಸುತ್ತಾರೆ.

ಕಟ್ಟಡದ ಮೇಲೆ ಕುಳಿತು ಜಾತ್ರೆ ವೀಕ್ಷಿಸಿದ ಜನ

ಬೆಲ್ಲವನ್ನು ದೇವಾಲಯದಿಂದ ಹೊರ ತರುತ್ತಿರುವ ಭಕ್ತರು

ಬೆಲ್ಲ ಮತ್ತು ಬಾಳೆ ಹಣ್ಣನ್ನು ಕುಪ್ಪೆ ಹಾಕುತ್ತಿರುವ ಭಕ್ತರು

ಇದನ್ನೂ ಓದಿ

ಬಲ್ಲಟಗಿ ಜಾತ್ರೆಯಲ್ಲಿ ಕಾಣೆಯಾಗಿದ್ದ ಮಾಜಿ ಶಾಸಕರ ಇಬ್ಬರು ಮೊಮ್ಮಕ್ಕಳು ಹಳ್ಳವೊಂದರಲ್ಲಿ ಶವವಾಗಿ ಪತ್ತೆ..

ತುಮಕೂರಿನಲ್ಲಿ ದನಗಳ ಜಾತ್ರೆ: ಕರ್ನಾಟಕದ ಮೂಲೆ ಮೂಲೆಗಳಿಂದ ರೈತರ ಆಗಮನ

Published On - 5:54 pm, Wed, 10 March 21