ಮೀಸಲಾತಿ ಸಂಬಂಧ ಶಿಫಾರಸು ಹಿಂದುಳಿದ ವರ್ಗಗಳ ಆಯೋಗದ ಮೂಲಕವೇ ಆಗಬೇಕು: ಸಚಿವ ಬಸವರಾಜ ಬೊಮ್ಮಾಯಿ
ಮೀಸಲಾತಿ ಸಂಬಂಧ ಏನೇ ಶಿಫಾರಸು ಮಾಡಬೇಕಾದರೂ ಹಿಂದುಳಿದ ವರ್ಗಗಳ ಆಯೋಗದ ಮೂಲಕವೇ ಆಗಬೇಕು. ಈ ಕುರಿತಂತೆ ಉನ್ನತ ಮಟ್ಟದ ಸಮಿತಿ ಮಾಡಿದ್ದೇವೆ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು: ಮೀಸಲಾತಿ ಸಂಬಂಧ ವಿಧಾನಸಭೆಯಲ್ಲಿ ಚರ್ಚೆಯಾಗುತ್ತಿದ್ದಂತೆ ಮೀಸಲಾತಿ ಸಂಬಂಧ ನಾವು ಏನೇ ಶಿಫಾರಸು ಮಾಡಿದರೂ, ಹಿಂದುಳಿದ ವರ್ಗಗಳ ಆಯೋಗದ ಮೂಲಕವೇ ಆಗಬೇಕು. ಅದು ಅನಿವಾರ್ಯ ಕೂಡ ಹೌದು ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಕುರಿತಂತೆ ಮಾತನಾಡುತ್ತಾ, ನಾವು ಮಾಡಬೇಕಾದ ಪ್ರಯತ್ನ ಮಾಡ್ತಿದ್ದೇವೆ. ಆಯೋಗ ಏನು ವರದಿ ನೀಡುತ್ತದೆಯೋ ನೋಡಬೇಕು. ಅದಕ್ಕಾಗಿಯೇ ಉನ್ನತ ಮಟ್ಟದ ಸಮಿತಿ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಚರ್ಚೆಯ ವೇಳೆ ಮಧ್ಯಪ್ರವೇಶ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಉನ್ನತ ಮಟ್ಟದ ಸಮಿತಿ ಅಂದರೆ ಹೇಗೆ ಮಾಡುತ್ತಿದ್ದೀರಿ. ಈಗ ಹೊಸದಾಗಿ ಆಯೋಗ ಮಾಡಲು ಹೊರಟಿದ್ದೀರಾ? ಏನು ನಿಮ್ಮ ನಿರ್ಧಾರ ಎಂದು ಪ್ರಶ್ನಿಸಿದ್ದಾರೆ.
ಎಸ್ಸಿ, ಎಸ್ಟಿ ಮೀಸಲಾತಿ ನೀಡಿಕೆ ರಾಜ್ಯ ಸರ್ಕಾರದ ಕೆಲಸವಲ್ಲ. ನಾಗಮೋಹನ್‌ದಾಸ್ ವರದಿ ಬಂದ ಮೇಲೆ ಸಚಿವ ಬಿ.ಶ್ರೀರಾಮುಲು ನೇತೃತ್ವದಲ್ಲಿ ಉಪ ಸಮಿತಿ ಮಾಡಿದ್ದೀರಿ. ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕಾದರೆ, ಕುಲಶಾಸ್ತ್ರ ಅಧ್ಯಯನದ ವರದಿ ಬರಬೇಕಿದೆ. ಈಗ ದೊಡ್ಡ ಗೊಂದಲ ನಿರ್ಮಾಣವಾಗಿಬಿಟ್ಟಿದೆ. ಇದಕ್ಕೆ ಪರಿಹಾರ ಹುಡುಕ ಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮುಖ್ಯಮಂತ್ರಿ ನಾಪತ್ತೆ ಎಂದ ಯತ್ನಾಳ್; ಈ ಮಾತು ಹಿಂಪಡೆಯಬೇಕೆಂದ ರೇಣುಕಾಚಾರ್ಯ
ಇದನ್ನೂ ಓದಿ: ವಿಧಾನಸಭೆಯಲ್ಲಿ ಚರ್ಚೆ ನಡೆಸಲು ಮೊದಲು ಒಪ್ಪಿ, ನಂತರ ಮಾತು ಬದಲಿಸಿದರು: ಬಸವರಾಜ ಬೊಮ್ಮಾಯಿ