R.R.ನಗರದ ಬಹುಕೋಟಿ ನಕಲಿ ಕಡತ ಸೃಷ್ಟಿ ಪ್ರಕರಣ; ಶಾಸಕ ಮುನಿರತ್ನಗೆ ಹೈಕೋರ್ಟ್‌ನಿಂದ ರಿಲೀಫ್
ಶಾಸಕ ಮುನಿರತ್ನ ಪತ್ನಿ ಮಂಜುಳಾರ ಮನೆಯಲ್ಲಿ ಕಡತ ಪತ್ತೆಯಾಗಿತ್ತು. ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದರು. ಆದರೆ ಚಾರ್ಜ್ ಶೀಟ್ ವೇಳೆ ಮುನಿರತ್ನ, ಪತ್ನಿ ಹೆಸರು ಕೈಬಿಟ್ಟಿದ್ದರು. ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಚಾರ್ಜ್ ಶೀಟ್ ದಾಖಲಾಗಿತ್ತು. ಸದ್ಯ ಈ ಪ್ರಕರಣ ಸಂಬಂಧ ಶಾಸಕ ಮುನಿರತ್ನಗೆ ಹೈಕೋರ್ಟ್‌ನಿಂದ ರಿಲೀಫ್ ಸಿಕ್ಕಿದೆ.
ಬೆಂಗಳೂರು: R.R.ನಗರದ ಬಹುಕೋಟಿ ನಕಲಿ ಕಡತ ಸೃಷ್ಟಿ ಪ್ರಕರಣಕ್ಕೆ ಸಂಬಂಧಿಸಿ ಆರ್.ಆರ್.ನಗರ ಕ್ಷೇತ್ರದ ಶಾಸಕ ಮುನಿರತ್ನಗೆ ಹೈಕೋರ್ಟ್‌ನಿಂದ ರಿಲೀಫ್ ಸಿಕ್ಕಿದೆ. ಶಾಸಕ ಮುನಿರತ್ನ ಹೆಸರು ಕೈಬಿಟ್ಟಿದ್ದನ್ನು ಪ್ರಶ್ನಿಸಿ ವಕೀಲ ಎನ್.ಪಿ. ಅಮೃತೇಶ್ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಶಾಸಕ ಮುನಿರತ್ನ ಪತ್ನಿ ಮಂಜುಳಾರ ಮನೆಯಲ್ಲಿ ಕಡತ ಪತ್ತೆಯಾಗಿತ್ತು. ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದರು. ಆದರೆ ಚಾರ್ಜ್ ಶೀಟ್ ವೇಳೆ ಮುನಿರತ್ನ, ಪತ್ನಿ ಹೆಸರು ಕೈಬಿಟ್ಟಿದ್ದರು. ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಚಾರ್ಜ್ ಶೀಟ್ ದಾಖಲಾಗಿತ್ತು. ಸದ್ಯ ಈ ಪ್ರಕರಣ ಸಂಬಂಧ ಶಾಸಕ ಮುನಿರತ್ನಗೆ ಹೈಕೋರ್ಟ್‌ನಿಂದ ರಿಲೀಫ್ ಸಿಕ್ಕಿದೆ.
ಏನಿದು ಪ್ರಕರಣ? ಶಾಸಕ ಮುನಿರತ್ನ ಅವರ ಪತ್ನಿ ಹೆಸರಲ್ಲಿರುವ ಎಂದು ಹೇಳಲಾದ ವೈಯಾಲಿಕಾವಲ್ನಲ್ಲಿರುವ ಖಾಸಗಿ ಕಟ್ಟಡದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಕಟ್ಟಡದಲ್ಲಿ ಬಿಬಿಎಂಪಿಗೆ ಸೇರಿದ ಹಲವು ಕಡತಗಳು ಪತ್ತೆಯಾಗಿದ್ದವು. ಈ ಸಂಬಂಧ ಲೋಕಾಯುಕ್ತ ಪೊಲೀಸರು ಶಾಸಕ ಮುನಿರತ್ನ ಮತ್ತು ಅವರ ಪತ್ನಿ ವಿರುದ್ಧ FIR ದಾಖಲಿಸಿದ್ದರು. ಆದ್ರೆ ಚಾರ್ಜ್ ಶೀಟ್ನಲ್ಲಿ ಮುನಿರತ್ನ ಮತ್ತು ಪತ್ನಿ ಮಂಜುಳಾರ ಹೆಸರು ಕೈಬಿಡಲಾಗಿತ್ತು. ಈ ರೀತಿ ಹೆಸರು ಕೈಬಿಟ್ಟಿದ್ದನ್ನು ಪ್ರಶ್ನಿಸಿ ವಕೀಲ ಎನ್.ಪಿ. ಅಮೃತೇಶ್ ಅರ್ಜಿ ಸಲ್ಲಿಸಿದ್ದರು. ಇದೀಗ ಅಮೃತೇಶ್ರ ಅರ್ಜಿ ವಜಾಗೊಂಡಿದ್ದು ಮುನಿರತ್ನಗೆ ಹೈಕೋರ್ಟ್‌ನಿಂದ ರಿಲೀಫ್ ಸಿಕ್ಕಿದೆ.
ಇನ್ನು ಈ ಘಟನೆ ವೇಳೆ ಬಿಜೆಪಿ ಸದಸ್ಯರಾಗಿದ್ದ ರವೀಂದ್ರ, ನಾಗರಾಜು ಇನ್ನಿತರರು ಮುನಿರತ್ನ ವಿರುದ್ಧ ವಾಗ್ದಾಳಿ ನಡೆಸಿ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಎಂದು ಆಗ್ರಹಿಸಿದ್ದರು. ಅಲ್ಲದೆ ಬಿಬಿಎಂಪಿ ಕಡತಗಳು ಸಿಕ್ಕ ಕಾರಣ ಅವರನ್ನು ಬಂಧಿಸಿ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂಬ ಕೂಗು ಕೇಳಿ ಬಂದಿತ್ತು.
ಇದನ್ನೂ ಓದಿ: ಮುನಿರತ್ನ ವೋಟರ್ ಐಡಿ ಸಂಗ್ರಹ ಆರೋಪ; ತನಿಖಾ ಲೋಪ ಪರಿಗಣಿಸಿ, ವರದಿ ಸಲ್ಲಿಸುವಂತೆ ರಾಜ್ಯ ಪೊಲೀಸರಿಗೆ ಕೋರ್ಟ್ ಸೂಚನೆ