ಕಲಬುರಗಿ, ಅ.21: ಮಾರಕಾಸ್ತ್ರದಿಂದ ಕೊಚ್ಚಿ ಯುವಕನೋರ್ವನನ್ನು ಬರ್ಬರವಾಗಿ ಕೊಲೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ(Afzalpur) ತಾಲೂಕಿನ ಸಿದನೂರು ಗ್ರಾಮದಲ್ಲಿ ನಿನ್ನೆ(ಅ.20) ರಾತ್ರಿ ನಡೆದಿದೆ. ಬಲಭೀಮ್ ಸಗರ್(23) ಕೊಲೆಯಾದ ಯುವಕ. ಇನ್ನು ಬಲಭೀಮ ಈ ಹಿಂದೆ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದು, ಕೆಲ ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದ. ಹಳೇ ವೈಷಮ್ಯದ ಹಿನ್ನೆಲೆ ದುಷ್ಕರ್ಮಿಗಳು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ರೇವೂರು ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಬೆಂಗಳೂರು ಗ್ರಾಮಾಂತರ: ಹೆದ್ದಾರಿಯಲ್ಲಿ ಲಾರಿ ತಡೆದು ಎರಡು ಕಡೆ ಪ್ರತ್ಯೇಕ ದರೋಡೆ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮಹದೇವಪುರ ಬಳಿ ನಡೆದಿದೆ. ಲಾರಿ ಚಾಲಕ ಮೋಹನ್ ಕುಮಾರ್ ಎಂಬುವವರಿಗೆ ಚಾಕು ತೋರಿಸಿ 8 ಸಾವಿರ ನಗದು ಹಾಗೂ ಗೂಗಲ್ ಪೇ ಮುಖಾಂತರವಾಗಿ 10 ಸಾವಿರ ರೂ. ಪಡೆದು ದರೋಡೆ ಮಾಡಲಾಗಿದೆ. ಮೂರು ಜನ ಬೈಕ್ನಲ್ಲಿ ಬಂದಿದ್ದ ದುಷ್ಕರ್ಮಿಗಳಿಂದ ಈ ಕೃತ್ಯ ಎಸಗಲಾಗಿದೆ. ಇನ್ನು ಮತ್ತೊಂದು ಘಟನೆ ಹೊಸನಿಜಗಲ್ ಬಳಿ ನಾಲ್ವರು ಕಳ್ಳರು, ಚಾಲಕ ಕಣ್ಣನ್ ಎಂಬಾತನಿಗೆ ಬೆದರಿಸಿ ಲಾರಿಯಲ್ಲಿದ್ದ ನೌಕಾಪಡೆಗೆ ಸೇರಿದ್ದ ಬಾಕ್ಸ್ ಮತ್ತು ಶೂಗಳನ್ನ ಕದ್ದು ಪರಾರಿಯಾಗಿದ್ದಾರೆ. ಎರಡು ಬೈಕ್ನಲ್ಲಿ ಬಂದು ದರೋಡೆ ಮಾಡಿದ್ದು, ನೆಲಮಂಗಲ ಗ್ರಾಮಾಂತರ ಹಾಗೂ ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ:ಕಲಬುರಗಿ: ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಬರ್ಬರ ಕೊಲೆ; ಕಾರಣ?
ತುಮಕೂರು: ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಚಿರತೆ ಚಿರತೆ ಬಿದ್ದ ಘಟನೆ ತುಮಕೂರು ತಾಲೂಕಿನ ಪುರದಕಟ್ಟೆ ಕಾವಲ್ ಬಳಿ ನಡೆದಿದೆ. ಗ್ರಾಮದ ವೆಂಕಟಪ್ಪರವರ ತೋಟದ ಮನೆ ಬಳಿ ಬೋನಿಗೆ ಚಿರತೆ ಸಿಕ್ಕಿಬಿದ್ದಿದೆ. ಇನ್ನು ಈ ಚಿರತೆ ಕಳೆದ ಆರು ತಿಂಗಳುಗಳಿಂದ ಹಸು,ಕರು ಹಾಗೂ ಮೇಕೆಗಳ ಮೇಲೆ ದಾಳಿ ಮಾಡಿತ್ತು. ಸದ್ಯ ಚಿರತೆ ಸೆರೆ ಹಿನ್ನೆಲೆಯಲ್ಲಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ವಿಷಯ ತಿಳಿದು ತುಮಕೂರು ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಚಿರತೆಯನ್ನು ಸ್ಥಳಾಂತರಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:43 am, Sat, 21 October 23