Kalaburagi: ಕಲಬುರಗಿ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್​ ಮತ್ತು ಟೇಕಾಪ್ ಸೇವೆಗೆ ಡಿಜಿಸಿಎ ಅನುಮೋದನೆ

|

Updated on: May 19, 2023 | 8:04 AM

ಬಹು ನಿರೀಕ್ಷಿತ ಕಲಬುರಗಿ ವಿಮಾನ ನಿಲ್ದಾಣದಲ್ಲಿ ನೈಟ್ ​​ಲ್ಯಾಂಡಿಂಗೆ ಸೇವೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಗುರುವಾರ ಅನುಮೋದನೆ ನೀಡಿದೆ.

Kalaburagi: ಕಲಬುರಗಿ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್​ ಮತ್ತು ಟೇಕಾಪ್ ಸೇವೆಗೆ ಡಿಜಿಸಿಎ ಅನುಮೋದನೆ
ಕಲಬುರಗಿ ವಿಮಾನ ನಿಲ್ಧಾಣ
Follow us on

ಕಲಬುರಗಿ: ಬಹು ನಿರೀಕ್ಷಿತ ಕಲಬುರಗಿ ವಿಮಾನ ನಿಲ್ದಾಣದಲ್ಲಿ  (Kalaburagi airport) ನೈಟ್ ​​ಲ್ಯಾಂಡಿಂಗ್​ ಮತ್ತು ಟೇಕಾಪ್ ಸೇವೆಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಗುರುವಾರ ಅನುಮೋದನೆ ನೀಡಿದೆ. ಆ ಮೂಲಕ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಬಹುದಿನಗಳ ಕನಸು ಇದೀಗ ಈಡೇರುವ ಸಮಯ ಬಂದಿದೆ. ಕಲಬುರಗಿ ವಿಮಾನ ನಿಲ್ಧಾಣ ಆರಂಭವಾಗಿ ಮೂರು ವರ್ಷಗಳು ಕಳೆದಿವೆ. ಇಲ್ಲಿವರಗೆ ರಾತ್ರಿ ವಿಮಾನಗಳ ಲ್ಯಾಂಡಿಗ್ ಮತ್ತು ಟೇಕಾಪ್ ವ್ಯವಸ್ಥೆ ಇರಲಿಲ್ಲ. ಇದರಿಂದ ರಾತ್ರಿ ಸಮಯದಲ್ಲಿ ವಿಮಾನಗಳ ಹಾರಾಟ ವ್ಯವಸ್ಥೆಗೆ ತೊಂದರೆಯಾಗಿತ್ತು.

ಇದೀಗ ನೈಟ್ ಲ್ಯಾಂಡಿಂಗ್ ಮತ್ತು ಟೇಕಾಪ್​ಗೆ ಬೇಕಾದ ಎಲ್ಲಾ ಸೌಲಭ್ಯಗಳು ಸಿದ್ದವಾಗಿದ್ದು, ತಾಂತ್ರಿಕ ತಂಡ ಕೂಡ ಇತ್ತೀಚೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ನೈಟ್ ಲ್ಯಾಂಡಿಗ್ ಮತ್ತು ಟೇಕಾಪ್​ಗೆ ಗ್ರೀನ್ ಸಿಗ್ನಲ್ ನೀಡಿತ್ತು.

ಇದನ್ನೂ ಓದಿ: ಕಲಬುರಗಿ ಜನರಿಗೆ ಸಿಹಿಸುದ್ದಿ: ಶೀಘ್ರದಲ್ಲೇ ಕಲಬುರಗಿ ವಿಮಾನ ನಿಲ್ದಾಣದಿಂದ ರಾತ್ರಿ ಹಾರಾಟ ಸೇವೆ ಆರಂಭ

ಡಿಜಿಸಿಎ 27ರ ರನ್​ ವೇಯಲ್ಲಿ ನೈಟ್ ​​ಲ್ಯಾಂಡಿಂಗೆ ಪರವಾನಗಿ ನೀಡಿದೆ. 27ರ ರನ್​ ವೇಯಲ್ಲಿ ಯಾವುದೇ ನಿರ್ಬಂಧಗಳಿಲ್ಲ ಎಂದು ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಚಿಲಕ ಮಹೇಶ್​ ಹೇಳಿದ್ದಾರೆ. ತಡೆಗೋಡೆ ತೆರವುಗೊಳಿಸಿದ ನಂತರ ವಿಮಾನ ನಿಲ್ದಾಣವು ರನ್​ ವೇ 9ರಲ್ಲಿ ಹಾರಾಟ ನಡೆಸಲು ಅನುಮತಿ ಪಡೆಯಲಿದೆ.

ಕಳೆದ ಆರು ತಿಂಗಳಲ್ಲಿ ವಿಮಾನ ನಿಲ್ದಾಣದ ಗ್ರೌಂಡ್ ಲೈಟಿಂಗ್, ರನ್ ವೇ ಮೂಲಸೌಕರ್ಯ, ಉಪಗ್ರಹ ಆಧಾರಿತ ಪೈಲಟ್ ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ ಮತ್ತು ರಾತ್ರಿ ಲ್ಯಾಂಡಿಂಗ್ ಸೇವೆಗೆ ಅಗತ್ಯವಾದ ವಾಯು ಮಾರ್ಗ ನಕ್ಷೆಯನ್ನು ಸಿದ್ಧಪಡಿಸಲಾಗಿದೆ ಎಂದು ಡಾ.ಮಹೇಶ್ ಹೇಳಿದರು. ಈ ಪ್ರದೇಶದಲ್ಲಿನ ಎತ್ತರದ ಮರಗಳು ಮತ್ತು ವಿದ್ಯುತ್ ಕಂಬಗಳನ್ನು ತೆರವುಗೊಳಿಸಲಾಗಿದೆ. ರಾತ್ರಿ ಲ್ಯಾಂಡಿಂಗ್​​ಗಾಗಿ ರನ್​ ವೇ ಯನ್ನು 140 ಮೀಟರ್​ನಿಂದ 280 ಮೀಟರ್​ಗೆ ವಿಸ್ತರಿಸಲು ತಾಂತ್ರಿಕ ವರದಿಯನ್ನು ಡಿಜಿಸಿಎಗೆ ಕಳುಹಿಸಲಾಗಿದೆ.

ಇದನ್ನೂ ಓದಿ: ‘ಜನಶಕ್ತಿ’ ಕಲಾಕೃತಿ ಪ್ರದರ್ಶನ: ಪ್ರಧಾನಿ ಮೋದಿ ಭೇಟಿಯಾದ ಕನ್ನಡದ ಕಲಾವಿದ ಈರಣ್ಣ ಯಾರು ಗೊತ್ತಾ?

ನೈಟ್ ಲ್ಯಾಂಡಿಂಗ್ ಏನೆಲ್ಲಾ ಅನಕೂಲತೆಗಳಾಗಲಿವೆ?

ಕಲಬುರಗಿ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಮತ್ತು ಟೇಕಾಪ್ ವ್ಯವಸ್ಥೆಯಿಂದ ಜನರಿಗೆ ಅನೇಕ ಅನುಕೂಲತೆಗಳು ಸಿಗಲಿವೆ. ವಿಮಾನಗಳ ಹಾರಾಟ ಸಂಖ್ಯೆ ಹೆಚ್ಚಾಗಲಿದ್ದು, ರಾತ್ರಿ ಸಮಯದಲ್ಲಿ ಕೂಡ ಜನರು ಪ್ರಯಾಣ ಮಾಡಬಹುದು, ಬಂದಿಳಿಯಬಹುದಾಗಿದೆ. ಸದ್ಯ ಮುಂಜಾನೆ ಏಳರಿಂದ ಸಂಜೆ ಆರರವರಗೆ ಮಾತ್ರ ವಿಮಾನಗಳ ಹಾರಾಟಕ್ಕೆ ಅವಕಾಶವಿತ್ತು. ಇನ್ನು ನೈಟ್ ಲ್ಯಾಂಡಿಂಗ್ ಮತ್ತು ಟೇಕಾಪ್​ನಿಂದ ರೋಗಿಗಳನ್ನು ದಿನದ ಇಪ್ಪತ್ನಾಲ್ಕು ಗಂಟೆ ಕೂಡಾ ಏರ್ ಲಿಪ್ಟ್ ಮಾಡಲು ಅನಕೂಲವಾಗಲಿದೆ. ಈ ಮೊದಲು ಹಗಲೊತ್ತಿನಲ್ಲಿ ಮಾತ್ರ ಏರ್‌ ಲಿಪ್ಟ್ ಮಾಡಲು ಅವಕಾಶವಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:02 am, Fri, 19 May 23