Earthquake: ಕಲಬುರಗಿ ಜಿಲ್ಲೆಯ ಹಲವೆಡೆ ಲಘು ಭೂಕಂಪನ: ಭಾರಿ ಶಬ್ದಕ್ಕೆ ಬೆಚ್ಚಿಬಿದ್ದ ಗ್ರಾಮಸ್ಥರು

| Updated By: ಗಂಗಾಧರ​ ಬ. ಸಾಬೋಜಿ

Updated on: Sep 01, 2022 | 8:13 AM

ರಾತ್ರಿ 11 ಗಂಟೆಯಲ್ಲಿ ಭಾರಿ ಶಬ್ದದೊಂದಿಗೆ  ಭೂಮಿ ಕಂಪಿಸಿದ್ದು, ಭಯದಿಂದ ಮನೆಗಳಿಂದ ಗ್ರಾಮಸ್ಥರು ಹೊರ ಓಡಿಬಂದಿದ್ದಾರೆ.

Earthquake: ಕಲಬುರಗಿ ಜಿಲ್ಲೆಯ ಹಲವೆಡೆ ಲಘು ಭೂಕಂಪನ: ಭಾರಿ ಶಬ್ದಕ್ಕೆ ಬೆಚ್ಚಿಬಿದ್ದ ಗ್ರಾಮಸ್ಥರು
ಭೂಕಂಪ (ಸಂಗ್ರಹ ಚಿತ್ರ)
Follow us on

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಹಲವೆಡೆ ಭೂಮಿ ಕಂಪಿಸಿದ ಅನುಭವ ಉಂಟಾಗಿದ್ದು, ಗಡಿಕೇಶ್ವರ ಸಮೀಪದ ಹಲವು ಗ್ರಾಮಗಳಲ್ಲಿ ಭಾರಿ ಶಬ್ದದೊಂದಿಗೆ ಲಘು ಭೂಕಂಪನ ಅನುಭವಾಗಿದೆ. ರಾತ್ರಿ 11 ಗಂಟೆಯಲ್ಲಿ ಭಾರಿ ಶಬ್ದದೊಂದಿಗೆ  ಭೂಮಿ ಕಂಪಿಸಿದ್ದು, ಭಯದಿಂದ ಮನೆಗಳಿಂದ ಗ್ರಾಮಸ್ಥರು ಹೊರ ಓಡಿಬಂದಿದ್ದಾರೆ. ಚಿಂಚೋಳಿ ತಾಲೂಕಿನ ಚಿಮ್ಮಾಇದ್ಲಾಯಿ, ದಸ್ತಾಪುರ, ಐಪಿ ಹೊಸಹಳ್ಳಿ, ಸುಲೇಪೇಟ್​ ಸೇರಿ ಹಲವೆಡೆ ಭೂಕಂಪನವಾಗಿದ್ದು, ಭಾರಿ ಶಬ್ದದಿಂದಾಗಿ  ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಸರಣಿ ಭೂಕಂಪನ: 3.9ರಷ್ಟು ತೀವ್ರತೆ ದಾಖಲು

ವಿಜಯಪುರ: ಜಿಲ್ಲೆಯಲ್ಲಿ (ಆಗಸ್ಟ್​ 26) ಭೂಕಂಪನ (Earthquake) ಆಗಿದ್ದು, ನಿನ್ನೆ ರಾತ್ರಿ 8.51 ಸುಮಾರಿಗೆ ಮತ್ತು ಮಧ್ಯರಾತ್ರಿ 2.18ಕ್ಕೆ ಭೂಮಿ ಕಂಪಿಸಿದ್ದು, 3.9 ತೀವ್ರತೆ ರಿಕ್ಟರ್ ಮಾಪನದಲ್ಲಿ ದಾಖಲಾಗಿದೆ. ವಿಜಯಪುರ ತಾಲೂಕಿನ ಹೊನ್ನುಟಗಿ ಹಾಗೂ ಸುತ್ತಮುತ್ತಲೂ ಭೂಂಕಪನ ದೃಢವಾಗಿದ್ದು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರದಿಂದ ಅಧಿಕೃತ ಮಾಹಿತಿ  ನೀಡಲಾಗಿದೆ. ಮೇಲಿಂದ ಮೇಲೆ ಭೂಕಂಪನ ಉಂಟಾಗುತ್ತಿದ್ದು, ಈ ಕುರಿತು ಇಂದು ತಜ್ಞ ವಿಜ್ಞಾನಿಗಳು ಜಿಲ್ಲೆಗೆ ಆಗಮಿಸಿ ಪರೀಕ್ಷೆ ನಡೆಸಲಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಿಗೆ ತೆರಳಿ ಆಧ್ಯಯನ ಮಾಡಲಿದ್ದಾರೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಇದನ್ನೂ ಓದಿ: ಮುರುಘಾಶ್ರೀಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸ್ ವಿಚಾರ: ಚಿತ್ರದುರ್ಗ ಎಸ್​​ಪಿ ಪರಶುರಾಮ್​ಗೆ NCPCR ನೋಟಿಸ್ ಜಾರಿ

ಸಾಯಂಕಾಲ ಹಾಗೂ ರಾತ್ರಿ ಭೂಮಿ‌ ಕಂಪಸಿದ್ದು ರಿಕ್ಟರ್ ಮಾಪನದಲ್ಲಿ ‌ದಾಖಲಾಗಿದೆ. ಇಷ್ಟರ ಬಳಿಕ ನಸುಕಿನ ಜಾವ 2-21ಕ್ಕೆ ಕಂಪಿಸ ಭೂಮಿ‌ ಕಂಪಿಸಿದ ಅನುಭವವಾಗಿದೆ. ವಿಜಯಪುರ ನಗರ ಬಸವನಬಾಗೇವಾಡಿ, ಸಿಂದಗಿ, ಇಂಡಿ, ನೆರೆಯ ಬಾಗಲಕೋಟೆಯ ಜಮಖಂಡಿ ಹಾಗೂ ನೆರೆಯ ಮಹಾರಾಷ್ಟ್ರದ ಸೊಲ್ಲಾಪುರದಲ್ಲೂ ಕಂಪನದ ಅನುಭವ ಉಂಟಾಗಿದೆ. ಇಷ್ಟೇ ಅಲ್ಲದೆ ಇಂದು ಮುಂಜಾನೆ 6.58ಕ್ಕೆ ಮತ್ತೇ ಭೂಕಂಪನದ ಅನುಭವವಾಗಿದೆ. ಈ ಕಂಪನಗಳ ಕುರಿತು ಇನ್ನೂ ಮಾಹಿತಿ ತಿಳಿದಿಲ್ಲ. ಎಷ್ಟು ಪ್ರಮಾಣದಲ್ಲಿ ಕಂಪನವಾಗಿದೆ ಎಂದು ಕರಾನೈವಿನಿ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಬೇಕಿದೆ. ಮೇಲಿಂದ ಮೇಲೆ ಸರಣಿ ರೂಪದಲ್ಲಿ ಭೂಕಂಪನ ಕಾಡುತ್ತಿದ್ದು, ಇಂದು ಭೂಕಂಪನ ಕುರಿತು ತಜ್ಞ ವಿಜ್ಞಾನಿಗಳು ಪರೀಕ್ಷೆ ನಡೆಸಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.