‘ಸುದೀಪ್ ಅಂಕಲ್.. ದಯವಿಟ್ಟು ಮನಸ್ಸು ಮಾಡಿ ನನಗೆ ಬಿಗ್​ ಬಾಸ್ ಮನೆಗೆ ಹೋಗೋಕೆ ಅವಕಾಶ ಮಾಡಿಕೊಡಿ, ಪ್ಲೀಸ್​!’

ನಾನು ತುಂಬಾ ಚಿಕ್ಕವಳು. ಹೀಗಾಗಿ, ಅದು ಸಾಧ್ಯವಿಲ್ಲ ಅನ್ನೋದು ನನಗೂ ಗೊತ್ತು. ಆದ್ರೂ ಸುದೀಪ್ ಅಂಕಲ್, ನೀವು ಮನಸ್ಸು ಮಾಡಿದರೆ ನನಗೆ ಒಂದು ಚಾನ್ಸ್​ ಸಿಗುತ್ತೆ. ಬಿಗ್ ಬಾಸ್ ಮನೆಗೆ ಹೋಗಿ ಬರಲು ನನಗೆ ಅವಕಾಶ ಮಾಡಿಕೊಡಿ ಪ್ಲೀಸ್ ಎಂದು ರಾಜಶ್ರೀ ಕ್ಯೂಟ್​ ಕ್ಯೂಟ್​ ಆಗಿ ರಿಕ್ವೆಸ್ಟ್ ಮಾಡಿದ್ದಾಳೆ.

‘ಸುದೀಪ್ ಅಂಕಲ್.. ದಯವಿಟ್ಟು ಮನಸ್ಸು ಮಾಡಿ ನನಗೆ ಬಿಗ್​ ಬಾಸ್ ಮನೆಗೆ ಹೋಗೋಕೆ ಅವಕಾಶ ಮಾಡಿಕೊಡಿ, ಪ್ಲೀಸ್​!’
ಸುದೀಪ್ ಅಂಕಲ್​ಗೆ ಪೋರಿಯ ಕ್ಯೂಟ್​ ಮನವಿ
Edited By:

Updated on: Jun 23, 2021 | 1:36 PM

ಕಲಬುರಗಿ: ಬಿಗ್ ಬಾಸ್ ಮನೆಗೆ ಪ್ರವೇಶ ನೀಡುವಂತೆ ಬಾಲಕಿಯೊಬ್ಬಳು ಮನವಿ ಮಾಡಿರೋ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲವಾರ ಮೂಲದ 8 ವರ್ಷದ ಪೋರಿ ರಾಜಶ್ರೀ ತನ್ನನ್ನು ಬಿಗ್ ಬಾಸ್ ಮನೆಗೆ ಸೇರಿಸಿಕೊಳ್ಳಲು ಕಿಚ್ಚ ಸುದೀಪ್​ಗೆ ನಿವೇದನೆ ಮಾಡಿದ್ದಾಳೆ.

1.5 ನಿಮಿಷದ ಸೆಲ್ಫೀ ವಿಡಿಯೋ ಮೂಲಕ ಕಿಚ್ಚನಿಗೆ ಮನವಿ ಮಾಡಿರೋ ರಾಜಶ್ರೀ ನನಗೆ ಬಿಗ್ ಬಾಸ್ ಮನೆ ಅಂದ್ರೆ ತುಂಬಾನೇ ಇಷ್ಟ. ಎಲ್ಲ ಸ್ಪರ್ಧಿಗಳ ಜೊತೆ ಇರಲು ತುಂಬಾ ಆಸೆ ಮತ್ತು ಆಸಕ್ತಿಯಿದೆ. ನಾನು ತುಂಬಾ ಚಿಕ್ಕವಳು. ಹೀಗಾಗಿ, ಅದು ಸಾಧ್ಯವಿಲ್ಲ ಅನ್ನೋದು ನನಗೂ ಗೊತ್ತು. ಆದ್ರೂ ಸುದೀಪ್ ಅಂಕಲ್, ನೀವು ಮನಸ್ಸು ಮಾಡಿದರೆ ನನಗೆ ಒಂದು ಚಾನ್ಸ್​ ಸಿಗುತ್ತೆ. ಬಿಗ್ ಬಾಸ್ ಮನೆಗೆ ಹೋಗಿ ಬರಲು ನನಗೆ ಅವಕಾಶ ಮಾಡಿಕೊಡಿ ಪ್ಲೀಸ್ ಎಂದು ರಾಜಶ್ರೀ ಕ್ಯೂಟ್​ ಕ್ಯೂಟ್​ ಆಗಿ ರಿಕ್ವೆಸ್ಟ್ ಮಾಡಿದ್ದಾಳೆ.

ಅಂದ ಹಾಗೆ, ರಾಜಶ್ರೀ ತಂದೆ ಸಂಜಯ್ ಕುಲಕರ್ಣಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಸೀನಿಯರ್ ಲ್ಯಾಬ್ ಟೆಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದ್ಯ, ರಾಜಶ್ರೀ ಮಾಡಿರುವ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದೆ

Published On - 8:41 pm, Mon, 1 March 21