ಕಲಬುರಗಿ, ಜ.04: ‘ನಾನು ಕರಸೇವಕ ಅರೆಸ್ಟ್ ಮಾಡಿ ಎನ್ನುವ ಬಿಜೆಪಿ ಅಭಿಯಾನಕ್ಕೆ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ(Eshwar Khandre) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಲಬುರಗಿ(Kalaburagi)ಯಲ್ಲಿ ಮಾತನಾಡಿದ ಅವರು ‘ ಬಿಜೆಪಿಯವರು ಜಾತಿ, ಧರ್ಮಗಳ ನಡುವೆ ವಿಷಬೀಜ ಬಿತ್ತುತ್ತಿದ್ದಾರೆ. ಭಾವನಾತ್ಮಕವಾಗಿ ಜನರ ಕೆರಳಿಸಿ ಲಾಭ ಮಾಡಿಕೊಳ್ಳುವುದು ಬಿಜೆಪಿಯ ಗುಣ. ಜನ ಬಹಳಷ್ಟು ಜಾಗೃತರಾಗಿದ್ದಾರೆ, ಈ ರೀತಿಯ ವಿಷ ಬೀಜ ಬಿತ್ತುವ ಬಿಜೆಪಿಗೆ ರಾಜ್ಯದ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಮ, ಕೃಷ್ಣ, ಸೀತಾ ಎಲ್ಲಾ ಜನರ ಭಕ್ತಿ ಮತ್ತು ನಂಬಿಕೆಗೆ ಬಿಟ್ಟಿದ್ದು. ನಾವು ದೇವರ ಭಕ್ತರೇ ಇದ್ದೆವೆ. ಬಿಜೆಪಿಯವರು ದೇಶಕ್ಕಾಗಿ ಏನೇನು ಮಾಡಿಲ್ಲ. ದೇಶಕ್ಕಾಗಿ ಎಲ್ಲಾ ರೀತಿಯಲ್ಲಿ ತ್ಯಾಗ ಮಾಡಿದ್ದು ಕಾಂಗ್ರೆಸ್. ನ್ಯಾವ್ಯಾಕೆ ಹೊಟ್ಟೆ ಕಿಚ್ಚು ಪಡಬೇಕು?, ರಾಷ್ಟ್ರವಿರೋಧಿ ಸಂಘಟನೆಗಳಿಗೆ ಯಾವತ್ತಿಗೂ ಬೆಂಬಲ ಕೊಡುವವರು ಬಿಜೆಪಿಯವರು. ನಮಗೆ ನಷ್ಟ ಆದ್ರೂ ಪರವಾಗಿಲ್ಲ, ನಾವು ರಾಷ್ಟ್ರ ವಿರೋಧಿಗಳಿಗೆ ಬೆಂಬಲ ಕೊಡಲಾರೆವು ಎಂದು ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.
ಇದನ್ನೂ ಓದಿ:ನಗರ ಪ್ರದೇಶದ ಅನಧಿಕೃತ ಸ್ವತ್ತುಗಳಿಗೆ ‘ಬಿ’ ಖಾತೆ: ಈಶ್ವರ ಖಂಡ್ರೆ ಅಧ್ಯಕ್ಷತೆಯ ಉಪಸಮಿತಿಯ ಸಭೆಯಲ್ಲಿ ನಿರ್ಧಾರ
ಭಾರತ ಹಿಂದೂ ದೇಶವಲ್ಲವೆಂಬ ಡಾ.ಯತೀಂದ್ರ ಹೇಳಿಕೆ ವಿಚಾರ ‘ಭಾರತ ಹಿಂದೂ ರಾಷ್ಟ್ರವೇ, ಹಿಂದೂ ಎನ್ನುವ ಶಬ್ದವೇ ಜಾತ್ಯತೀತ ಎಂದು
ಮಂಗಳೂರಿನಲ್ಲಿ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲು ತಿರುಗೇಟು ನೀಡಿದ್ದಾರೆ. ಈ ದೇಶ ರಾಮರಾಜ್ಯ ಆಗಬೇಕು ಎಂದಿದ್ದು ಮಹಾತ್ಮ ಗಾಂಧೀಜಿ,
ಗಾಂಧಿ ಜಾತ್ಯತೀತ ರಾಷ್ಟ್ರ ಮಾಡಿ ಎಂದಿಲ್ಲ, ರಾಮರಾಜ್ಯ ಮಾಡಿ ಎಂದಿದ್ದರು. ರಾಮ ರಾಜ್ಯದ ಪರಿಕಲ್ಪನೆಯೇ ಹಿಂದೂ ರಾಷ್ಟ್ರದ ಪರಿಕಲ್ಪನೆ. ಆದರೆ, ಗಾಂಧೀಜಿಯನ್ನು ಡಾ.ಯತೀಂದ್ರ ಒಪ್ಪುವುದಿಲ್ಲ ಅಂತಾಯಿತು. ರಾಮ ಎಂಬ ಹೆಸರನ್ನು ಯಾರು ಬೇಕಾದ್ರೂ ಇಟ್ಟುಕೊಳ್ಳಬಹುದು. ಸಿದ್ದರಾಮಯ್ಯ ಹೆಸರಲ್ಲಿ ರಾಮ ಅಂತಾ ಇದೆ, ಆದ್ರೆ, ರಾವಣನ ಗುಣವಿದೆ ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:42 pm, Thu, 4 January 24