Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸದ್ದಿಲ್ಲದೇ ಬಂದು ಹೋದ ರೈಲು, ಕಲಬುರಗಿ ನಿಲ್ದಾಣದಲ್ಲೇ ಕಾದು ಕುಳಿತಿದ್ದ ಪ್ರಯಾಣಿಕರು ಕಂಗಾಲು

ರೈಲು ಸದ್ದಿಲ್ಲದೇ ಬಂದು ಪ್ರಯಾಣಿಕರನ್ನು ಬಿಟ್ಟು ಹೋಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಅರೇ ರೈಲು ಬಂದು ಹೋದರೂ ಪ್ರಯಾಣಿಕರಿಗೆ ಹೇಗೆ ಗೊತ್ತಾಗಲಿಲ್ಲ? ಆಗಿದ್ದೇನು? ಪ್ರಯಾಣಿಕರು ಹೇಳಿದ್ದೇನು? ಇಲ್ಲಿದೆ ನೋಡಿ ವಿವರ.

ಸದ್ದಿಲ್ಲದೇ ಬಂದು ಹೋದ ರೈಲು, ಕಲಬುರಗಿ ನಿಲ್ದಾಣದಲ್ಲೇ ಕಾದು ಕುಳಿತಿದ್ದ ಪ್ರಯಾಣಿಕರು ಕಂಗಾಲು
Follow us
ರಮೇಶ್ ಬಿ. ಜವಳಗೇರಾ
|

Updated on: Jun 26, 2023 | 8:34 AM

ಕಲಬುರಗಿ: ರೈಲು, ಬಸ್, ವಿಮಾನಗಳು ಪ್ಯಾಸೆಂಜರ್​ಗಳನ್ನು ಬಿಟ್ಟು ಹೋಗಿರುವ ಪ್ರಸಂಗಗಳು ಬೆಳಕಿಗೆ ಬಂದಿವೆ. ಅದರಂತೆ ಇದೀಗ ಕರ್ನಾಟಕದಲ್ಲಿ ರೈಲು ಸದ್ದಿಲ್ಲದೇ ಬಂದು ಪ್ರಯಾಣಿಕರನ್ನು ಬಿಟ್ಟು ಹೋಗಿರುವುದು ವರದಿಯಾಗಿದೆ. ಹೌದು… ಹುಬ್ಬಳ್ಳಿಯಿಂದ ಹೊರಟು ಕಲಬುರಗಿ ಮಾರ್ಗವಾಗಿ ಸಿಕಂದರಾಬಾದ್‌ಗೆ ಹೊರಟಿದ್ದ ಎಕ್ಸ್‌ಪ್ರೆಸ್‌ ರೈಲು ಪ್ರಯಾಣಿಕರನ್ನು ಬಿಟ್ಟು ಹೋಗಿರುವ ಘಟನೆ ಭಾನುವಾರ ನಡೆದಿದೆ. ಕಲಬುರಗಿ ರೈಲು ನಿಲ್ದಾಣದ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಇದರಿಂದ ರೈಲು ಈಗ ಬರುತ್ತೆ ಆಗ ಬರುತ್ತೆ ಎಂದು ಕಾದು ಕುಳಿತಿದ್ದ ಪ್ರಯಾಣಿಕ ರೈಲ್ವೆ ಸ್ಟೇಷನ್​ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Fact Check: ಕಿಟಕಿಯಿಂದ ಬಸ್ ಹತ್ತುವಾಗ ಮಹಿಳೆಯ ಕೈ ಕಟ್ ಆಯಿತೇ?: ವೈರಲ್ ವಿಡಿಯೋದ ಸತ್ಯಾಸತ್ಯತೆ ಇಲ್ಲಿದೆ

ಆಗಿದ್ದೇನು?

ಹುಬ್ಬಳ್ಳಿಯಿಂದ ಶನಿವಾರ ರಾತ್ರಿಯೆ ಹೊರಟಿದ್ದ ಸಿಕಂದರಾಬಾದ್‌ ಎಕ್ಸಪ್ರೆಸ್‌ ರೈಲು ಬೆಳಗ್ಗೆ 6.15 ಗಂಟೆಗೆ ಕಲಬುರಗಿಗೆ ಬರಬೇಕಿತ್ತು. ಅದರಂತೆ ರೈಲು ಕಲಬುರಗಿ ರೈಲ್ವೆ ನಿಲ್ದಾಣಕ್ಕೆ ಬಂದು ಹೋಗಿದೆ. ಆದ್ರೆ, ಈ ರೈಲು ಕಲಬುರಗಿ ನಿಲ್ದಾಣಕ್ಕೆ ಬಂದು ಹೋಗಿರುವುದು ಪ್ರಯಾಣಿಕರ ಗಮನಕ್ಕೆ ಬಂದಿಲ್ಲ. ಕಾರಣ ಈ ರೈಲಿನ ಆಗಮನ, ನಿರ್ಗಮನದ ಬಗ್ಗೆ ಯಾವುದೇ ಅನೌನ್ಸ್​ಮೆಂಟ್ ಆಗಿಲ್ಲ. ಎಲ್​ಇಡಿ ಪರದೆ ಮೇಲೂ ರೈಲಿನ ಬಗ್ಗೆ ಯಾವುದೇ ಮಾಹಿತಿ ಡಿಸ್ಪ್ಲೇ ಆಗಿಲ್ಲ. ಈ ಹಿನ್ನೆಲೆಯಲ್ಲಿ ಈ ರೈಲಿಗಾಗಿ ಕಾಯುತ್ತಿದ್ದ ನೂರಾರು ಪ್ರಯಾಣಿಕರು ಕಲಬುರಗಿ ರೈಲ್ವೇ ನಿಲ್ದಾಣದಲ್ಲಿ ಉಳಿಯಬೇಕಾಯ್ತು.

ಪ್ರಯಾಣಿಕರ ಗಮನಕ್ಕೆ ಬಂದಿದ್ದೇಗೆ?

ಸಿಕಂದರಾಬಾದ್‌ ರೈಲು ಬಳಿಕ ಬರುವ ಹುಸೇನ್‌ ಸಾಗರ್‌ ರೈಲು ಆಗಮನದ ಘೋಷಣೆಯಾಗುತ್ತಿದ್ದಂತೆಯೇ ಪ್ರಯಾಣಿಕರು ಗಾಬರಿಯಾಗಿದ್ದರು. ಸಿಕಂದರಾಬಾದ್ ರೈಲು ಬಂದಿಲ್ಲ. ಆಗಲೇ ಹುಸೇನ್ ಸಾಗರ್​ ರೈಲು ಬರುತ್ತಿದೆ ಅಂತ ಪ್ರಯಾಣಿಕರು ಗಾಬರಿಯಿಂದ ರೈಲ್ವೆ ಸಿಬ್ಬಂದಿಯನ್ನು ವಿಚಾರಿಸಿದಾಗ ಸಿಕಂ​ದ​ರಾ​ಬಾದ್‌ ರೈಲು ಅದಾಗಲೇ ಬಂದು ಹೋಗಿರುವುದು ಬೆಳಕಿಗೆ ಬಂದಿದೆ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೊನೆಗೆ ಕಲಬುರಗಿ ರೈಲ್ವೆ ನಿಲ್ದಾಣದ ಅಧಿಕಾರಿಗಳು, ಹುಸೇನ್‌ ಸಾಗರ್‌ ರೈಲಲ್ಲಿ ಪ್ರಯಾಣಿಕರನ್ನು ಹೈದರಾಬಾದ್​ಗೆ ಕಳುಹಿಸುವ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.

ಪ್ರಯಾಣಿಕರು ಹೇಳಿದ್ದೇನು?

ಕಲಬುರಗಿಯಿಂದ ಸಿಕಂದರಾಬಾದ್‌ಗೆ ತೆರಳಬೇಕಿದ್ದ ಪ್ರಯಾಣಿರೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸಿಕಂದರಾಬಾದ್‌ ಎಕ್ಸಪ್ರೆಸ್‌ 6.32ಕ್ಕೆ ಬರಲಿದೆ ಎಂದು ಫಲಕದಲ್ಲಿ ವೇಳೆ ಸಾರಲಾಗುತ್ತಿದ್ದರೂ ರೈಲೇ ಬರಲಿಲ್ಲ. ಆಮೇಲೆ ರೈಲ್ವೆ ಸಿಬ್ಬಂದಿ ನಂತರ ಬಂದ ಹುಸೇನ್‌ ಸಾಗರ್‌ ರೈಲಿನ ಮಾಹಿತಿ ನೀಡುತ್ತ ಘೋಷಣೆ ಕೂಗಿದಾಗಲಷ್ಟೇ ನಾವು ಹತ್ತಬೇಕಿದ್ದ ಸಿಕಂದರಾಬಾರ್‌ ರೈಲು ಹೋಗಿರುವುದು ಗಮನಕ್ಕೆ ಬಂದಿದೆ. 60ಕ್ಕೂ ಹೆಚ್ಚು ಪ್ರಯಾಣಿಕರು ಮುಂಗಡ ಟಿಕೆಟ್‌ ಕಾಯ್ದಿರಿಸಿದ್ದರು. ಆದ್ರೆ, ಇಲ್ಲಿನ ಸಿಬ್ಬಂದಿ ನಿರ್ಲಕ್ಷ್ಯತನದಿಂದ ರೈಲು ನಮ್ಮನನ್ನು ಬಿಟ್ಟು ಹೋಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಮತ್ತೋರ್ವ ಪ್ರಯಾಣಿಕ ಪ್ರತಿಕ್ರಿಯಿಸಿದ್ದು, ಸಿಕಂದರಬಾದ್ ರೈಲು ಬಿಟ್ಟು ಹೋಗಿದ್ದರಿಂದ ನಾವು ಹೈದರಾಬಾದ್​ಗೆ ಮಧ್ಯಾಹ್ನ ತಲುಪಬೇಕಾಯ್ತು. ಇನ್ನು ಸಿಕಂದರಬಾದ್ ರೈಲಿಗೆ ಟಿಕೆಟ್​ ಬುಕ್ ಮಾಡಿಕೊಂಡಿದ್ದರೂ ಸಹ ಹುಸೇನ್‌ ಸಾಗರ್‌ ರೈಲಿನ ನಿಂತುಕೊಂಡೇ ಬರಬೇಕಾಯ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್
ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲಿ ವಿಶ್ವಾಸ ಹೊಂದಿದೆ: ಎಂಬಿ ಪಾಟೀಲ್
ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲಿ ವಿಶ್ವಾಸ ಹೊಂದಿದೆ: ಎಂಬಿ ಪಾಟೀಲ್