AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Baburao Chinchansur: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಕಾರು ಅಪಘಾತ

ಗುರುಮಠಕಲ್‌ ಕ್ಷೇತ್ರದ‌ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್​ ಅವರ ಕಾರು ಅಪಘಾತವಾಗಿದೆ.

Baburao Chinchansur: ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಕಾರು ಅಪಘಾತ
ಮಾಜಿ ಸಚಿವ ಬಾಬುರಾವ್ ಚಿಂಚನಸೂರ್
ವಿವೇಕ ಬಿರಾದಾರ
|

Updated on:Apr 15, 2023 | 9:48 AM

Share

ಕಲಬುರಗಿ: ಗುರುಮಠಕಲ್‌ ಕ್ಷೇತ್ರದ‌ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ( Baburao Chinchansur) ಅವರ ಕಾರು ಅಪಘಾತವಾಗಿದೆ. ರಾತ್ರಿ 12:30 ರ ಸುಮಾರಿಗೆ ಕಲಬುರಗಿಯ (Kalaburagi) ಆಕಾಶವಾಣಿ (Akashvani) ಕೇಂದ್ರದ ಬಳಿ ಘಟನೆ ನಡೆದಿದೆ. ಅಪಘಾತದಲ್ಲಿ ಚಿಂಚನಸೂರ್ ಕಾಲು ಮತ್ತು ಮುಖಕ್ಕೆ ಗಾಯಗಳಾಗಿವೆ. ಸ್ಥಳಿಯರು ಬಾಬುರಾವ್ ಚಿಂಚನಸೂರ್ ಅವರನ್ನು ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಶುಕ್ರವಾರ ಚುನಾವಣಾ ಪ್ರಚಾರ ಮುಗಿಸಿ ಯಾದಗಿರಿಯಿಂದ ಕಲಬುರಗಿಯತ್ತ ಪ್ರಯಾಣಿಸುತ್ತಿದ್ದ ವೇಳೆ ನಿದ್ದೆಯ ಮಂಪರಿನಲ್ಲಿದ್ದ ವಾಹನ ಚಾಲಕನಿಗೆ ರಸ್ತೆಯ ಮಧ್ಯೆ ಇರುವ ಗುಂಡಿ ಕಾಣದೆ ಕಾರು ಗುಂಡಿಯಲ್ಲಿ ಸಿಲುಕಿ ಸ್ಕಿಡ್​ ಆಗಿದೆ. ಇದರಿಂದ ವಾಹನ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.

ಕಾರ್​ನಲ್ಲಿ ಬಾಬುರಾವ್‌ ಚಿಂಚನಸೂರು, ಇಬ್ಬರು ಚಾಲಕರು, ಓರ್ವ ಗನ್ ಮ್ಯಾನ್ ಇದ್ದರು ಎಂದು ತಿಳಿದು ಬಂದಿದ್ದು, ಇವರಿಗೆ ಯಾವುದೇ ಗಾಯಗಳಾಗಿಲ್ಲ. ಗುರುಮಠಕಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಬಾಬುರಾವ ಅವರ ಮನೆ ಕಲಬುರಗಿಯ ಶಾಂತಿನಗರದಲ್ಲಿದ್ದು, ಕ್ಷೇತ್ರದಲ್ಲಿ ಪ್ರಚಾರ ಮುಗಿಸಿಕೊಂಡು ವಾಪಸ್ ಬರುವಾಗ ಅಪಘಾತ ಸಂಭವಿಸಿದೆ.

ಕಾಂಗ್ರೆಸ್​-ಬಿಜೆಪಿ-ಕಾಂಗ್ರೆಸ್​ ಚಿಂಚನಸೂರ್

ಹೈದರಾಬಾದ್ ಕರ್ನಾಟಕ ಭಾಗದ ಪ್ರಭಾವಿ ನಾಯಕ, ಮಾಜಿ ಸಚಿವ ಬಾಬೂರಾವ್ ಚಿಂಚನಸೂರು 2008, 2013ರ ಚುನಾವಣೆಯಲ್ಲಿ ಯಾದಗಿರಿ ಜಿಲ್ಲೆಯ ಗುರುಮಿಠಕಲ್ ಕ್ಷೇತ್ರದಿಂದ ಗೆದ್ದಿದ್ದ ಬಾಬೂರಾವ್ ಚಿಂಚನಸೂರು ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರು ಆಗಿದ್ದರು. ಆದರೆ, 2018ರ ಚುನಾವಣೆಯಲ್ಲಿನ ಸೋಲಿಗೆ ಕಾಂಗ್ರೆಸ್ ನಾಯಕರೇ ಕಾರಣ ಎಂದು ಬಾಬೂರಾವ್ ಚಿಂಚನಸೂರು ಅವರು ಆರೋಪ ಮಾಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಈಗ ಹಳೇ ಗಂಡನ ಪಾದವೇ ಗತಿ ಎಂಬಂತೆ ಬಿಜೆಪಿ ಎಂಎಲ್​ಸಿ ಸ್ಥಾನ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಮತ್ತೆ ಕಾಂಗ್ರೆಸ್​ ಸೇರಿದ್ದಾರೆ. ಈಗ ಗುರುಮಠಕಲ್‌ ಕ್ಷೇತ್ರದಿಂದ ಟಿಕೆಟ್​ ಗಿಟ್ಟಿಸಿಕೊಂಡಿದ್ದು, ಸ್ಪರ್ಧೆಗೆ ಇಳಿದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 6:27 am, Sat, 15 April 23