ಕಲಬುರಗಿ: ಚಿಂಚೋಳಿ ತಾಲೂಕಿನ ಗಡಿಕೇಶ್ವರ ಮತ್ತು ಹೊಸಳ್ಳಿ ಹೆಚ್ ಗ್ರಾಮಗಳಲ್ಲಿ ಭಾರಿ ಶಬ್ದ ಕೇಳಿಬಂದಿದೆ. ಕೆಲ ದಿನಗಳ ಹಿಂದೆ ನಿರಂತರವಾಗಿ ಭೂಮಿ ಕಂಪಿಸುತ್ತಿತ್ತು. ಒಂದು ವಾರದಿಂದ ಯಾವುದೇ ರೀತಿಯ ಶಬ್ದ ಇರಲಿಲ್ಲ. ಆದರೆ ಇಂದು (ಅ.28) ಬೆಳಗ್ಗೆ 9.50ರ ಸುಮಾರಿಗೆ ಮತ್ತೆ ಭೂಮಿಯಿಂದ ಭಾರಿ ಶಬ್ದ ಕೇಳಿಬಂದಿದೆ. ಈಗಾಗಲೇ ಲಘು ಭೂಕಂಪನದಿಂದ ಜನರು ಕಂಗಾಲಾಗಿದ್ದಾರೆ. ಇಂದು ಕೇಳಿ ಬಂದ ಭಾರಿ ಶಬ್ದದಿಂದ ಜನರು ಆತಂಕಗೊಂಡಿದ್ದಾರೆ.
ಜಿಲ್ಲೆಯ ಹಲವೆಡೆ ಪದೇಪದೆ ಭೂಕಂಪ ವಿಚಾರಕ್ಕೆ ಸಂಬಂಧಿಸಿ ಪರಿಶೀಲನೆ ನಡೆಸಲು ಭೂಕಂಪ ಪೀಡಿತ ಗ್ರಾಮಗಳಿಗೆ ಭೂವಿಜ್ಞಾನಿಗಳ ತಂಡ ಭೇಟಿ ಅಕ್ಟೋಬರ್ 13 ರಂದು ನೀಡಿದ್ದರು. ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ತಂಡದಿಂದ ಪರಿಶೀಲನೆ ಮಾಡಲಾಗಿತ್ತು. ಕಿರಿಯ ಭೂವಿಜ್ಞಾನಿ ರಮೇಶ್ ದಿಕ್ಬಾಲ್, ವೈಜ್ಞಾನಿಕ ಸಹಾಯಕ ಸಂತೋಷ್ ಸೇರಿ ಆರು ಜನರು ಭೇಟಿ ಮಾಡಿದ್ದರು. ಗಡಿಕೇಶ್ವರ, ಹಲಚೇರಾ, ಹೊಸಳ್ಳಿ ಸೇರಿ ಕೆಲ ಗ್ರಾಮಕ್ಕೆ ಭೇಟಿ ಕೊಟ್ಟಿದ್ದಾರೆ. ಭೂಕಂಪದ ಕೇಂದ್ರ ಬಿಂದುವಿಗೂ ಭೇಟಿ ನೀಡಿ ಪರಿಶೀಲನೆ ಮಾಡಿದ್ದರು.
ಕಾಳಗಿ, ಚಿಂಚೋಳಿ ತಾಲೂಕಿನ ಅನೇಕ ಹಳ್ಳಿಗಳಲ್ಲಿ ಭೂಕಂಪನ ಆಗಿತ್ತು. ಕಳೆದ ಕೆಲವು ದಿನಗಳಲ್ಲಿ ಕೆಲವು ಬಾರಿ ಭೂಕಂಪನ ಉಂಟಾಗಿತ್ತು. ಇದರಿಂದ ಜನರು ಬಹಳಷ್ಟು ಆತಂಕಕ್ಕೆ ಒಳಗಾಗಿದ್ದರು. ಗಡಿಕೇಶ್ವರ ಗ್ರಾಮದಲ್ಲಿ ನಿರಂತರವಾಗಿ ಭೂಕಂಪನ ಹಿನ್ನೆಲೆ ಸ್ಥಳೀಯ ಜನರು ಗ್ರಾಮ ತೊರೆದು ಹೋಗಲು ಶುರುಮಾಡಿದ್ದಾರೆ. ಇಂದು ಕೂಡಾ ಜನರು ಗ್ರಾಮ ತೊರೆದು ಹೋಗುತ್ತಿರುವ ದೃಶ್ಯ ಕಂಡುಬಂದಿತ್ತು. ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಭೂಕಂಪ ಭಯ ಹಿನ್ನೆಲೆಯಲ್ಲಿ ಜನರು ಮನೆ ತೊರದು ಬೇರಡೆ ಹೋಗುತ್ತಿದ್ದಾರೆ. ಸಂಬಂಧಿಕರ ಬೇರೆ ಬೇರೆ ಗ್ರಾಮಗಳಿಗೆ ಜನ ತೆರಳಿದ್ದಾರೆ.
ಇದನ್ನೂ ಓದಿ
ವಿಮಾನದಲ್ಲಿ ತಯಾರಾಯ್ತು ರೆಸ್ಟೋರೆಂಟ್; ಗುಜರಾತ್ನ ಫ್ಲೈಟ್ ಥೀಮ್ ರೆಸ್ಟೋರೆಂಟ್ ವಿಶೇಷತೆ ಏನು ಗೊತ್ತಾ?
ಜಮೀನು ವಿವಾದಕ್ಕೆ 2 ಗ್ರಾಮಗಳ ನಡುವೆ ಮಾರಾಮಾರಿ; 13 ಜನರಿಗೆ ಗಾಯ, ಇಬ್ಬರು ಅರೆಸ್ಟ್