Kalaburagi: ಹಿಂದೂಗಳು ಮನೆಯಲ್ಲಿ ಕಾಣುವ ರೀತಿಯಲ್ಲೇ ತಲ್ವಾರ್ ಇಡಬೇಕು; ಅದು ಅಪರಾಧವಲ್ಲ- ಪ್ರಮೋದ್ ಮುತಾಲಿಕ್

ಮನೆಯಲ್ಲಿ ತಲ್ವಾರ್​ ಇಟ್ಟಿದ್ದಕ್ಕೆ ಪೊಲೀಸರು ಬಂದು ಕೇಸ್ ಹಾಕುತ್ತೇವೆ ಅಂತ ಹೆದರಿಸಿದರೆ ಹೇಳಿ, ಮೊದಲು ಶಸ್ತ್ರ ಹಿಡಿದು ನಿಂತಿರುವ ಕಾಳಿ, ದುರ್ಗೆ, ಹನುಮಂತ, ರಾಮನ ಮೇಲೆ ಕೇಸ್ ಹಾಕಿ ಅಂತ ಹೇಳಿ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

Kalaburagi: ಹಿಂದೂಗಳು ಮನೆಯಲ್ಲಿ ಕಾಣುವ ರೀತಿಯಲ್ಲೇ ತಲ್ವಾರ್ ಇಡಬೇಕು; ಅದು ಅಪರಾಧವಲ್ಲ- ಪ್ರಮೋದ್ ಮುತಾಲಿಕ್
ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್
Image Credit source: Deccan Herald
Updated By: ವಿವೇಕ ಬಿರಾದಾರ

Updated on: Jan 13, 2023 | 9:19 AM

ಕಲಬುರಗಿ: ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod muthalik) ಒಂದಲ್ಲ ಒಂದು ವಿವಾದಾತ್ಮ ಹೇಳಿಕೆ ನೀಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಈ ಹಿಂದೆ ಬೆಳಗಾವಿಯಲ್ಲಿ ನಡೆದ ವಿರಾಟ ಹಿಂದೂ ಸಮಾವೇಶದಲ್ಲಿ ಪ್ರತಿಯೊಬ್ಬರು ಮನೆಯಲ್ಲಿ ತಲ್ವಾರ್ ಇಡಬೇಕು ಎಂದು ಹೇಳಿದ್ದರು. ಈಗ ಮತ್ತೆ ಕಲಬುರಗಿಯ (Kalagaburagi) ಯಡ್ರಾಮಿಯಲ್ಲಿ ನಿನ್ನೆ (ಜ.12) ರಂದು ನಡೆದ ಹಿಂದೂ ಸಂತ ಸಮಾವೇಶದಲ್ಲಿ ಮಾತನಾಡಿ ಹಿಂದೂಗಳು ಮನೆಯಲ್ಲಿ ಕಾಣುವ ರೀತಿಯಲ್ಲೇ ತಲ್ವಾರ್ ಇಡಬೇಕು ಎಂದು ಪ್ರಚೋದನಕಾರಿ ಮಾತುಗಳನ್ನಾಡಿದ್ದಾರೆ.

ಕಲಬುರಗಿಯ ಯಡ್ರಾಮಿಯಲ್ಲಿ ನಡೆದ ಹಿಂದೂ ಸಂತ ಸಮಾವೇಶದಲ್ಲಿ ಮಾತನಾಡಿದ ಅವರು ಮೊದಲು ನಾವೆಲ್ಲರೂ ಆಯುಧಗಳನ್ನು ಪೂಜೆ ಮಾಡುತ್ತಿದ್ದೆವು. ಇದೀಗ ಪುಸ್ತಕ, ಪೆನ್ನು, ವಾಹನಗಳನ್ನು ಪೂಜೆ ಮಾಡುತ್ತಿದ್ದೇವೆ. ಪೊಲೀಸರು, ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ಗೆ ಪೂಜೆ ಮಾಡಲ್ಲ. ಪೊಲೀಸ್ ಠಾಣೆಯಲ್ಲಿ ಪೊಲೀಸರು ಬಂದೂಕಿಗೆ ಪೂಜೆ ಮಾಡಲ್ವಾ? ಹೀಗಾಗಿ ಇನ್ನುಮುಂದೆ ತಲ್ವಾರ್, ಚಾಕು, ಕೊಡಲಿ ಇಟ್ಟು ಪೂಜೆ ಮಾಡಬೇಕು. ಮನೆಯಲ್ಲಿ ಒಂದು ತಲ್ವಾರ್​ ಇಡುವುದು ಅಪರಾಧವಲ್ಲ ಎಂದರು.

ಕಾಳಿ, ದುರ್ಗೆ, ಹನುಮಂತ, ರಾಮನ ಮೇಲೆ ಕೇಸ್ ಹಾಕಿ

ಮನೆಯಲ್ಲಿ ತಲ್ವಾರ್​ ಇಟ್ಟಿದ್ದಕ್ಕೆ ಪೊಲೀಸರು ಬಂದು ಕೇಸ್ ಹಾಕುತ್ತೇವೆ ಅಂತ ಹೆದರಿಸಿದರೆ ಹೇಳಿ, ಮೊದಲು ಶಸ್ತ್ರ ಹಿಡಿದು ನಿಂತಿರುವ ಕಾಳಿ, ದುರ್ಗೆ, ಹನುಮಂತ, ರಾಮನ ಮೇಲೆ ಕೇಸ್ ಹಾಕಿ ಅಂತ ಹೇಳಿ. ತಲ್ವಾರ್ ಇಟ್ಟರೆ ಯಾರು ನಮ್ಮ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕೋದಿಲ್ಲ. ತಲ್ವಾರ್ ಇಡೋದು ಯಾರನ್ನಾದರು ಹೊಡೆಯೇಕೆ ಅಲ್ಲ. ಧರ್ಮದ ರಕ್ಷಣೆ, ದೇಶದ ರಕ್ಷಣೆಗಾಗಿ ಇಡಬೇಕು ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:16 am, Fri, 13 January 23