ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ – ಗ್ರಾಮ ವಾಸ್ತವ್ಯಕ್ಕೆ ಅಪ್ಪಟ ರೈತನಂತೆ ಎತ್ತಿನ ಗಾಡಿಯಲ್ಲಿ ಹೊರಟ ಜಿಲ್ಲಾಧಿಕಾರಿ!

| Updated By: ಸಾಧು ಶ್ರೀನಾಥ್​

Updated on: Feb 19, 2022 | 12:39 PM

Kalaburgi Deputy Commissioner Yeshwanth Gurukar: ಐಎಎಸ್ ಹಮ್ಮುಬಿಮ್ಮು, ಜಿಲ್ಲೆಯ ಪ್ರಥಮ ಅಧಿಕಾರಿ ಎಂಬ ಗೌರವ/ಗರ್ವ ಕಳಚಿಟ್ಟು ರೈತಾಪಿ ಜನರನ್ನು ಕಂಡು ಮಾತನಾಡಿಸಿದ್ದಾರೆ. ಕಳೆದ ತಿಂಗಳಷ್ಟೇ ಜಿಲ್ಲಾಧಿಕಾರಿಯಾಗಿ ಕಲಬುರಗಿ ಜಿಲ್ಲಾ ಕೇಂದ್ರಕ್ಕೆ ಬಂದಿಳಿದ ಬೆಂಗಳೂರು ಮೂಲದ ಯಶವಂತ ವಿ. ಗುರುಕರ್ ಭಾರತೀಯ ನಾಗರಿಕ ಸೇವೆಗೆ ಸೇರುವ ಮುನ್ನ ಟೆಕ್ಕಿಯಾಗಿದ್ದವರು.

ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ - ಗ್ರಾಮ ವಾಸ್ತವ್ಯಕ್ಕೆ ಅಪ್ಪಟ ರೈತನಂತೆ ಎತ್ತಿನ ಗಾಡಿಯಲ್ಲಿ ಹೊರಟ ಜಿಲ್ಲಾಧಿಕಾರಿ!
ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ - ಗ್ರಾಮ ವಾಸ್ತವ್ಯಕ್ಕೆ ಅಪ್ಪಟ ರೈತನಂತೆ ಎತ್ತಿನ ಗಾಡಿಯಲ್ಲಿ ಹೋದ ಜಿಲ್ಲಾಧಿಕಾರಿ!
Follow us on

ಕಲಬುರಗಿ: ರಾಜ್ಯ ಕಂದಾಯ ಸಚಿವರು ಗ್ರಾಮೀಣ ಭಾಗದ ಜನರ ಸಮಸ್ಯೆ ಆಲಿಸಲು ಮತ್ತು ಸಮಸ್ಯೆ ಗೆ ಪರಿಹಾರ ಕಲ್ಪಿಸಲು ಪ್ರತಿ ತಿಂಗಳು ಜಿಲ್ಲಾಧಿಕಾರಿ, ತಹಶಿಲ್ದಾರರು ತಮ್ಮ ವ್ಯಾಪ್ತಿಯ ಒಂದು ಹಳ್ಳಿಗೆ ಭೇಟಿ ನೀಡಿ, ಅಲ್ಲಿಯೇ ಗ್ರಾಮ ವಾಸ್ತವ್ಯ ಮಾಡಲು‌ (jilhadhikari nade halli kade) ಸೂಚನೆ ನೀಡಿದ್ದರು. ಕೊರೊನಾ ಹಿನ್ನೆಲೆಯಲ್ಲಿ ಕೆಲ ತಿಂಗಳಿಂದ ಬಂದಾಗಿದ್ದ ಗ್ರಾಮ ವಾಸ್ತವ್ಯ ಇಂದು ಮತ್ತೆ ಪ್ರಾರಂಭವಾಗಿದೆ. ಆದರೆ ಗ್ರಾಮ‌ ವಾಸ್ತ್ಯವ್ಯಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಅಪ್ಪಟ ಹಳ್ಳಿಯ ಜನರಂತೆ ವೇಷ ಭೂಷಣ ತೊಟ್ಟು ರೈತನಂತೆ ಹಳ್ಳಿಗೆ ಎಂಟ್ರಿ ಕೊಟ್ಟಿದ್ದಾರೆ. ಜಿಲ್ಲಾಧಿಕಾರಿ ವೇಷ ಭೂಷಣ ಕಂಡು ಸ್ವತ ಹಳ್ಳಿಯ ಜನರು ಬೆರಗಾಗಿದ್ದಾರೆ.

ಐಎಎಸ್ ಹಮ್ಮುಬಿಮ್ಮು, ಜಿಲ್ಲೆಯ ಪ್ರಥಮ ಅಧಿಕಾರಿ ಎಂಬ ಗೌರವ/ಗರ್ವ ಕಳಚಿಟ್ಟು ರೈತಾಪಿ ಜನರನ್ನು ಕಂಡು ಮಾತನಾಡಿಸಿದ್ದಾರೆ. ಕಳೆದ ತಿಂಗಳಷ್ಟೇ ಜಿಲ್ಲಾಧಿಕಾರಿಯಾಗಿ ಕಲಬುರಗಿ ಜಿಲ್ಲಾ ಕೇಂದ್ರಕ್ಕೆ ಬಂದಿಳಿದ ಬೆಂಗಳೂರು ಮೂಲದ ಯಶವಂತ ವಿ. ಗುರುಕರ್ ಭಾರತೀಯ ನಾಗರಿಕ ಸೇವೆಗೆ ಸೇರುವ ಮುನ್ನ ಟೆಕ್ಕಿಯಾಗಿದ್ದವರು. 2010ನೇ ಸಾಲಿನ IAS batch ಅಧಿಕಾರಿ.

ಹೌದು, ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಗ್ರಾಮವಾಸ್ತವ್ಯ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಕೊಂಚೂರು ಗ್ರಾಮಕ್ಕೆ ಆಗಮಿಸಿದ ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರನ್ನು (Kalaburgi Deputy Commissioner) ಗ್ರಾಮಸ್ಥರು ಆತ್ಮೀಯವಾಗಿ ಬರಮಾಡಿಕೊಂಡರು.

ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರನ್ನು ಗ್ರಾಮಸ್ಥರು ಆತ್ಮೀಯವಾಗಿ ಬರಮಾಡಿಕೊಂಡರು

ಬಿಳಿ ಅಂಗಿ, ಬಿಳಿ ಪಂಚೆ, ಹಸಿರು ಶಲ್ಯ ಹಾಗೂ ಕೆಂಪು ರುಮಾಲು ಧರಿಸಿದ್ದ ಜಿಲ್ಲಾಧಿಕಾರಿಯನ್ನು (Yeshwanth Gurukar) ನೋಡಿದ ಜನರು ಸಂತೋಷಪಟ್ಟರು. ನಂತಕ ಎತ್ತಿನ ಗಾಡಿ (ಚಕ್ಕಡಿ)ಯಲ್ಲಿ ಡೋಲು ಮತ್ತಿತರ ವಾದ್ಯಗಳೊಂದಿಗೆ ಊರಿನ ಬೀದಿಯಲ್ಲಿ ಮೆರವಣಿಗೆ ಮಾಡಿ, ಹೃದಯಸ್ಪರ್ಶಿ ಸ್ವಾಗತ ನೀಡಿದರು. ನಾರಿಯರು ಜಿಲ್ಲಾಧಿಕಾರಿಗೆ ಆರತಿ ಬೆಳಗಿ ಗ್ರಾಮದ ಸಂಪ್ರದಾಯ ಮೆರೆದರು.

ಹಳ್ಳಿ ಜನರ ಸಮಸ್ಯೆ ಕೇಳಲು ಹಳ್ಳಿಯ ಜನರಂತೆ ಹೋದ ಜಿಲ್ಲಾಧಿಕಾರಿ, ಗ್ರಾಮೀಣ ಭಾಗದ ಜನರ ವೇಷ ಭೂಷಣದ ತೊಟ್ಟು ಹೋಗಿ ‌ಅವರೊಳಗೆ ಒಂದಾಗುವ ಕೆಲಸ ಮಾಡಿದ್ರು. ಕಳೆದ ತಿಂಗಳಷ್ಟೇ ಕಲಬುರಗಿ ಜಿಲ್ಲಾಧಿಕಾರಿ ಯಾಗಿ ಅಧಿಕಾರ ವಹಿಸಿಕೊಂಡಿರೋ ಜಿಲ್ಲಾಧಿಕಾರಿ ಯಶವಂತ ಗುರುಕಾರ್ ,ತಮ್ಮ ಖಡಕ್ ಆಡಳಿತದಿಂದ ಕಡಿಮೆ ಸಮಯದಲ್ಲಿಯೇ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಜಿಲ್ಲಾಧಿಕಾರಿ ಅಂದರೆ ಇನ್ ಶೆರ್ಟ್ ಮಾಡಿಕೊಂಡು, ಕೋಟ್ ಹಾಕಿಕೊಂಡು ಬರುತ್ತಿದ್ದಿದ್ದನ್ನು ನೋಡುತ್ತಿದ್ದ ಜನರು, ಜಿಲ್ಲಾಧಿಕಾರಿ ಹಳ್ಳಿ ಜನರು ಅದರಲ್ಲೂ ರೈತರು ದೈನಂದಿನಂತೆ ತೊಡುವ ಧಿರಿಸಿನಲ್ಲಿ ಬಂದಿದ್ದನ್ನು ನೋಡಿ ಖುಷಿ ಪಟ್ಟರು.
(ವರದಿ: ಸಂಜಯ್ ಚಿಕ್ಕಮಠ)

Also Read:
RBI Recruitment 2022: ಭಾರತೀಯ ರಿಸರ್ವ್ ಬ್ಯಾಂಕ್​ನಲ್ಲಿ 950 ನೇಮಕಾತಿಗಳು, ಯಾರೆಲ್ಲ ಅರ್ಜಿ ಹಾಕಬಹುದು, ವಿವರ ಏನಿದೆ?

Also Read:
International Mother Language Day: ಯುನೆಸ್ಕೋ ವಿಶ್ವ ಮಾತೃಭಾಷೆ ದಿನ- ಕನ್ನಡಕ್ಕಾಗಿ ಗೂಗಲ್​​ ನಿಂದ ವಿಶೇಷ ಪ್ರಯತ್ನ

Published On - 12:38 pm, Sat, 19 February 22