RBI Recruitment 2022: ಭಾರತೀಯ ರಿಸರ್ವ್ ಬ್ಯಾಂಕ್ನಲ್ಲಿ 950 ನೇಮಕಾತಿಗಳು, ಯಾರೆಲ್ಲ ಅರ್ಜಿ ಹಾಕಬಹುದು, ವಿವರ ಏನಿದೆ?
ಪ್ರತಿಷ್ಠಿತ ಭಾರತೀಯ ರಿಸರ್ವ್ ಬ್ಯಾಂಕ್ನಲ್ಲಿ (Reserve Bank of India -RBI) ಉದ್ಯೋಗ (Job) ಬಯಸುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಒಟ್ಟು 950 ಸಹಾಯಕ (Assistant) ಹುದ್ದೆಗಳು ಖಾಲಿ ಇದ್ದು, ಪದವಿ ಪಾಸಾದವರು ಇಂದೇ ಅರ್ಜಿ ಸಲ್ಲಿಸಿ.
ಭಾರತದಲ್ಲಿ ಸಾರ್ವಜನಿಕ ಕ್ಷೇತ್ರದಲ್ಲಿ ಹಣಕಾಸು ಚೌಕಟ್ಟು ಹಾಕಿ, ಆರ್ಥಿಕ ನೆರವಾಗಲು ಮೊದಲ ವಿಶ್ವ ಯುದ್ಧದ ನಂತರದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವನ್ನು 1 ಏಪ್ರಿಲ್ 1935 ರಂದು ಸ್ಥಾಪಿಸಲಾಯಿತು. ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಸಹಾಯಕ ಹುದ್ದೆ ನೇಮಕಾತಿಗಾಗಿ (RBI Assistant Recruitment 2022) ಅರ್ಜಿಯನ್ನು ಆಹ್ವಾನಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ನಲ್ಲಿ SSLC ಪಾಸಾದವರಿಗೆ ಸಹಾಯಕ (Assistant) ಉದ್ಯೋಗ ಲಭ್ಯವಿದ್ದು (Recruitments), ನಿನ್ನೆ ಶುಕ್ರವಾರದಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್ಲೈನ್ ಮೂಲಕ visit website rbi.org.in ಅರ್ಜಿ ಸಲ್ಲಿಸಬೇಕು. ಮಾರ್ಚ್ 8, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ (March 8, 2022). ವಿದ್ಯಾರ್ಹತೆ – ಶೇಕಡಾ 50ರಷ್ಟು ಅಂಕಗಳೊಂದಿಗೆ ಯಾವುದೇ ಪದವಿ ಪಡೆದಿರಬೇಕು.
ಪ್ರತಿಷ್ಠಿತ ಭಾರತೀಯ ರಿಸರ್ವ್ ಬ್ಯಾಂಕ್ನಲ್ಲಿ (Reserve Bank of India -RBI) ಉದ್ಯೋಗ (Job) ಬಯಸುವವರಿಗೆ ಇದೊಂದು ಸುವರ್ಣವಕಾಶವಾಗಿದೆ. ಒಟ್ಟು 950 ಸಹಾಯಕ (Assistant) ಹುದ್ದೆಗಳು ಖಾಲಿ ಇದ್ದು, ಪದವಿ ಪಾಸಾದವರು ಇಂದೇ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಪ್ರಮುಖ ದಿನಾಂಕಗಳು ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 18/2/2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08/03/2022
ವಿದ್ಯಾರ್ಹತೆ, ವಯೋಮಿತಿ, ಉದ್ಯೋಗದ ಸ್ಥಳ, ವೇತನ, ಏನೆಲ್ಲಾ ದಾಖಲೆಗಳು ಸಲ್ಲಿಸಬೇಕು, ಅರ್ಜಿಯ ಜೊತೆ ಲಗತ್ತಿಸಬೇಕಾದ ಪೂರಕ ದಾಖಲೆಗಳ ಬಗ್ಗೆ ತಿಳಿದುಕೊಳ್ಳಲು visit website rbi.org.in
Punjab National Bank– 10ನೇ ತರಗತಿ ಪಾಸಾದವರಿಗೆ 21 ಹುದ್ದೆಗಳಿಗೆ ನೇಮಕಾತಿ, ಅರ್ಜಿ ಸಲ್ಲಿಸಿ ಸಾರ್ವಜನಿಕ ಕ್ಷೇತ್ರದಲ್ಲಿ ಮೂರನೆಯ ಸ್ಥಾನದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ 1969ರಿಂದ ರಾಷ್ಟ್ರೀಕೃತ ಬ್ಯಾಂಕ್ ಆಗಿ ಭಾರತದ ಮೂಲೆ ಮೂಲೆಯಲ್ಲಿಯೂ ತನ್ನ ಶಾಖೆಗಳನ್ನು ತೆರೆದಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಸುಮಾರು 5 ಸಾವಿರ ಶಾಖೆಗಳನ್ನು ಹೊಂದಿದೆ. ಪಂ ಜಾಬ್ ನ್ಯಾಷನಲ್ ಬ್ಯಾಂಕ್ ಇದೀಗ ಜವಾನರ ಹುದ್ದೆ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಿದೆ. SSLC ಪಾಸಾದವರಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಜವಾನ (Peon) ಉದ್ಯೋಗ ಲಭ್ಯವಿದ್ದು (Recruitments), ಈಗಾಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಖುದ್ದಾಗಿ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಬೆಂಗಳೂರಿನಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ವೃತ್ತ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಮಾರ್ಚ್ 3, 2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಬೆಂಗಳೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಈ ಉದ್ಯೋಗ ನೀಡಲಾಗುತ್ತದೆ.
ಬ್ಯಾಂಕಿಂಗ್ ಉದ್ಯೋಗ (Job) ಬಯಸುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಒಟ್ಟು 21 ಜವಾನ (Peon) ಹುದ್ದೆಗಳು ಖಾಲಿ ಇದ್ದು, 10ನೇ ತರಗತಿ ಪಾಸಾದವರು ಇಂದೇ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಪ್ರಮುಖ ದಿನಾಂಕಗಳು ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 15/2/2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03/03/2022
ವಿದ್ಯಾರ್ಹತೆ: ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಜವಾನ (Peon) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ನಿಂದ ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು. ಶೇ. 40 ಅಂಕ ಪಡೆದು ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಜವಾನ (Peon) ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18-24 ವರ್ಷದೊಳಗಿರಬೇಕು.
ಉದ್ಯೋಗದ ಸ್ಥಳ: ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಜವಾನ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಬೆಂಗಳೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಉದ್ಯೋಗ ನೀಡಲಾಗುತ್ತದೆ.
ವೇತನ: ಪಂಜಾಬ್ ನ್ಯಾಷನಲ್ ಬ್ಯಾಂಕ್ನಲ್ಲಿ ಜವಾನ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ನೀಡಲಾಗುತ್ತದೆ.
ಏನೆಲ್ಲಾ ದಾಖಲೆಗಳು ಸಲ್ಲಿಸಬೇಕು: ಸ್ವಯಂ ವಿವರ ಅರ್ಜಿಯ ಜೊತೆಗೆ ಇತ್ತೀಚಿನ ಭಾವಚಿತ್ರ, ವಯಸ್ಸಿಗೆ ಪೂರಕವಾದ ದಾಖಲೆ, ಮಾರ್ಕ್ಸ್ ಕಾರ್ಡ್, ಖಾಯಂ ನಿವಾಸ ವಿಳಾಸ ಪುರಾವೆ ಮುಂತಾದ ಅಗತ್ಯ ದಾಖಲೆಗಳನ್ನು ಲಗತ್ತಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ: ಪಂಜಾಬ್ ನ್ಯಾಷನಲ್ ಬ್ಯಾಂಕ್, ವೃತ್ತ ಕಚೇರಿ, ಹೆಚ್ ಆರ್ ವಿಭಾಗ, ಬೆಂಗಳೂರು ಪೂರ್ವ, ರಹೇಜಾ ಟವರ್ಸ್, ಎಂಜಿ ರಸ್ತೆ, ಬೆಂಗಳೂರು – 560001
Also Read: Indian Navy Recruitment 2022: 10ನೇ ತರಗತಿ ಪಾಸಾದವರಿಗೆ ನೌಕಾಪಡೆಯಲ್ಲಿ ಉದ್ಯೋಗ: ವೇತನ 63 ಸಾವಿರ ರೂ.
Also Read:4 ದಿನದ ಕೆಲಸ ವಾರ: ಯುರೋಪಿಯನ್ ದೇಶದಲ್ಲಿ ಪೂರ್ಣಾವಧಿ ಉದ್ಯೋಗಿಗಳಿಗೆ ಹೀಗೊಂದು ಅವಕಾಶ
Published On - 7:46 am, Sat, 19 February 22