ಹೆಡ್ ಕಾನಸ್ಟೇಬಲ್ ಹತ್ಯೆ ಪ್ರಕರಣ: ಸಾಂತ್ವನ, ಪರಿಹಾರ ಕೊಡಿಸುವ ಭರವಸೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾ ಎಸ್ಪಿ ಇಶಾ ಪಂತ್ ಏನಂದರು?

|

Updated on: Jun 16, 2023 | 2:34 PM

Head constable murder case: ಟ್ರ್ಯಾಕ್ಟರ್​ ಹರಿಸಿ, ಸಹೋದ್ಯೋಗಿ ಹೆಡ್​ಕಾನ್ಸ್​ಟೇಬಲ್ ಮೈಸೂರ್ ಅವರನ್ನು ಹತ್ಯೆಗೈದಿದ್ದವರ ವಿರುದ್ಧ ಸ್ಥಳೀಯ ಪೊಲೀಸರು ಇದೀಗ ಕೇಸ್​​ ದಾಖಲಿಸಿಕೊಂಡಿದ್ದಾರೆ. ಮರುಳು ದಂಧೆಕೋರರಾದ ಸಿದ್ದಪ್ಪ ಮತ್ತು ಸಾಯಿಬಣ್ಣ ವಿರುದ್ಧ FIR ದಾಖಲು ಮಾಡಿದ್ದಾರೆ.

ಹೆಡ್ ಕಾನಸ್ಟೇಬಲ್ ಹತ್ಯೆ ಪ್ರಕರಣ: ಸಾಂತ್ವನ, ಪರಿಹಾರ ಕೊಡಿಸುವ ಭರವಸೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಜಿಲ್ಲಾ ಎಸ್ಪಿ ಇಶಾ ಪಂತ್ ಏನಂದರು?
ಹೆಡ್ ಕಾನಸ್ಟೇಬಲ್ ಹತ್ಯೆ ಪ್ರಕರಣ
Follow us on

ಕಲಬುರಗಿ: ಗುರುವಾರ ರಾತ್ರಿ ಇಡೀ ನಾಡೇ ತಲೆತಗ್ಗಿಸುವಂತಹ ಹೇಯ ಘಟನೆ ನಡೆದಿದ್ದು, ಅಕ್ರಮ‌ ಮರುಳು ಸಾಗಾಣಿಕೆಗೆ ತಡೆ ಹಾಕಲು ಬಂದಿದ್ದ ಹೆಡ್ ಕಾನಸ್ಟೇಬಲ್ ಅವರ ಬೈಕ್​​ ಮೇಲೆಯೇ ಟ್ರ್ಯಾಕ್ಟರ್​​ ಹತ್ತಿಸಿ, ಭಯಾನಕವಾಗಿ ಹತ್ಯೆ ಮಾಡಲಾಗಿದೆ (Head constable mysore chauhan murder case). ಪ್ರಕರಣದ ಸಂಬಂಧ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ಪ್ರತಿಕ್ರಿಯೆ ನೀಡಿದ್ದು ಸಾಂತ್ವನ ಹೇಳಿದ್ದಾರೆ. ಜೊತೆಗೆ ಪರಿಹಾರ ಕೊಡಿಸುವ ಭರವಸೆಯನ್ನೂ ನೀಡಿದ್ದಾರೆ. ಇದೆ ವೇಳೆ ಅಕ್ರಮ‌ ಮರುಳು ಸಾಗಾಣಿಕೆ (Illegal sand Mafia) ತಡೆಗೆ ಕೂಡಲೇ ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶಿಸಿದ್ದಾರೆ.

ಪೊಲೀಸ್​​ ಹತ್ಯೆ ಘಟನೆ ನಡೆದಿದ್ದು, ಇದು ಅತ್ಯಂತ ನೋವಿನ ಸಂಗತಿಯಾಗಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅವರುಗಳಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದೇನೆ. ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದೇನೆ ಅಂತಾ ಸಚಿವ ಪ್ರಿಯಾಂಕ್ ಖರ್ಗೆ ಪ್ರಕಟಣೆ ಹೊರಡಿಸಿದ್ದಾರೆ.

ಸಹೋದ್ಯೋಗಿ ಹೆಡ್​ಕಾನ್ಸ್​ಟೇಬಲ್ ಹತ್ಯೆ: ಎಫ್​ಐಆರ್​ ದಾಖಲು ಮಾಡಿಕೊಂಡ ಸ್ಥಳೀಯ ಪೊಲೀಸರು

ಜೇವರ್ಗಿ ತಾಲೂಕಿನ ನಾರಾಯಣಪುರ ಬಳಿ ಕಳೆದ ರಾತ್ರಿ ನೆಲೋಗಿ ಠಾಣೆಯ ಹೆಡ್ ಕಾನಸ್ಟೇಬಲ್ ಮೈಸೂರ್ ಅವರನ್ನು ಹತ್ಯೆ ಮಾಡಲಾಗಿದೆ. ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟ್ರ್ಯಾಕ್ಟರ್ ಹರಿಸಿ ಭೀಕರ ಹತ್ಯೆ ಮಾಡಲಾಗಿದೆ.

Also read: ಭೀಮಾ ತೀರದಲ್ಲಿ ಅಕ್ರಮ ಮರಳು ಸಾಗಾಟ ತಡೆಯಲು ಹೋದ ಹೆಡ್​​ಕಾನ್​ಸ್ಟೇಬಲ್​ ಭಯಾನಕ ಹತ್ಯೆ

ಟ್ರ್ಯಾಕ್ಟರ್​ ಹರಿಸಿ, ಸಹೋದ್ಯೋಗಿ ಹೆಡ್​ಕಾನ್ಸ್​ಟೇಬಲ್ ಮೈಸೂರ್ ಅವರನ್ನು ಹತ್ಯೆಗೈದಿದ್ದವರ ವಿರುದ್ಧ ಸ್ಥಳೀಯ ಪೊಲೀಸರು ಇದೀಗ ಕೇಸ್​​ ದಾಖಲಿಸಿಕೊಂಡಿದ್ದಾರೆ. ಮರುಳು ದಂಧೆಕೋರರಾದ ಸಿದ್ದಪ್ಪ ಮತ್ತು ಸಾಯಿಬಣ್ಣ ವಿರುದ್ಧ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೆಲೋಗಿ ಠಾಣೆಯಲ್ಲಿ ಎಫ್​ಐಆರ್​ (FIR) ದಾಖಲು ಮಾಡಿದ್ದಾರೆ.

ಏನಿದು ಹೆಡ್​ಕಾನ್ಸ್​ಟೇಬಲ್ ಹತ್ಯೆ ಪ್ರಕರಣ?

ದುಷ್ಕರ್ಮಿಗಳು ಭೀಮಾ ನದಿಯಿಂದ ಟ್ರ್ಯಾಕ್ಟರ್​ನಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದರು. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮದ ಬಳಿ ಮರಳು ಸಾಗಣೆ ಟ್ರ್ಯಾಕ್ಟರ್​ ತಡೆಯಲು

ಅಕ್ರಮ ಮರಳುಗಾರಿಕೆಯನ್ನು ತಡೆಯಲು ಹೆಚ್​ಸಿ ಮೈಸೂರು ಚೌಹಾಣ್, ಪಿಸಿ ಪ್ರಮೋದ್ ದೊಡ್ಮನಿ ಅವರಿಬ್ಬರೂ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಬೈಕ್​ನಲ್ಲಿ ತೆರಳಿದ್ದರು. ಆ ವೇಳೆ ಪೊಲೀಸರಿದ್ದ ಬೈಕ್​ ಮೇಲೆ ಮರಳು ಟ್ರ್ಯಾಕ್ಟರ್​ ದುಷ್ಕರ್ಮಿಗಳು ಹತ್ತಿಸಿದ್ದರು. ನೆಲೋಗಿ ಠಾಣೆ ಹೆಡ್​ಕಾನ್ಸ್​ಟೇಬಲ್​ ಮೈಸೂರು ಚೌಹಾಣ್​ (51) ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇನ್ನು ಕಾನ್ಸ್​ಟೇಬಲ್​ ಪ್ರಮೋದ್ ದೊಡ್ಮನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿ ಸಿದ್ದಪ್ಪನನ್ನು ವಶಕ್ಕೆ ಪಡೆದಿರುವ ನೆಲೋಗಿ ಠಾಣೆ ಪೊಲೀಸರು ತಲೆ ಮರೆಸಿಕೊಂಡಿರುವ ಸಾಯಿಬಣ್ಣಗಾಗಿ ಶೋಧ ನಡೆಸಿದ್ದಾರೆ. ಇಬ್ಬರೂ ಆರೋಪಿಗಳ ಮೇಲೆ ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಹೆಡ್​ಕಾನ್ಸ್​ಟೇಬಲ್ ಹತ್ಯೆ ಪ್ರಕರಣ: ಕಲಬುರಗಿ ಎಸ್ಪಿ ಇಶಾ ಪಂತ್ ಘಟನೆ ಬಗ್ಗೆ ಏನಂದರು?

ಕಲಬುರಗಿ: ಮರಳು ಟ್ರ್ಯಾಕ್ಟರ ಹರಿಸಿ ಹೆಡ್ ಕಾನಸ್ಟೇಬಲ್ ಹತ್ಯೆ ಪ್ರಕರಣ ಸಂಬಂಧ ಕಲಬುರಗಿ ಎಸ್ಪಿ ಇಶಾ ಪಂತ್ ಮಾತನಾಡಿದ್ದಾರೆ. ಪ್ರಕರಣದ ಬಗ್ಗೆ ಮಾಹಿತಿ ನೀಡುವಾಗ ಎಸ್​ಪಿ ಇಶಾ ಪಂತ್​ ಭಾವೋದ್ವೇಕ್ಕೆ ಒಳಗಾದರು. ಜೇವರ್ಗಿ ತಾಲೂಕಿನ ಹುಲ್ಲೂರ ಬಳಿ ಮರಳು ಅಡ್ಡೆಯಿದೆ. ಲೋಕೋಪಯೋಗಿ ಇಲಾಖೆಯಿಂದ ಮರಳು ಸಂಗ್ರಹ ಮಾಡಲಾಗಿದೆ. ಈ ಹಿಂದೆ ಸೀಜ್ ಮಾಡಲಾಗಿರೋ ಒಂಬತ್ತು ಸಾವಿರ ಮೆಟ್ರಿಕ್ ಟನ್ ಮರಳು ಅಲ್ಲಿ ಸಂಗ್ರಹ ಮಾಡಲಾಗಿದೆ. ಆದ್ರೆ ಅಕ್ರಮವಾಗಿ ಅಲ್ಲಿಂದ ಕೆಲವರು ಮರಳು ಸಾಗಾಟ ಮಾಡುತ್ತಿದ್ದರು.

ಹೀಗಾಗಿ ನಾರಾಯಣಪುರ ಬಳಿ ಚೆಕ್ ಪೋಸ್ಟ್ ಹಾಕಲಾಗಿತ್ತು. ಮರಳು ತುಂಬಿದ್ದ ಟ್ರ್ಯಾಕ್ಟರ್​ ನೋಡಿ ಇಬ್ಬರು ಪೊಲೀಸ್​ ಸಿಬ್ಬಂದಿ ಫಾಲೋ ಮಾಡಿ ಟ್ರ್ಯಾಕ್ಟರ್​ ಜಪ್ತಿ ಮಾಡಲು ಹೋಗಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಪೊಲೀಸರ ಮೇಲೆ ಟ್ರ್ಯಾಕ್ಟರ್ ಹರಿಸಿಕೊಂಡು ಹೋಗಿದ್ದಾನೆ. ಘಟನೆಯಲ್ಲಿ ನಮ್ಮ ಸಿಬ್ಬಂದಿ ಮೈಸೂರ್ ಚೌಹಾನ್ ಹತ್ಯೆಯಾಗಿದೆ. ಈ ಬಗ್ಗೆ ಸಿದ್ದಪ್ಪ ಅನ್ನೋ ಓರ್ವ ಆರೋಪಿ ಬಂಧನವಾಗಿದೆ. ಇನ್ನೋರ್ವ ಆರೋಪಿ ಸಾಯಿಬಣ್ಣಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.

ಕಲಬುರ್ಗಿ ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 11:53 am, Fri, 16 June 23