ಕಲಬುರಗಿ, ಸೆ.10: ಹುಚ್ಚು ನಾಯಿ(Dog)ಯೊಂದು ಗ್ರಾಮದ ಜನರ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಚಿಂಚೋಳಿ ತಾಲೂಕಿನ ಐನಾಪುರ ಮತ್ತು ಬೆನಕಪಳ್ಳಿ ಗ್ರಾಮದಲ್ಲಿ ನಡೆದಿದೆ. ಹೌದು, 13 ಜನರ ಮೇಲೆ ಹುಚ್ಚು ನಾಯಿ ದಾಳಿ ಮಾಡಿದ್ದು, ಎಲ್ಲರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ(ಸೆ.09) ಮಧ್ಯಾಹ್ನದಿಂದ ಸಂಜೆಯವರೆಗೆ ಒಂದೇ ನಾಯಿ ಹದಿಮೂರು ಜನರ ಮೇಲೆ ಅಟ್ಯಾಕ್ ಮಾಡಿದೆ. ಮಳೆಯಾಗುತ್ತಿದ್ದರಿಂದ ಜಮೀನಿನಿಂದ ಜನ ಮನೆಗೆ ಬೇಗ ವಾಪಾಸು ಆಗುತ್ತಿದ್ದರು. ಈ ವೇಳೆ ಮಳೆಯಿಂದ ಮನೆಯೊಂದರ ಬಳಿ ಆಶ್ರಯ ಪಡೆದಿದ್ದ ವೇಳೆ ಓರ್ವ ಮಹಿಳೆ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದೆ.
ನಂತರ ಅದೇ ಹುಚ್ಚು ನಾಯಿ ಪಕ್ಕದ ಊರಾದ ಐನಾಪುರ ಗ್ರಾಮಕ್ಕೆ ಎಂಟ್ರಿ ಕೊಟ್ಟಿದ್ದು, ಅಲ್ಲಿಯು ಸಹ ಮಹಿಳೆಯರು ಪುರುಷರು ಸೇರಿದಂತೆ ಬರೋಬ್ಬರಿ 12 ಜನರ ಮೇಲೆ ಅಟ್ಯಾಕ್ ಮಾಡಿದೆ. ಇನ್ನು ಗಾಯಾಳುಗಳನ್ನ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಂಚೋಳಿ ತಾಲೂಕಿನ ಐನಾಪುರ ಮತ್ತು ಬೆನಕಪಳ್ಳಿ ಗ್ರಾಮಗಳಲ್ಲಿ ಹುಚ್ಚು ನಾಯಿಯೊಂದು ಕಳೆದ ಅನೇಕ ದಿನಗಳಿಂದ ಹುಚ್ಚು ನಾಯಿ ಜನರ ನೆಮ್ಮದಿ ಕೆಡಿಸಿದ್ದು, ಹುಚ್ಚು ನಾಯಿ ಸೆರೆಹಿಡಿಬೇಕೆಂದು ಸಂಬಂಧಿಸಿದವರಿಗೆ ಹೇಳಿದರು.
ಇದನ್ನೂ ಓದಿ:ಇಬ್ಬರು ಮಕ್ಕಳು ಸೇರಿದಂತೆ ಐವರ ಮೇಲೆ ಹುಚ್ಚು ನಾಯಿ ದಾಳಿ: 6 ವರ್ಷದ ಬಾಲಕಿಗೆ ಗಂಭೀರ ಗಾಯ
ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ನಾಯಿ ಕಡಿತಕ್ಕೊಳಗಾದವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲು ಸೂಕ್ತ ಸಮಯಕ್ಕೆ ಆಂಬುಲೆನ್ಸ್ ಬಾರದ ಹಿನ್ನಲೆಯಲ್ಲಿ ನೆರೆಯ ಬೀದರ್ ಜಿಲ್ಲೆಯ ಚಿಟಗುಪ್ಪಾ ಆಸ್ಪತ್ರೆಯಿಂದ ಆಂಬುಲೆನ್ಸ್ ತರಿಸಿಕೊಂಡು ಗಾಯಾಳುಗಳನ್ನು ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕೈಗೆ ಕಾಲಿಗೆ ಸೇರಿದಂತೆ ದೇಹದ ಬಹುತೇಕ ಭಾಗದಲ್ಲಿ ಹುಚ್ಚು ನಾಯಿ ದಾಳಿ ಮಾಡಿದ್ದು, ಗಾಯಾಳುಗಳಿಗೆ ಸೂಕ್ತ ಪರಿಹಾರ ನೀಡಬೇಕು ಎನ್ನುವ ಆಗ್ರಹ ವ್ಯಕ್ತವಾಗಿದೆ.
ಇನ್ನು ಹುಚ್ಚು ನಾಯಿ ಸಿಕ್ಕಸಿಕ್ಕವರ ಮೇಲೆ ಕಚ್ಚಿ ಗಾಯಗೊಳಿಸಿದ್ದರಿಂದ ನಾಯಿಯನ್ನು ಹಿಡಿದ ಗ್ರಾಮಸ್ಥರು, ನಾಯಿಯನ್ನು ಬಾರದ ಲೋಕಕ್ಕೆ ಕಳುಹಿಸಿದ್ದಾರೆ. ಅದೆನೇ ಇರಲಿ ಐನಾಪುರ ಮತ್ತು ಬೆನಕಪಳ್ಳಿ ಗ್ರಾಮದಲ್ಲಿ ಕಳೆದ ಅನೇಕ ದಿನಗಳಿಂದ ಹುಚ್ಚು ನಾಯಿ ಹಾವಳಿ ಬಗ್ಗೆ ಗ್ರಾಮ ಪಂಚಾಯತಿಗೆ ತಿಳಿಸಿದ್ರು ಸಹ ನಿರ್ಲಕ್ಷ್ಯ ವಹಿಸಿದ್ದರಿಂದ ಇಂದು ಅನೇಕ ಜನ ಹುಚ್ಚು ನಾಯಿ ಕಡಿತಕ್ಕೊಳಗಾಗಿ ಆಸ್ಪತ್ರೆ ಪಾಲಾಗಿದ್ದು ದುರಂತವೇ ಸರಿ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ