ದೇವನಹಳ್ಳಿ: ಬೀದಿ ನಾಯಿಗಳ ದಾಳಿಗೆ 35 ಕುರಿಗಳು ಬಲಿ; ಕಂಗಾಲ ಆದ ರೈತ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ದೇವನಗೊಂದಿ ಗ್ರಾಮದಲ್ಲಿ ಕುರಿ ದೊಡ್ಡಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ ಪರಿಣಾಮ 35 ಕುರಿಗಳು ಮೃತಪಟ್ಟಿವೆ. ಹಗಲಿರುಳು ಕುರಿಗಳನ್ನು ಮೇಯಿಸುತ್ತ ಜೀವನ ಕಟ್ಟಿಕೊಂಡಿದ್ದ ಮಾಲಿಕ ರಾಮಣ್ಣನಿಗೆ ಈಗ ದಿಕ್ಕೆ ತೋಚದಂತಾಗಿದೆ. ರಾಮಣ್ಣನಿಗೆ ಸರ್ಕಾರ ನೆರವು ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ದೇವನಹಳ್ಳಿ: ಬೀದಿ ನಾಯಿಗಳ ದಾಳಿಗೆ 35 ಕುರಿಗಳು ಬಲಿ; ಕಂಗಾಲ ಆದ ರೈತ
ನಾಯಿ ದಾಳಿಗೆ ಕುರಿಗಳು ಬಲಿ
Follow us
ನವೀನ್ ಕುಮಾರ್ ಟಿ
| Updated By: ವಿವೇಕ ಬಿರಾದಾರ

Updated on: Aug 29, 2023 | 2:17 PM

ಬೆಂಗಳೂರು ಗ್ರಾಮಾಂತರ: ನಾಯಿಗಳ (Dogs)  ಪ್ರಾಣಿಗಳು ಬಲಿಯಾಗುತ್ತಿವೆ. ಇದೀಗ ತಡರಾತ್ರಿ ಕುರಿಗಳ ದೊಡ್ಡಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದು, 35 ಕುರಿಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಹೊಸಕೋಟೆ (Hoskote) ತಾಲೂಕಿನ ದೇವನಗೊಂದಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಾಮಣ್ಣ ಎಂಬುವವರು ಹಗಲಿರುಳು ಕುರಿಗಳನ್ನು ಮೇಯಿಸುತ್ತ ಜೀವನ ಕಟ್ಟಿಕೊಂಡಿದ್ದರು. ರಾಮಣ್ಣ ರಾತ್ರಿ ಕುರಿಗಳನ್ನ ದೊಡ್ಡಿಗೆ ಕಳುಹಿಸಿ ಮಲಗಿದ್ದ ವೇಳೆ ನಾಯಿಗಳು ದಾಳಿ ಮಾಡಿವೆ. ಬೆಳಿಗ್ಗೆ ಕುರಿ ದೊಡ್ಡಿಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸರ್ಕಾರ ರೈತನ ನೆರವಿಗೆ ದಾವಿಸುವಂತೆ ಒತ್ತಾಯ ಕೇಳಿಬಂದಿದೆ. ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಾಡಾನೆ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ,  ಕಣ್ಮುಚ್ಚಿ ಕುಳಿತ ಅರಣ್ಯ ಇಲಾಖೆ

ಹಾಸನ: ಕಾಡಾನೆಗಳ ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡು ಒಂಟಿಸಲಗ ನರಳಾಡುತ್ತಿದ್ದರೂ, ಅರಣ್ಯ ಇಲಾಖೆ ನಿಗಾ ವಹಿಸದೆ ನಿರ್ಲಕ್ಷ್ಯಿಸಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆನೆ ಗಾಯಗೊಂಡು ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆಗ್ಗೋವೆ ಗ್ರಾಮದಲ್ಲಿಯೇ ಉಳಿದಿದೆ. ಈ ಕಾಡಾನೆಯ ವೇದನೆ ಕಂಡು ಸ್ಥಳೀಯರು ಮರುಗುತ್ತಿದ್ದಾರೆ. ಇನ್ನು ಆನೆಯನ್ನು ಕೂಡಲೆ ಸ್ಥಳಾಂತರಿಸಿ ಚಿಕಿತ್ಸೆ ನೀಡುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಆನೆಯ ದೇಹದ ಹಿಂಬದಿ ತೀವ್ರ ಸ್ವರೂಪದ ಗಾಯವಾಗಿದ್ದು, ಗಾಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈವರೆಗೆ ಯಾರಿಗೂ ತೊಂದರೆ ಕೊಡದೇ ಆಹಾರ ಅರಸಿ ಮನೆಯ ಬಾಗಿಲಿಗೆ ಬರುತ್ತಿದ್ದ ಭೀಮ ಈ ಗಾಯಗೊಂಡು ನರಳುತ್ತಿದ್ದಾನೆ.

ಇದನ್ನೂ ಓದಿ: ಮಹಿಳೆ ಮೇಲೆ‌ ಸಾಕು ನಾಯಿ ದಾಳಿ: ಚಿಕಿತ್ಸಾ ವೆಚ್ಚ ಭರಿಸದೇ ನಿರ್ಲಕ್ಷ ಆರೋಪ, ದೂರು ದಾಖಲು

ಭೀಮ ಕಳೆದ ಎರಡು ವಾರದ ಹಿಂದೆ ಹೆಗ್ಗೊವೆ ಗ್ರಾಮದ ಸಮೀಪ ಕಾಡಾನೆಗಳ ಕಾಳಗದಲ್ಲಿ ದಂತದಿಂದ ತಿವಿತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದಾನೆ. ಭೀಮ ನೋವಿನಿಂದ ಬಸವಳಿದು ಆಹಾರ ತ್ಯಜಿಸಿ, ನೋವು ತಾಳಲಾರದೆ ಪ್ರತಿನಿತ್ಯವೂ ಹೆಗ್ಗಾವೆ ಸಮೀಪದ ಹೊಂಡದ ನೀರಿನಲ್ಲಿ ಮಲಗಿ ನರಳುತ್ತಿದ್ದಾನೆ.  ಇದನ್ನು ಕಂಡು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು.

ವನ್ಯಜೀವಿ ವೈದ್ಯರು ಅಗಸ್ಟ್ 25 ರಂದು ಬೆಳಿಗ್ಗೆ ಮೈಸೂರಿನಿಂದ ಆಗಮಿಸಿ ಕಾಡಾನೆಗೆ ಚಿಕಿತ್ಸೆ ನೀಡಿದ್ದರು. ಚಿಕಿತ್ಸೆ ನೀಡಿ ನಾಲ್ಕು ದಿನವಾದರೂ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡಿಲ್ಲ. ಒಮ್ಮೆ ಚಿಕಿತ್ಸೆ ನೀಡಿ ಅರಣ್ಯ ಇಲಾಖೆ ಸಿಬ್ಬಂದಿ ಪುನಃ ಇತ್ತ ತಿರುಗಿ ನೋಡಿಲ್ಲ. ಈ ಹಿನ್ನೆಲೆಯಲ್ಲಿ ಕಾಡಾನೆ ಸೆರೆ ಹಿಡಿದು, ಸ್ಥಳಾಂತರ ಮಾಡಿ ಸೂಕ್ತ ಚಿಕಿತ್ಸೆ ನೀಡುವಂತೆ ಸ್ಥಳೀಯರ ಒತ್ತಾಯ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ