ಆನೇಕಲ್​: ಶ್ರೀಗಂಧ ಮರ ಕಳ್ಳತನ ಮಾಡಲು ಯತ್ನ, ಪಾರೆಸ್ಟ್​​ಗಾರ್ಡ್​​ ಫೈರಿಂಗ್​ನಿಂದ​ ಓರ್ವ ಸಾವು

ಬೆಂಗಳೂರಿನ ಹೊರವಲಯದ ಬನ್ನೇರುಘಟ್ಟ ಅರಣ್ಯ ಪ್ರದೇಶದಲ್ಲಿ ಶ್ರೀಂಗಧದ ಮರ ಕಳ್ಳತನ ಮಾಡುತ್ತಿದ್ದವರ ಮೇಲೆ ಫಾರೆಸ್ಟ್​ಗಾರ್ಡ್​​ ಪೈರಿಂಗ್​ ಮಾಡಿದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್.ಪಿ ಮಲ್ಲಿಕಾರ್ಜುನ್ ಬಾಲದಂಡಿ ಭೇಟಿ ನೀಡಿದ್ದಾರೆ.

ಆನೇಕಲ್​: ಶ್ರೀಗಂಧ ಮರ ಕಳ್ಳತನ ಮಾಡಲು ಯತ್ನ, ಪಾರೆಸ್ಟ್​​ಗಾರ್ಡ್​​ ಫೈರಿಂಗ್​ನಿಂದ​ ಓರ್ವ ಸಾವು
ಪಾರೆಸ್ಟ್​​ಗಾರ್ಡ್​​ ಫೈರಿಂಗ್​ನಿಂದ​ ವ್ಯಕ್ತಿ ಸಾವು
Follow us
ರಾಮು, ಆನೇಕಲ್​
| Updated By: ವಿವೇಕ ಬಿರಾದಾರ

Updated on:Aug 30, 2023 | 10:46 AM

ಆನೇಕಲ್: ಶ್ರೀಗಂಧದ ಮರ (Sandalwood Tree) ಕದಿಯಲು ಬಂದಿದ್ದ ಕಳ್ಳನ ಮೇಲೆ ಬೀಟ್​ ಫಾರೆಸ್ಟ್​​ಗಾರ್ಡ್ (Forest Gard) ಫೈರಿಂಗ್ (Firing) ಮಾಡಿದ ಪರಿಣಾಮ ​ಗಂಧದ ಚೋರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಿನ (Bengaluru) ಹೊರವಲಯದ ಬನ್ನೇರುಘಟ್ಟ (Bannerghatta) ಅರಣ್ಯ ಪ್ರದೇಶದ ಕಲ್ಕೆರೆ ಬಳಿ ನಡೆದಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಸಮೀಪದ ನಟ್ಟೂರಹಳ್ಳಿ ನಿವಾಸಿ ತಿಮ್ಮರಾಯಪ್ಪ(40) ಮೃತ ದುರ್ದೈವಿ. ಹಲವು ದಿನಗಳಿಂದ ಅರಣ್ಯದಲ್ಲಿ ಶ್ರೀಗಂಧದ ಮರಗಳು ಕಳುವಾಗಿದ್ದವು. ಹೀಗಾಗಿ ಅರಣ್ಯದಲ್ಲಿ ಫಾರೆಸ್ಟ್​ ಬೀಟ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ತಡರಾತ್ರಿ 2 ಗಂಟೆಯ ಸುಮಾರಿಗೆ ಗಂಧದ ಮರ ಕಳ್ಳತನ ಮಾಡಲು ಇಬ್ಬರು ಬಂದಿದ್ದರು.

ಇದೇ ವೇಳೆ ರೌಂಡ್ಸ್​​ನಲ್ಲಿದ್ದ ಫಾರೆಸ್ಟ್ ಗಾರ್ಡ್​​​ಗಳಿಗೆ ಮರ ಕಡಿಯುವ ಶಬ್ದ ಕೇಳಿಸಿದೆ. ಆಗ ಫಾರೆಸ್ಟ್ ಗಾರ್ಡ್​​​ಗಳು ಶರಣಾಗುವಂತೆ ವಾರ್ನಿಂಗ್ ಮಾಡಿದ್ದಾರೆ. ಶರಣಾಗದೆ ಪರಾರಿಯಾಗಲು ಯತ್ನಿಸಿದಾಗ ಫಾರೆಸ್ಟ್​​ಗಾರ್ಡ್​​ ವಿನಯ್ ಫೈರಿಂಗ್ ಮಾಡಿದ್ದಾರೆ. ಇದರಿಂದ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮತ್ತೊರ್ವ ಪರಾರಿಯಾಗಿದ್ದಾನೆ. ಮೃತನು ಮಾಲೂರು ಮೂಲದವನೆಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್.ಪಿ ಮಲ್ಲಿಕಾರ್ಜುನ್ ಬಾಲದಂಡಿ ಮತ್ತು ಎಫ್ಎಸ್ಎಲ್ ಟೀಮ್ ಭೇಟಿ ನೀಡಿದೆ.

ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಏರಿಯಾದಲ್ಲಿ ಫಾರೆಸ್ಟ್​​ಗಾರ್ಡ್ ಹಾಗೂ ಇಬ್ಬರು ವಾಚರ್ಸ್ ರೌಂಡ್ಸ್​​ನಲ್ಲಿದ್ದರು. ಈ ಜಾಗದಲ್ಲಿ ವನ್ಯ ಜೀವಿಗಳು ಹಾಗೂ ಶ್ರೀಗಂಧ ಮರಗಳು ಇರುವುದರಿಂದ ಕಳ್ಳರ ಹಾವಳಿ ಇದೆ. ಹೀಗಾಗಿ ಫಾರೆಸ್ಟ್ ವಾಚರ್ ಹಾಗೂ ಗಾರ್ಡ್ ನೈಟ್ ಪೆಟ್ರೋಲಿಂಗ್ ಮಾಡುತ್ತಿದ್ದರು. ಈ ವೇಳೆ ಅವರಿಗೆ ಮರ ಕಡಿಯುವ ಶಬ್ದ ಕೇಳಿಸಿದೆ. ಸ್ಥಳಕ್ಕೆ ಹೋಗಿ ನೋಡುತ್ತಿದ್ದಂತೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆಗೆ ಕಳ್ಳ ಮುಂದಾಗಿದ್ದಾನೆ. ಶರಣಾಗುವಂತೆ ವಾರ್ನ್ ಮಾಡಿದರೂ, ಕೇಳದೆ ಇದ್ದಾಗ ಫೈರಿಂಗ್ ಮಾಡಿದ್ದಾರೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದ್ದಾರೆ.

ಇದನ್ನೂ ಓದಿ: ಆನೆಕಲ್​​: ಪೋಸ್ಟ್​ಮಾಸ್ಟರ್​ ವಿರುದ್ಧ ಕೋಟ್ಯಂತರ ಹಣ ವಂಚನೆ ಆರೋಪ

ಈ ವೇಳೆ ಮತ್ತೋರ್ವ ಅಲ್ಲಿಂದ ಪರಾರಿಯಾಗಿದ್ದಾನೆ. ಮುಖ್ಯ ರಸ್ತೆಗೆ ಸಮೀಪದಲ್ಲಿಯೇ ಇರುವುದರಿಂದ ಕಾಂಪೌಂಡ್ ಜಿಗಿದು ಬಂದಿರುವ ಶಂಕೆ ಇದೆ. ಸ್ಥಳದಲ್ಲಿ ಗರಗಸ, ಮಚ್ಚುಗಳು ಸಿಕ್ಕಿವೆ. ಪ್ರಿಂಗರ್ ಪ್ರಿಂಟ್, ಡಾಗ್ ಸ್ಕ್ವಾಡ್, ಎಫ್ಎಸ್ಎಲ್ ತಂಡದವರು ಸಹ ಪರಿಶೀಲನೆ ನಡೆಸುತ್ತಿದ್ದಾರೆ ಎಂದರು.

ಇನ್ನು ಘಟನಾ ಸ್ಥಳಕ್ಕೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ ಎ ದಯಾನಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ  ಅರಣ್ಯ ಇಲಾಖೆ ಸಿಬ್ಬಂದಿಗಳಿಂದ ಮಾಹಿತಿ ಪಡೆದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮೇಲ್ನೋಟಕ್ಕೆ ಗಂಧದ ಮರ ಕಳ್ಳತನಕ್ಕೆ ಬಂದಿರುವುದು ಸ್ಪಷ್ಟವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಆತ್ಮ ರಕ್ಷಣೆಗಾಗಿ ಎನ್​ಕೌಂಟರ್ ಮಾಡಿದ್ದಾರೆ. ಎನ್​​ಕೌಂಟರ್​​ ಪ್ರಕರಣಗಳು ಜಿಲ್ಲಾ ಮ್ಯಾಜಿಸ್ಟ್ರೇಟರ್​ ಸಮ್ಮುಖದಲ್ಲಿ ಪಂಚನಾಮೆ ನಡೆಯಬೇಕಿದೆ. ಹಿಂದಿ‌ನ ಹಲವು ಪ್ರಕರಣಗಳಲ್ಲಿ ನ್ಯಾಯಾಲಯದ ಸ್ಪಷ್ಟ ನಿರ್ದೇಶನ ಇದೆ ಎಂದರು

ಈ ಹಿಂದೆ ನಡೆದ ಹೊರನಾಡು ಚಿಕ್ಕಮಗಳೂರು ನಕ್ಸಲ್​ನ ಎನ್​ಕೌಂಟರ್ ಪಂಚನಾಮೆ ನಾನೆ ನಡೆಸಿದ್ದೇನೆ. ಮರಗಳ್ಳರು ಕಾಡಿನ ಒಳಗೆ ಬಹಳಷ್ಟು ದೂರ ಬಂದಿದ್ದಾರೆ. ಆಯುಧಗಳನ್ನು ಹೊತ್ತು ತಂದಿದ್ದಾರೆ. ಗಂಧದ ಮರದ ತುಂಡುಗಳು ಸಹ ಸಿಕ್ಕಿರುವುದರಿಂದ ಗಂಧದ ಮರ ಕಳ್ಳತನಕ್ಕೆ ಬಂದಿರುವುದು ಸ್ಪಷ್ಟವಾಗಿದೆ ಎಂದು ತಿಳಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:09 am, Wed, 30 August 23

Daily Devotional: ನಮಃ ಮಂತ್ರಾಕ್ಷರದ ಅರ್ಥ ಮತ್ತು ಮಹತ್ವ ತಿಳಿಯಿರಿ
Daily Devotional: ನಮಃ ಮಂತ್ರಾಕ್ಷರದ ಅರ್ಥ ಮತ್ತು ಮಹತ್ವ ತಿಳಿಯಿರಿ
Daily horoscope: ವೃಷಭ ರಾಶಿಯವರಿಗೆ ಇಂದು ಧನಯೋಗ
Daily horoscope: ವೃಷಭ ರಾಶಿಯವರಿಗೆ ಇಂದು ಧನಯೋಗ
ಕನ್ನಡ ಹೋರಾಟಗಾರರ ಮೇಲಿನ ಕೇಸ್ ವಾಪಸ್: ಸಿಎಂ ಘೋಷಣೆ
ಕನ್ನಡ ಹೋರಾಟಗಾರರ ಮೇಲಿನ ಕೇಸ್ ವಾಪಸ್: ಸಿಎಂ ಘೋಷಣೆ
ಮಾಧ್ಯಮಗೋಷ್ಠಿಯಲ್ಲಿ ಲೈಮ್​ಲೈಟನ್ನು ತನ್ನ ಮೇಲೆ ಎಳೆದುಕೊಂಡಿದ್ದು ಹನುಮಂತು
ಮಾಧ್ಯಮಗೋಷ್ಠಿಯಲ್ಲಿ ಲೈಮ್​ಲೈಟನ್ನು ತನ್ನ ಮೇಲೆ ಎಳೆದುಕೊಂಡಿದ್ದು ಹನುಮಂತು
‘ನನಗೂ ಫ್ಯಾಮಿಲಿ ಇದೆ’: ಮಾಜಿ ಗೆಳತಿ ಕಿರಿಕ್​ ಬಗ್ಗೆ ರಜತ್ ಸ್ಪಷ್ಟನೆ
‘ನನಗೂ ಫ್ಯಾಮಿಲಿ ಇದೆ’: ಮಾಜಿ ಗೆಳತಿ ಕಿರಿಕ್​ ಬಗ್ಗೆ ರಜತ್ ಸ್ಪಷ್ಟನೆ
ಬಿಬಿಎಲ್ ಫೈನಲ್‌ನಲ್ಲಿ ದಾಖಲೆಯ ಶತಕ ಸಿಡಿಸಿದ ಮಿಚೆಲ್ ಓವನ್
ಬಿಬಿಎಲ್ ಫೈನಲ್‌ನಲ್ಲಿ ದಾಖಲೆಯ ಶತಕ ಸಿಡಿಸಿದ ಮಿಚೆಲ್ ಓವನ್
ಮಾಧ್ಯಮದವರು ಪ್ರಶ್ನೆ ಕೇಳಿದಾಗ ಹನುಮಂತನಿಂದ ಅದೇ ಮುಗ್ಧತೆಯ ಉತ್ತರ!
ಮಾಧ್ಯಮದವರು ಪ್ರಶ್ನೆ ಕೇಳಿದಾಗ ಹನುಮಂತನಿಂದ ಅದೇ ಮುಗ್ಧತೆಯ ಉತ್ತರ!
ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ಫೈನಾನ್ಸ್ ಸಂಸ್ಥೆ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ಜಿಲ್ಲಾಡಳಿತಕ್ಕೆ ಸೂಚನೆ
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?
ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್
ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್