ಕಲಬುರಗಿ: ಮಿಲಾದ್ ಉನ್ ನಬಿ ಅಂಗವಾಗಿ ಸೆ.27 ರಿಂದ ಇಸ್ಲಾಮಿಕ್ ಚಿತ್ರಕಲಾ ಪ್ರದರ್ಶನ

| Updated By: Rakesh Nayak Manchi

Updated on: Sep 26, 2023 | 6:32 PM

ಕಲಬುರಗಿ ನಗರದಲ್ಲಿ ಮಿಲಾದ್ ಉನ್ ನಬಿ ಅಂಗವಾಗಿ ಸೆಪ್ಟಂಬರ್ 27, 28 ರಂದು ಎರಡು ದಿನಗಳ ಕಾಲ ಚಿತ್ರಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಮುಸ್ಲಿಂ, ಹಿಂದೂ ಸೇರಿದಂತೆ ಎಲ್ಲಾ ಧರ್ಮದ ಚಿತ್ರ ಕಲಾವಿದರು ಇಸ್ಲಾಮಿಕ್ ಕಲೆ, ವಾಸ್ತುಶಿಲ್ಪದ ಹಿನ್ನೆಲೆಯಲ್ಲಿ ರಚಿಸಿರುವ ಚಿತ್ರಗಳನ್ನು ಪ್ರದರ್ಶನಕ್ಕಿಡಲಾಗುತ್ತಿದೆ.

ಕಲಬುರಗಿ: ಮಿಲಾದ್ ಉನ್ ನಬಿ ಅಂಗವಾಗಿ ಸೆ.27 ರಿಂದ ಇಸ್ಲಾಮಿಕ್ ಚಿತ್ರಕಲಾ ಪ್ರದರ್ಶನ
ಕಲಬುರಗಿಯಲ್ಲಿ ಸೆ.27 ಮತ್ತು 28 ರಂದು ಇಸ್ಲಾಮಿಕ್ ಚಿತ್ರಕಲಾ ಪ್ರದರ್ಶನ
Follow us on

ಕಲಬುರಗಿ, ಸೆ.26: ಮುಸ್ಲಿಂ ರಾಜರ ಆಳ್ವಿಕೆಯಲ್ಲಿ ನಿರ್ಮಾಣವಾದ ಕಲೆ ಮತ್ತು ವಾಸ್ತುಶಿಲ್ಪ ವಿಶ್ವಪ್ರಸಿದ್ದಿ ಪಡೆದಿದ್ದು, ಇದನ್ನು ಯುವ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಚಿತ್ರ ಕಲಾವಿದರ ಕೂಟದಿಂದ ಕಲಬುರಗಿ (Kalaburagi) ನಗರದಲ್ಲಿ ಮಿಲಾದ್ ಉನ್ ನಬಿ ಅಂಗವಾಗಿ ಸೆಪ್ಟಂಬರ್ 27, 28 ರಂದು ಎರಡು ದಿನಗಳ ಕಾಲ ಚಿತ್ರಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಮುಸ್ಲಿಂ, ಹಿಂದೂ ಸೇರಿದಂತೆ ಎಲ್ಲಾ ಧರ್ಮದ ಚಿತ್ರ ಕಲಾವಿದರು ಇಸ್ಲಾಮಿಕ್ ಕಲೆ, ವಾಸ್ತುಶಿಲ್ಪದ ಹಿನ್ನೆಲೆಯಲ್ಲಿ ರಚಿಸಿರುವ ಚಿತ್ರಗಳನ್ನು ಪ್ರದರ್ಶನಕ್ಕಿಡಲಾಗುತ್ತಿದೆ.

ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಬಾಗದಲ್ಲಿ ಅನೇಕ ಮುಸ್ಲಿಂ ರಾಜ ಮನೆತನಗಳು ಆಡಳಿತ ನಡೆಸಿವೆ. ಬಹಮನಿ ಸುಲ್ತಾನರ ಮೊದಲ ರಾಜಧಾನಿ ಕಲಬುರಗಿಯಾಗಿತ್ತು. ಕಲಬುರಗಿ, ಬೀದರ್, ರಾಯಚೂರು, ಸೇರಿದಂತೆ ನೆರಯ ವಿಜಯಪುರ ಜಿಲ್ಲೆಯಲ್ಲಿ ಮುಸ್ಲಿಂ ರಾಜರ ಆಳ್ವಿಕೆಯಲ್ಲಿ ನಿರ್ಮಾಣವಾದ ಕಲೆ ಮತ್ತು ವಾಸ್ತುಶಿಲ್ಪ ವಿಶ್ವಪ್ರಸಿದ್ದಿಯನ್ನು ಪಡೆದಿವೆ.

ಆದರೆ, ಇಸ್ಲಾಮಿಕ್ ಕಲೆ ಮತ್ತು ವಾಸ್ತಶಿಲ್ಪದ ಮಾಹಿತಿ ಅನೇಕರು ಮರೆಯುತ್ತಿದ್ದಾರೆ. ಹೊಸ ಪೀಳಿಗೆಗೆ ಅದರ ಅರಿವು ಕಡಿಮೆಯಾಗುತ್ತಿದೆ. ಹೀಗಾಗಿ ಕಲಬುರಗಿ ನಗರದಲ್ಲಿ ಚಿತ್ರ ಕಲಾವಿದರ ಕೂಟದಿಂದ ಮಿಲದ್ ಉನ್ ನಬಿ ಅಂಗವಾಗಿ ಸೆಪ್ಟಂಬರ್ 27, 28 ರಂದು ಎರಡು ದಿನಗಳ ಕಾಲ ಇಸ್ಲಾಮಿಕ್ ಪೇಂಟಿಂಗ್ ಎಕ್ಸಿಬಿಷನ್ ಮತ್ತು ಸಮಿನಾರ್ ಅನ್ನು ಆಯೋಜಿಸಲಾಗಿದೆ.

ಇದನ್ನೂ ಓದಿ: ಕಲಬುರಗಿ ಗ್ರಾಮ ಪಂಚಾಯತ್ ನೇಮಕಾತಿ 2023: 45 ಲೈಬ್ರರಿ ಸೂಪರ್‌ವೈಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ಕಲಬುರಗಿ ನಗರದ ಸಂತ್ರಸವಾಡಿ ಬಳಿಯಿರುವ ಹಿದಾಯತ್ ಕೇಂದ್ರದಲ್ಲಿ, ಎರಡು ದಿನಗಳ ಕಾಲ ಇಸ್ಲಾಮಿಕ್ ಪೇಂಟಿಂಗ್ ಎಕ್ಸಿಬಿಷನ್ ಆಯೋಜಿಸಲಾಗಿದೆ. ಪ್ರದರ್ಶನದಲ್ಲಿ ಕಲಬುರಗಿ, ಬೀದರ್, ವಿಜಯಪುರ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಮೂವತ್ತು ಚಿತ್ರಕಲಾವಿಧರು ಆಗಮಿಸುತ್ತಿದ್ದು, ತಮ್ಮ ಚಿತ್ರಗಳನ್ನು ಪ್ರದರ್ಶಿಸಲಿದ್ದಾರೆ. ಬೆಳಗ್ಗೆ 10.30 ರಿಂದ ಸಂಜೆ 6 ಗಂಟೆವರಗೆ ಎರಡು ದಿನಗಳ ಕಾಲ ಚಿತ್ರ ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕಳೆದ ಮೂರು ವರ್ಷಗಳಿಂದ ಪ್ರತಿ ವರ್ಷ ಎರಡು ದಿನಗಳ ಕಾಲ ಚಿತ್ರಗಳ ಪ್ರದರ್ಶನವನ್ನು ಕಲಬುರಗಿ ನಗರದಲ್ಲಿ ಚಿತ್ರಕಲಾವಿದರ ಕೂಟದಿಂದ ಆಯೋಜಿಸಲಾಗುತ್ತಿದೆ. ಈ ಚಿತ್ರಪ್ರದರ್ಶನದಲ್ಲಿ ಮುಸ್ಲಿಂ, ಹಿಂದೂ ಸೇರಿದಂತೆ ಎಲ್ಲಾ ಧರ್ಮದ ಚಿತ್ರ ಕಲಾವಿಧರು ಇಸ್ಲಾಮಿಕ್ ಕಲೆ, ವಾಸ್ತುಶಿಲ್ಪದ ಹಿನ್ನೆಲೆಯಲ್ಲಿ ರಚಿಸಿರುವ ಚಿತ್ರಗಳನ್ನು ಪ್ರದರ್ಶನ ಮಾಡಲಿದ್ದಾರೆ.

ಇಸ್ಲಾಮಿಕ್ ವಾಸ್ತು ಶಿಲ್ಪದ ಅನೇಕ ಕುರುಹುಗಳು ಇಂದಿಗೂ ಕಲಬುರಗಿ, ವಿಜಯಪುರ, ಬೀದರ್ ಕೋಟೆಯಲ್ಲಿ ಇವೆ. ಮೋಜಾಯಿಕ್, ಕ್ಯಾಲಿಗ್ರಾಪಿ ವರ್ಕ್ ಎಲ್ಲರ ಮನಸೂರೆಗೊಳ್ಳುವಂತೆ ಇದೆ. ಆದರೆ ಹೊಸ ಪೀಳಿಗೆಗೆ ಅವುಗಳ ಪರಿಚೆಯ ಇಲ್ಲದಂತಾಗುತ್ತಿದೆ. ಹೀಗಾಗಿ ಚಿತ್ರಪ್ರದರ್ಶನ ಮೂಲಕ ಅವುಗಳನ್ನು ತಿಳಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಕಾರ್ಯಕ್ರಮದ ಸಂಘಟಕ ಮತ್ತು ಚಿತ್ರಕಲಾವಿದ ಮಹಮ್ಮದ್ ಆಯಾಜುದ್ದೀನ್ ಪಟೇಲ್ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ