PSI ಅಕ್ರಮದಲ್ಲಿ ದಿವ್ಯಾ ಹಾಗರಗಿಯನ್ನು ಒಪ್ಪಿಸಿದ್ದ ಜ್ಞಾನಜ್ಯೋತಿ ಹೆಡ್​ಮಾಸ್ಟರ್ ಕಾಶಿನಾಥ್ ಸಿಐಡಿ ಪೊಲೀಸರ ಮುಂದೆ ಶರಣಾಗತಿ

| Updated By: sandhya thejappa

Updated on: May 02, 2022 | 11:38 AM

ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯನ್ನು ಒಪ್ಪಿಸಿದ್ದ ಜ್ಞಾನಜ್ಯೋತಿ ಹೆಡ್ಮಾಸ್ಟರ್ ಕಾಶಿನಾಥ್ ಇಂದು (ಮೇ 02) ಸಿಐಡಿ ಪೊಲೀಸರ ಮುಂದೆ ಶರಣಾಗಿದ್ದಾರೆ. ತಾನಾಗಿಯೇ ಸಿಐಡಿ ಪೊಲೀಸರ ಮುಂದೆ ಶರಣಾಗಿದ್ದಾರೆ.

PSI ಅಕ್ರಮದಲ್ಲಿ ದಿವ್ಯಾ ಹಾಗರಗಿಯನ್ನು ಒಪ್ಪಿಸಿದ್ದ ಜ್ಞಾನಜ್ಯೋತಿ ಹೆಡ್​ಮಾಸ್ಟರ್ ಕಾಶಿನಾಥ್ ಸಿಐಡಿ ಪೊಲೀಸರ ಮುಂದೆ ಶರಣಾಗತಿ
ಹೆಡ್​ಮಾಸ್ಟರ್​ ಕಾಶಿನಾಥ್
Follow us on

ಕಲಬುರಗಿ: ಪಿಸಿಐ ಹುದ್ದೆಗಳ ನೇಮಕಾತಿಯಲ್ಲಿ (PSI Recruitment) ನಡೆದ ಅಕ್ರಮದಲ್ಲಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿಯನ್ನು ಒಪ್ಪಿಸಿದ್ದ ಜ್ಞಾನಜ್ಯೋತಿ ಹೆಡ್​ಮಾಸ್ಟರ್​ ಕಾಶಿನಾಥ್ (Kashinath) ಇಂದು (ಮೇ 02) ಸಿಐಡಿ ಪೊಲೀಸರ ಮುಂದೆ ಶರಣಾಗಿದ್ದಾನೆ. ತಾನಾಗಿಯೇ ಸಿಐಡಿ ಪೊಲೀಸರ ಮುಂದೆ ಶರಣಾಗಿದ್ದಾನೆ. ದಿವ್ಯಾ ಹಾಗರಗಿ ಒಡೆತನದ ಜ್ಞಾನಜ್ಯೋತಿ ಶಾಲೆಯಲ್ಲಿ ಕಾಶಿನಾಥ್ ಹೆಡ್ಮಾಸ್ಟರ್ ಆಗಿದ್ದಾನೆ. ಪರೀಕ್ಷಾ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ನಾಪತ್ತೆಯಾಗಿದ್ದ. ಕಾಶಿನಾಥ್​ಗಾಗಿ ಸಿಐಡಿ ಪೊಲೀಸರು ಹಲವೆಡೆ ಹುಡುಕಾಟ ನಡೆಸಿದ್ದರು. ಅಂತಿಮವಾಗಿ ತಾನಾಗಿಯೇ ಸಿಐಡಿ ಕಚೇರಿಗೆ ಬಂದಿದ್ದಾನೆ.

ಅಕ್ರಮದ ಕಿಂಗ್​ಪಿನ್​ಗಳಾದ ರುದ್ರಗೌಡ ಪಾಟೀಲ್​, ನೀರಾವರಿ ಇಲಾಖೆ ಎಇ ಮಂಜುನಾಥ ಮೇಳಕುಂದಿ ಜತೆ ಕಾಶಿನಾಥ್ ಸಂಪರ್ಕ ಹೊಂದಿದ್ದ. ಅಕ್ರಮ ನಡೆಸಲು ಸಹಕರಿಸುವಂತೆ ದಿವ್ಯಾ ಹಾಗರಗಿಯನ್ನು ಒಪ್ಪಿಸಿದ್ದ. ನಂತರ ಅಕ್ರಮ ಬಯಲಿಗೆ ಬರುತ್ತಿದ್ದಂತೆ ಏಪ್ರಿಲ್ 10ರಿಂದ ಕಾಣೆಯಾಗಿದ್ದ. ಈತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿವರೆಗೆ ಒಟ್ಟು 26 ಆರೋಪಿಗಳನ್ನ ಬಂಧಿಸಲಾಗಿದೆ. ದಿವ್ಯಾ ಹಾಗರಗಿ ಬಂಧನವಾಗುತ್ತಿದ್ದಂತೆ ಕಿಂಗ್​ಪಿನ್ ಗಳು ಒಬ್ಬಬ್ಬರೇ ಶರಣಾಗುತ್ತಿದ್ದಾರೆ.

ಬೆಂಗಳೂರಿನಿಂದ ಆಯ್ಕೆಯಾಗಿದ್ದ 172 ಅಭ್ಯರ್ಥಿಗಳಿಗೆ ಹಾಲ್ ಟಿಕೆಟ್, ಓಎಮ್​ಆರ್ ಹಾಜರುಪಡಿಸಲು ಸಿಐಡಿ ನೋಟೀಸ್ ನೀಡಿತ್ತು. ಅಭ್ಯರ್ಥಿಗಳು ಏಪ್ರಿಲ್​ 20, 21, 22 ವಿಚಾರಣೆ ಹಾಜರಾಗಿದ್ದರು.  172ರ ಪೈಕಿ 4 ಅಭ್ಯರ್ಥಿ ಕಾರ್ಬನ್ ಕಾಪಿ ಹಾಜರು ಪಡಿಸಿಲ್ಲ. 168 ಅಭ್ಯರ್ಥಿ ಕಾರ್ಬನ್ ಕಾಫಿ ಸಿಐಡಿಗೆ ಹಾಜರು ಪಡಿಸಿದ್ದರು. ಸಿಐಡಿ 168 ಕಾರ್ಬನ್ ಕಾಫಿ ಎಫ್​ಎಸ್​ಎಲ್​ಗೆ ಕಳಿಸಿತ್ತು.  ಎಫ್​ಎಸ್​ಎಲ್​ ವರದಿಯಲ್ಲಿ ಓಎಮ್​ಆರ್ ಪ್ರತಿಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಅಸಲಿ ಓಎಮ್​ಆರ್​ ಮತ್ತು ಕಾರ್ಬನ್ ಓಎಮ್​ಆರ್​​ನಲ್ಲಿ ವ್ಯಾತ್ಯಾಸ ಇದೆ.

ಏ.10ರಂದು ಕಲಬುರಗಿ ಹೊರವಲಯದಲ್ಲಿ ವೀರೇಶ್​ನ ಬಂಧಿಸಲಾಗಿದೆ. ಏ.16ರಂದು 6 ಆರೋಪಿಗಳನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಕೊಠಡಿ ಮೇಲ್ವಿಚಾರಕಿಯರಾದ ಸುಮಾ, ಸಾವಿತ್ರಿ, ಸಿದ್ದಮ್ಮ, ಅಭ್ಯರ್ಥಿಗಳಾದ ಪ್ರವೀಣ್, ಅರುಣ್, ಚೇತನ್ ನಂದಗಾವ್ ಅರಸ್ಟ್ ಮಾಡಲಾಗಿದೆ. ಕಲಬುರಗಿ ನಗರದಲ್ಲಿಯೇ ಅಧಿಕಾರಿಗಳು 6 ಜನರನ್ನು ಬಂಧಿಸಿದ್ದರು.  ಏ.17ರಂದು ಬಿಜೆಪಿ ನಾಯಕಿ ದಿವ್ಯಾ ಪತಿ ರಾಜೇಶ್, ಏ.21ರಂದು ಹಯ್ಯಾಳಿ ದೇಸಾಯಿ, ಪೇದೆ ರುದ್ರಗೌಡ, ಏ.22ರಂದು ಅಫಜಲಪುರದಲ್ಲಿ ಮಹಾಂತೇಶ್ ಪಾಟೀಲ್ ಅರೆಸ್ಟ್ ಮಾಡಲಾಗಿದೆ. ಏ.22ರಂದು ತಾತ್ಕಾಲಿಕ ಪಟ್ಟಿಯಲ್ಲಿ ಆಯ್ಕೆಯಾಗಿದ್ದ ವಿಶಾಲ್, ಪರೀಕ್ಷಾ ಅಕ್ರಮಕ್ಕೆ ಸಹಕಾರ ಹಿನ್ನೆಲೆ ಶರಣಬಸಪ್ಪ,  ಏ.23ರಂದು ರುದ್ರಗೌಡ ಪಾಟೀಲ್, ಮಲ್ಲಿಕಾರ್ಜುನನ್ನು ಬಂಧಿಸಲಾಗಿದೆ. ಏ.26ರಂದು ಕಲಬುರಗಿಯಲ್ಲಿ ಎನ್.ವಿ.ಸುನಿಲ್ ಬಂಧಿಸಲಾಗಿದೆ. ಅಕ್ರಮವಾಗಿ ಪರೀಕ್ಷೆ ಬರೆದು ಆಯ್ಕೆಯಾಗಿದ್ದ ಎನ್.ವಿ.ಸುನಿಲ್ ಮತ್ತು ಏ.27ರಂದು ಕಲಬುರಗಿ ನಗರದಲ್ಲಿ ಜ್ಯೋತಿ ಪಾಟೀಲ್ ಅರೆಸ್ಟ್ ಆಗಿದ್ದಾರೆ.

ಇದನ್ನೂ ಓದಿ

ಹವಾಮಾನ ವೈಪರಿತ್ಯ: ಅಪಾಯದಲ್ಲಿ ಸಿಲುಕಿದ್ದ ಸ್ಪೈಸ್​ಜೆಟ್ ವಿಮಾನ ಸುರಕ್ಷಿತ ಲ್ಯಾಂಡಿಂಗ್, 188 ಪ್ರಯಾಣಿಕರು ಪಾರು

ಬಿಸಿಲಿನ ಬೇಗೆಯ ನಡುವೆಯೇ ಗದಗ ಜನರಿಗೆ ನೀರಿನ ಸಮಸ್ಯೆ; ಒಂದು ತಿಂಗಳಿಂದ ಹನಿ ನೀರಿಗಾಗಿ ಗಣೇಶ್ ನಗರ ಜನರ ಪರದಾಟ

Published On - 10:01 am, Mon, 2 May 22