Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಸಿಲಿನ ಬೇಗೆಯ ನಡುವೆಯೇ ಗದಗ ಜನರಿಗೆ ನೀರಿನ ಸಮಸ್ಯೆ; ಒಂದು ತಿಂಗಳಿಂದ ಹನಿ ನೀರಿಗಾಗಿ ಗಣೇಶ್ ನಗರ ಜನರ ಪರದಾಟ

ಸೂರ್ಯನ ಝಳಕ್ಕೆ ಅವಳಿ ನಗರದ ಜನ್ರು ಬಸವಳಿದು ಹೋಗಿದ್ದಾರೆ. ಅದ್ರಲ್ಲೂ ಗಣೇಶ್ ನಗರದಲ್ಲಿ ಇರೋದು ಬಡ ಕುಟುಂಬಗಳು ಇವತ್ತು ದುಡಿದ್ರೆ ಮಾತ್ರ ಹೊಟ್ಟೆ ತುಂಬುವಂತ ಪರಿಸ್ಥಿತಿ. ಆದ್ರೆ, ನೀರಿಗಾಗಿ ಇಲ್ಲಿನ ಜನ್ರು ಉಪವಾಸ ವನವಾಸ ಸಾಯುವಂತಾಗಿದೆ ಅಂತ ಕಿಡಿಕಾರಿದ್ದಾರೆ.

ಬಿಸಿಲಿನ ಬೇಗೆಯ ನಡುವೆಯೇ ಗದಗ ಜನರಿಗೆ ನೀರಿನ ಸಮಸ್ಯೆ; ಒಂದು ತಿಂಗಳಿಂದ ಹನಿ ನೀರಿಗಾಗಿ ಗಣೇಶ್ ನಗರ ಜನರ ಪರದಾಟ
ಬಿಸಿಲಿನ ಬೇಗೆಯ ನಡುವೆಯೇ ಗದಗ ಜನರಿಗೆ ನೀರಿನ ಸಮಸ್ಯೆ; ಒಂದು ತಿಂಗಳಿಂದ ಹನಿ ನೀರಿಗಾಗಿ ಗಣೇಶ್ ನಗರ ಜನರ ಪರದಾಟ
Follow us
TV9 Web
| Updated By: ಆಯೇಷಾ ಬಾನು

Updated on: May 02, 2022 | 9:13 AM

ಗದಗ: ಆ ಬಡ ಜನ್ರ ಬದುಕು ನರಕವಾಗಿದೆ. ಹನಿ ನೀರಿಗಾಗಿ ಬಡ ಕುಟುಂಬಗಳು ನಿತ್ಯ ಗೋಳಾಡುತ್ತಿದ್ದಾರೆ. ಚರಂಡಿ ಮಿಶ್ರಿತ ನೀರು ಕುಡಿಯವ ಕೆಟ್ಟ ಸ್ಥಿತಿ ಬಂದಿದೆ. ನಗರಸಭೆ ಕಚೇರಿಗೆ ಮುತ್ತಿಗೆ ಹಾಕಿ ಅಧ್ಯಕ್ಷೆ, ಆಯುಕ್ತರಿಗೆ ಮನವಿ ಮಾಡಿದ್ರೂ ಡೋಂಟ್ ಕೇರ್ ಅಂತಿದ್ದಾರೆ. ಇವ್ರ ಕಲ್ಲು ಮನಸ್ಸಿಗೆ ಮಹಿಳೆಯರು ಹಿಡಿ ಶಾಪ ಹಾಕ್ತಾಯಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸರ್ಕಾರ ಮುಜುಗರ ಅನುಭವಿಸುವಂತಾಗಿದೆ. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಬಡ ಕುಟುಂಬಗಳು ಆಕ್ರೋಶ ವ್ಯಕ್ತಪಡಿಸಿವೆ. ನಮಗೆ ಕುಡಿಯೋಕೆ ನೀರು ಕೊಟ್ಟು ಪುಣ್ಯ ಕಟ್ಕೊಳ್ಳಿ ಅಂತ ಗೋಳಾಡುತ್ತಿದ್ದಾರೆ. ಆದ್ರೆ, ಜಿಲ್ಲಾಡಳಿತ ಮಾತ್ರ ನಮಗೆನೂ ಸಂಬಂಧವೇ ಇಲ್ಲ ಅಂತ ಮೌನಕ್ಕೆ ಶರಣಾಗಿದೆ. ಇದು ಬಡ ಜನ್ರ ಕೋಪಕ್ಕೆ ಕಾರಣವಾಗಿದೆ. ತಾಳ್ಮೆ ಮೀರಿದ್ರೆ ಪೊರಕೆ ಹಿಡಿದು ನರಸಭೆಗೆ ಬರ್ಬೇಕಾಗುತ್ತೆ ಅಂತ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ತಿಂಗಳಿಂದ ಹನಿ ನೀರಿಗೆ ಪರದಾಟ ಗದಗ ನಗರದ ಬೆಟಗೇರಿಯ ವಾರ್ಡ್ 5ರ ಗಣೇಶ್ ನಗರದಲ್ಲಿ ನೂರಾರು ಕೋಟಿ ಖರ್ಚು ಮಾಡಿ 24/7 ಕುಡಿಯುವ ನೀರಿನ ಯೋಜನೆ ಜಾರಿ ಮಾಡಲಾಗಿದೆ. ಯೋಜನೆ ಜಾರಿಯಾಗಿ ಮೂರು ವರ್ಷಗಳು ಕಳೆದ್ರೂ ಆ ಅವಳಿ ನಗರದ ಜನ್ರ ನೀರಿನ ಗೋಳಾಟ ಇನ್ನೂ ತಪ್ಪಿಲ್ಲ. 24/7 ನಲ್ಲಿ ಹನಿ ನೀರು ಜಿನುಗುತ್ತಿಲ್ಲ. ಹೌದು ಸೂರ್ಯನ ಝಳಕ್ಕೆ ಅವಳಿ ನಗರದ ಜನ್ರು ಬಸವಳಿದು ಹೋಗಿದ್ದಾರೆ. ಅದ್ರಲ್ಲೂ ಗಣೇಶ್ ನಗರದಲ್ಲಿ ಇರೋದು ಬಡ ಕುಟುಂಬಗಳು ಇವತ್ತು ದುಡಿದ್ರೆ ಮಾತ್ರ ಹೊಟ್ಟೆ ತುಂಬುವಂತ ಪರಿಸ್ಥಿತಿ. ಆದ್ರೆ, ನೀರಿಗಾಗಿ ಇಲ್ಲಿನ ಜನ್ರು ಉಪವಾಸ ವನವಾಸ ಸಾಯುವಂತಾಗಿದೆ ಅಂತ ಕಿಡಿಕಾರಿದ್ದಾರೆ. ಈ ಬಡಾವಣೆಗೆ ಒಂದು ತಿಂಗಳಿಂದ ಹನಿ ನೀರು ಪೂರೈಕೆಯಾಗಿಲ್ಲ. ಹೀಗಾಗಿ ನೀರಿಗಾಗಿ ಬಡಾವಣೆ ಬಡಾವಣೆ ಅಲೆದು ನೀರು ತರುಷ್ಟರಲ್ಲಿ ಸೋತು ಸುಣ್ಣವಾಗುತ್ತಿದ್ದಾರೆ. ಇದ್ರಿಂದ ದುಡಿಯುವ ಕುಟುಂಬಗಳು ಕೆಲಸಕ್ಕೆ ಹೋಗದಂತ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ವಾರದ ಹಿಂದೆ ನೂರಾರು ಮಹಿಳೆಯರು ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಆಯುಕ್ತ ಸುಣಗಾರ ಅವ್ರನ್ನು ತರಾಟೆಗೆ ತೆಗೆದುಕೊಂಡು ಕುಡಿಯುವ ನೀರು ಬಿಡುವಂತೆ ಮನವಿ ಮಾಡಿದ್ದಾರೆ.

ಗದಗ ಜಿಲ್ಲೆಯ ಇತರೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಆದ್ರೂ ವಾರ ಕಳೆದ್ರೂ 5ನೇ ವಾರ್ಡ್ ಗಣೇಶ್ ನಗರದ ಕುಟುಂಬಗಳಿಗೆ ಹನಿ ನೀರು ನಗರಸಭೆ ಪೂರೈಕೆ ಮಾಡಿಲ್ಲ. ಇದು ಮಹಿಳೆಯರ ಅಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಖಾಲಿ ಕೊಡಗಳೊಂದಿಗೆ ಬೀದಿಗಿಳಿದ ಮಹಿಳೆಯರು ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಬೇಸಿಗೆ ಸಮಯದಲ್ಲಿ ವಾರಕ್ಕೆ ಒಂದು ಭಾರಿಯಾದ್ರು ಕುಡಿಯುವ ನೀರು ಬಿಡಬೇಕು. ಆದ್ರೆ ತಿಂಗಳು ಕಳೆದ್ರು ಹನಿ ನೀರು ಬಿಡಿಲ್ಲಾ ಗದಗ ಬೆಟಗೇರಿ ನಗರಸಬೆ ಅಧಿಕಾರಿಗಳು. ಹೀಗಾಗಿ ವಾರ್ಡ್ 5ರ ಗಣೇಶ್ ಬಡಾವಣೆಯ ಮಹಿಳೆಯರು ಖಾಲಿ ಕೊಡಗಳನ್ನು ಹಿಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಸಮರ್ಪಕವಾಗಿ ಕುಡಿಯುವ ನೀರು ಬಿಡಬೇಕು ಸ್ಥಳೀಯ ಮಹಿಳೆ ಮಮತಾಜ್ ಒತ್ತಾಯಿಸಿದ್ದಾರೆ.

ಇಲ್ಲಿನ ಜನ್ರ ನೀರಿನ ಗೋಳಾಟ ಇಂದು ನಿನ್ನೆಯದಲ್ಲ. ಒಂದು ವರ್ಷದಿಂದ ಕುಡಿಯುವ ನೀರಿಗಾಗಿ ಜನ್ರು ಒದ್ದಾಡುತ್ತಿದ್ದಾರೆ. ಜನಪ್ರತಿನಿಧಿಗಳು ಚುನಾವಣೆ ಬಂದಾಗಿ ಇಲ್ಲಿಗೆ ಬಂದು ಕೈ ಮುಗಿತಾರೇ. ಬಳಿಕ ಇತ್ತ ಸುಳಿಯುತ್ತಿಲ್ಲ ಅಂತ ಜನ್ರು ಕಿಡಿಕಾರಿದ್ದಾರೆ. 5 ನೇ ವಾರ್ಡ್ ಗೆ ಬಿಜೆಪಿ ಸದಸ್ಯೆ ಖಾಕಿ ಅನ್ನೋರು ಇದ್ದಾರೆ. ಸಾಕಷ್ಟು ಬಾರಿ ಹೇಳಿದ್ರೂ ಸ್ಪಂದಿಸುತ್ತಿಲ್ಲ ಅಂತ ಕಿಡಿಕಾರಿದ್ದಾರೆ. ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆ ತಲೆದೂರಿದ್ರೂ ಕ್ಷೇತ್ರದ ಶಾಸಕ ಎಚ್ ಕೆ ಪಾಟೀಲ್ ಅವ್ರು ಕೂಡ ಮೌನಕ್ಕೆ ಶರಣಾಗಿದೆ. ಸರ್ಕಾರ, ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ ಜನ್ರ ನೀರಿನ ದಾಹ ತೀರಿಸಬೇಕಾದ ಶಾಸಕರು ಮೌನಕ್ಕೆ ಶರಣಾಗಿದ್ದು ಜನ್ರ ಕೋಪಕ್ಕೆ ಕಾರಣವಾಗಿದೆ. ನೀರು ಬಿಡದಿದಕ್ಕೆ ಫ್ಲೋರೈಡಯುಕ್ತ ಕೊಳವೆ ಬಾವಿ ನೀರು ಕುಡಿದು ಸಾಯುವಂತಾಗಿದೆ ಅಂತ ಮಹಿಳೆಯರು ಕಿಡಿಕಾರಿದ್ದಾರೆ. ಚುನಾವಣೆ ಬಂದಾಗ ದಿನಕ್ಕೆ ಎರಡು ಭಾರಿ ವೊಟ್ ಕೇಳಲು ಬರ್ತಾರೆ, ಈವಾಗ ಚುನಾಯಿತ ಪ್ರತಿನಿಧಿಗಳು ಇತ್ತ ಸುಳಿಯುತ್ತಿಲ್ಲ ಅಂತ ಶಾಸಕರು, ಸದಸ್ಯರ ವಿರುದ್ಧ ಕಿಡಿಕಾರಿದ್ದಾರೆ. ಗದಗ-ಬೆಟಗೇರಿ ಅಡಳಿತದಲ್ಲಿರೋ ಬಿಜೆಪಿ ನದಿಯಲ್ಲಿ ಸಾಕಷ್ಟು ನೀರಿದ್ರೂ ಕುಡಿಯುವ ನೀರು ಪೂರೈಕೆ ಮಾಡುವಲ್ಲಿ ವಿಫಲವಾಗಿದೆ ಅಂತ ಕಿಡಿಕಾರಿದ್ದಾರೆ. ಕೂಡಲೇ ನಮ್ಮ ನೀರಿನ ಬವಣೆಯನ್ನು ನಿಗಿಸಬೇಕು ಅಂತ ಬಡಾವಣೆ ನಿವಾಸಿ ಮುತ್ತಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿ ನಿರಂತರ ಕುಡಿಯುವ ನೀರಿನ ಯೋಜನೆಯನ್ನು ಜಾರಿ ಮಾಡಿದ್ರು ಗದಗ-ಬೆಟಗೇರಿ ಅವಳಿ ನಗರದ ಜನ್ರಿಗೆ ನೀರಿನ ಗೋಳಾಟ ತಪ್ಪಿಲ್ಲ. ಹೀಗಾಗಿ ಅವಳಿ ನಗರದ ಜನ್ರು ಹನಿ ಹನಿ ನೀರಿಗೂ ನಿತ್ಯ ಗೋಳಾಡುತ್ತಿರೋದು ಮಾತ್ರ ದುರಂತ. ಇನಾದ್ರು ಕ್ಷೇತ್ರದ ಶಾಸಕರು, ನಗರಸಭೆ ಆಡಳಿತ ಹಾಗೂ ಅಧಿಕಾರಿಗಳು ಎಚ್ಚತ್ತುಕೊಂಡು ಕುಡಿಯುವ ನೀರಿನ ಬವಣೆಯನ್ನು ನೀಗಿಸಬೇಕಾಗಿದೆ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

gadag water issue

ಬಿಸಿಲಿನ ಬೇಗೆಯ ನಡುವೆಯೇ ಗದಗ ಜನರಿಗೆ ನೀರಿನ ಸಮಸ್ಯೆ; ಒಂದು ತಿಂಗಳಿಂದ ಹನಿ ನೀರಿಗಾಗಿ ಗಣೇಶ್ ನಗರ ಜನರ ಪರದಾಟ

ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಸುಲಭ ಕ್ಯಾಚ್ ಕೈಚೆಲ್ಲಿದರೂ ಔಟಾದ ಆರ್​ಸಿಬಿ ಬ್ಯಾಟರ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಡಿಕೆ ಶಿವಕುಮಾರ್​ ಕೂಡ ಏಕನಾಥ ಶಿಂಧೆ ರೀತಿ ಆಗಬಹುದು: ಆರ್​ ಅಶೋಕ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಸದ್ಗುರು ವಾಸುದೇವ್ ಖುದ್ದಾಗಿ ಮನೆಗೆ ಬಂದು ಆಹ್ವಾನಿಸಿದ್ದರು: ಶಿವಕುಮಾರ್
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಮಹಿಳಾ ಪಿಡಿಒಗೆ ಚಪ್ಪಲಿಯಿಂದ ಹೊಡೆದ ಗ್ರಾಮ ಪಂಚಾಯಿತಿ ಸದಸ್ಯೆ
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ಲೇಡಿ ಕಾನ್​ಸ್ಟೇಬಲ್​ರನ್ನು ಸಾರ್ವಜನಿಕವಾಗಿ ನಿಂದಿಸಿದ ಹೆಡ್ ಕಾನ್​ಸ್ಟೇಬಲ್
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ವಿಧಾನಸೌಧ ಆವರಣದಲ್ಲಿ ಮೊದಲ ಬಾರಿಗೆ ಪುಸ್ತಕ ಮೇಳ ಆಯೋಜನೆ
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ಲಕ್ಷ್ಮಿ ಹೆಬ್ಬಾಳ್ಕರ್​ಗೆ ಭವತಿ ಭಿಕ್ಷಾಂ ದೇಹಿ ಎಂದ ವಿದ್ಯಾರ್ಥಿಗಳು !
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ರಾಜಸ್ಥಾನದ ಬಿಜೆಪಿ ಅಧ್ಯಕ್ಷರೆದುರೇ ಇಬ್ಬರು ನಾಯಕರ ಹೊಡೆದಾಟ; ವಿಡಿಯೋ ವೈರಲ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್
ಚಾಮುಂಡೇಶ್ವರಿ ದೇವಾಲಯಕ್ಕೆ ಬಂದ ದರ್ಶನ್ ಪುತ್ರ ವಿನೀಶ್
ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲಿ ವಿಶ್ವಾಸ ಹೊಂದಿದೆ: ಎಂಬಿ ಪಾಟೀಲ್
ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲಿ ವಿಶ್ವಾಸ ಹೊಂದಿದೆ: ಎಂಬಿ ಪಾಟೀಲ್