ಅಪಘಾತಕ್ಕೀಡಾದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ, ಖರ್ಚು ವೆಚ್ಚ ಭರಿಸಿ ಮಾನವೀಯತೆ ಮೆರೆದ ಸಂಸದ ಉಮೇಶ್ ಜಾಧವ್‌

| Updated By: ಆಯೇಷಾ ಬಾನು

Updated on: Jun 12, 2022 | 8:31 PM

ಅಪಘಾತವನ್ನು ಗಮನಿಸಿ ತಮ್ಮ ಕಾರನ್ನು ನಿಲ್ಲಿಸಿ ತಕ್ಷಣವೇ ಗಾಯಾಳು ಮಹಿಳೆಯನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಇಷ್ಟೇ ಅಲ್ಲದೆ ಸ್ವತಃ ಅವರೇ ವೈದ್ಯರ ಪಕ್ಕ ನಿಂತು ಚಿಕಿತ್ಸೆ ಒದಗಿಸಿ, ಆಸ್ಪತ್ರೆಯ ಖರ್ಚು ವೆಚ್ಚವನ್ನು ಭರಿಸಿದ್ದಾರೆ.

ಅಪಘಾತಕ್ಕೀಡಾದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ, ಖರ್ಚು ವೆಚ್ಚ ಭರಿಸಿ ಮಾನವೀಯತೆ ಮೆರೆದ ಸಂಸದ ಉಮೇಶ್ ಜಾಧವ್‌
ಸಂಸದ ಉಮೇಶ್ ಜಾಧವ್‌
Follow us on

ಕಲಬುರಗಿ: ಜಿಲ್ಲೆಯ ಶಹಬಾದ್ ಬಳಿ ಅಪಘಾತದಲ್ಲಿ ಗಾಯಗೊಂಡಿದ್ದ ಮಹಿಳೆಯನ್ನು ತಮ್ಮ ಕಾರಿನಲ್ಲೇ ಕರೆದೊಯ್ದು ಸಂಸದ ಡಾ.ಉಮೇಶ್ ಜಾಧವ್‌(Umesh Jadhav) ಆಸ್ಪತ್ರೆಗೆ ದಾಖಲಿಸಿದ್ದಾರೆ. ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ಜಿಲ್ಲೆಯ ಶಹಬಾದ್ ಕ್ರಾಸ್ ಬಳಿ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಓರ್ವ ಮಹಿಳೆಯ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ಅತೀವ ರಕ್ತಸ್ರಾವವಾಗಿ ರಸ್ತೆಯ ಮೇಲೆ ಒದ್ದಾಡುತ್ತಿದ್ದರು. ಇದೇ ವೇಳೆ ಕಲಬುರಗಿ ಸಂಸದ ಉಮೇಶ್ ಜಾಧವ್ ಚಿತ್ತಾಪುರ ತಾಲೂಕಿನ ನಾಲವಾರದಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು. ಈ ವೇಳೆ ಮಾರ್ಗ ಮಧ್ಯದಲ್ಲೇ ನಡೆದ ಅಪಘಾತ ನೋಡಿ ಸಹಾಯಕ್ಕೆ ಧಾವಿಸಿದ್ದಾರೆ.

ಅಪಘಾತವನ್ನು ಗಮನಿಸಿ ತಮ್ಮ ಕಾರನ್ನು ನಿಲ್ಲಿಸಿ ತಕ್ಷಣವೇ ಗಾಯಾಳು ಮಹಿಳೆಯನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಇಷ್ಟೇ ಅಲ್ಲದೆ ಸ್ವತಃ ಅವರೇ ವೈದ್ಯರ ಪಕ್ಕ ನಿಂತು ಚಿಕಿತ್ಸೆ ಒದಗಿಸಿ, ಆಸ್ಪತ್ರೆಯ ಖರ್ಚು ವೆಚ್ಚವನ್ನು ಭರಿಸಿದ್ದಾರೆ. ಸಂಸದರ ಕರ್ತವ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Published On - 8:31 pm, Sun, 12 June 22