ಕಲಬುರಗಿ, ಮಾರ್ಚ್.03: ರಾಘವ ಚೈತನ್ಯ ರಥಯಾತ್ರೆಗೆ (Raghava Chaitanya Rath Yatra) ಷರತ್ತು ಬದ್ಧ ಅನುಮತಿ ನೀಡಿ ಕಲಬುರಗಿ ಹೈಕೋರ್ಟ್ ಪೀಠ ಅನುಮತಿ ನೀಡಿದೆ. ಶಿವರಾತ್ರಿಯಂದು (Shivratri) ಕಲಬುರಗಿ ಜಿಲ್ಲೆ ಆಳಂದ ಪಟ್ಟಣದಲ್ಲಿ ನಡೆಯಲಿರುವ ರಥಯಾತ್ರೆಗೆ ಅನುಮತಿ ಕೋರಿ ಹಿಂದೂ ಮುಖಂಡರು ಅರ್ಜಿ ಸಲ್ಲಿಸಿದ್ದರು. ಸದ್ಯ ಲಾಡ್ಲೆ ಮಶಾಕ್ ದರ್ಗಾ ವಿವಾದ ಹಿನ್ನೆಲೆ ಷರತ್ತು ಬದ್ಧ ಅನುಮತಿ ನೀಡಲಾಗಿದೆ.
ರಥಯಾತ್ರೆ ವೇಳೆ ಡಿಜೆ, ಟ್ರಾಫಿಕ್ ನಿಯಮ ಉಲ್ಲಂಘಿಸುವಂತಿಲ್ಲ. ಅನ್ಯ ಸಮುದಾಯದ ವಿರುದ್ಧ ಯಾರೂ ಘೋಷಣೆ ಕೂಗುವಂತಿಲ್ಲ. ವಿವಾದಿತ ಸ್ಥಳದ ಕಡೆ ರಾಘವ ಚೈತನ್ಯ ರಥಯಾತ್ರೆ ಹೋಗುವಂತಿಲ್ಲ. ಸೂರ್ಯಾಸ್ತದ ನಂತರ ರಥಯಾತ್ರೆ ಮಾಡದಂತೆ ಕೋರ್ಟ್ ಷರತ್ತು ಬದ್ಧ ಅನುಮತಿ ನೀಡಿದೆ. ಕಳೆದ ಬಾರಿ ಲಾಡ್ಲೆ ಮಶಾಕ್ ದರ್ಗಾದಲ್ಲಿ ಶಿವರಾತ್ರಿ ದಿನ ಗಲಾಟೆ ನಡೆದಿತ್ತು.ಶಿವಲಿಂಗ ಪೂಜೆಗೆ ತೆರಳಿದ ಸಮಯದಲ್ಲಿ ದೊಡ್ಡ ಗಲಾಟೆಯಾಗಿತ್ತು. ಹೀಗಾಗಿ ಈ ಬಾರಿ ಈ ಅನಾಹುತ ತಡೆಯಲು ಷರತ್ತು ಬದ್ಧ ಅನುಮತಿ ನೀಡಲಾಗಿದೆ.
ಇದನ್ನೂ ಓದಿ: ಕಲಬುರಗಿ ಲಾಡ್ಲೆ ಮಶಾಕ್ ದರ್ಗಾ ರಾಘವ ಚೈತನ್ಯ ಶಿವಲಿಂಗ ದೇವಸ್ಥಾನಕ್ಕೆ ಶಿವರಾತ್ರಿಯಂದು ಅಡಿಗಲ್ಲು: ಪ್ರಮೋದ್ ಮುತಾಲಿಕ್</a
ಕಲಬುರಗಿ ಜಿಲ್ಲೆಯ ಆಳಂದ್ ಪಟ್ಟಣದ ಪ್ರಸಿದ್ಧ ಸೂಫಿ ಸಂತ್ ಹಜರತ್ ಲಾಡ್ಲೆ ಮಶಾಕ್ ದರ್ಗಾದ ಆವರಣದಲ್ಲಿ ರಾಘವ ಚೈತನ್ಯ ದೇವಸ್ಥಾನ ಇದೆ. ಇಲ್ಲಿನ ಶಿವಲಿಂಗದ ಪೂಜೆಗಾಗಿ ಹಮ್ಮಿಕೊಂಡಿರುವ ರಥಯಾತ್ರೆಗೆ ಇಲ್ಲಿನ ಉಚ್ಛ ನ್ಯಾಯಾಲಯವು ಷರತ್ತು ಬದ್ಧ ಅನುಮತಿ ನೀಡಿದೆ. ಸುಕ್ಷೇತ್ರ ನರೋಣಾ ಗ್ರಾಮದಿಂದ ಆಳಂದ್ ಪಟ್ಟಣದ ಮಶಾಕ್ ದರ್ಗಾದವರೆಗೆ ಹಮ್ಮಿಕೊಂಡಿರುವ ರಥಯಾತ್ರೆಗೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು. ಅದನ್ನು ಪ್ರಶ್ನಿಸಿ ಆಳಂದ್ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಅವರ ಪುತ್ರ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹರ್ಷನಂದ್ ಗುತ್ತೇದಾರ್, ಹಿಂದೂ ಜಾಗರಣ ವೇದಿಕೆಯ ನಾಗೇಂದ್ರ ಕಬಾಡೆ ಹಾಗೂ ಎಸ್.ಎ. ಪಾಟೀಲ್ ಅವರನ್ನು ಒಳಗೊಂಡು ಮೂವರು ಅರ್ಜಿದಾರರು ಸ್ಥಳೀಯ ಉಚ್ಛ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಲಯ ಪೀಠವು, ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದ ರೀತಿಯಲ್ಲಿ ಶಾಂತಿಯುತವಾಗಿ ರಥಯಾತ್ರೆ ನಡೆಸಲು ಪ್ರಮುಖ ಐದು ಶರತ್ತುಗಳನ್ನು ವಿಧಿಸಿ ಅವಕಾಶ ನೀಡಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:16 am, Sun, 3 March 24