ನಿಯಂತ್ರಣ ತಪ್ಪಿ ಮೈ ಮೇಲೆ ಹರಿದ ರಥ; ಮಹಿಳೆಯ ಎರಡೂ ಕಾಲು ಕಟ್!

ಕಲಬುರಗಿ ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮದಲ್ಲಿ ನಡೆದ ಶರಣಬಸವೇಶ್ವರ ಜಾತ್ರೆ ರಥೋತ್ಸವ ವೇಳೆ ದುರಂತ ಸಂಭವಿಸಿದೆ. ನಾಗಮ್ಮ ಎಂಬ ಮಹಿಳೆ ರಥದ ಚಕ್ರಕ್ಕೆ ಸಿಲುಕಿ ಎರಡೂ ಕಾಲುಗಳನ್ನು ಕಳೆದುಕೊಂಡು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾರ್ಚ್ 8ರಂದು ನಡೆದ ಈ ಘಟನೆಯಲ್ಲಿ ಜನಸಮೂಹ ಹೆಚ್ಚಾಗಿದ್ದರಿಂದ ರಥ ನಿಯಂತ್ರಣ ತಪ್ಪಿ ಚಲಿಸಿದೆ. ಗಾಯಾಳು ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಿಯಂತ್ರಣ ತಪ್ಪಿ ಮೈ ಮೇಲೆ ಹರಿದ ರಥ; ಮಹಿಳೆಯ ಎರಡೂ ಕಾಲು ಕಟ್!
ನಿಯಂತ್ರಣ ತಪ್ಪಿ ಮೈ ಮೇಲೆ ಹರಿದ ರಥ; ಮಹಿಳೆಯ ಎರಡೂ ಕಾಲು ಕಟ್!
Edited By:

Updated on: Mar 09, 2026 | 9:49 AM

ಕಲಬುರಗಿ, ಮಾರ್ಚ್​ 09: ಜಿಲ್ಲೆಯ ಯಡ್ರಾಮಿ ತಾಲೂಕಿನ ಅರಳಗುಂಡಗಿ (Kalaburagi) ಗ್ರಾಮದಲ್ಲಿ ನಡೆದ ಶರಣಬಸವೇಶ್ವರ ಜಾತ್ರೆಯ ರಥೋತ್ಸವ ವೇಳೆ ದುರ್ಘಟನೆ ಸಂಭವಿಸಿ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಗ್ರಾಮದ ನಿವಾಸಿಯಾದ ನಾಗಮ್ಮ ಎಂಬ ಮಹಿಳೆ ರಥದ ಚಕ್ರಕ್ಕೆ ಸಿಲುಕಿಕೊಂಡ ಪರಿಣಾಮ ಅವರ ಎರಡೂ ಕಾಲುಗಳು ಕಡಿದು ಹೋಗಿವೆ ಎಂದು ತಿಳಿದುಬಂದಿದೆ.

ಮಹಿಳೆಯ ಸ್ಥಿತಿ ಗಂಭೀರ

ಅರಳಗುಂಡಗಿ ಗ್ರಾಮವು ಶರಣಬಸವೇಶ್ವರರ ಜನ್ಮಸ್ಥಳವಾಗಿರುವ ಹಿನ್ನೆಲೆಯಲ್ಲಿ ಪ್ರತಿವರ್ಷವೂ ಇಲ್ಲಿ ಜಾತ್ರೆಯನ್ನು ಭಕ್ತಿಭಾವದಿಂದ ಆಚರಿಸಲಾಗುತ್ತದೆ. ನಿನ್ನೆ (ಮಾರ್ಚ್​ 08) ಸಂಜೆ ಸುಮಾರು 6 ಗಂಟೆಗೆ ಜಾತ್ರೆಯ ಅಂಗವಾಗಿ ಶರಣಬಸವೇಶ್ವರ ರಥೋತ್ಸವ ಆರಂಭವಾಗಿತ್ತು. ಈ ವೇಳೆ ಗ್ರಾಮಸ್ಥರು ಉತ್ಸಾಹದಿಂದ ರಥವನ್ನು ಎಳೆಯಲು ಮುಂದಾಗಿದ್ದರು. ಜನಸಮೂಹ ಹೆಚ್ಚಾಗಿದ್ದ ಕಾರಣ ನಿಯಂತ್ರಣ ತಪ್ಪಿದ ರಥ ಜನರು ನಿಂತಿದ್ದ ದಿಕ್ಕಿಗೆ ಚಲಿಸಿದೆ.

ಇದನ್ನೂ ಓದಿ ಬೆಂಗಳೂರಿನ ರಿಯಲ್ ಎಸ್ಟೇಟ್ ಏಜೆಂಟ್ ಕಿಡ್ನ್ಯಾಪ್! ಪೊಲೀಸರ 7 ವಿಶೇಷ ತಂಡಗಳಿಂದ ಆರೋಪಿಗಳಿಗೆ ಬಲೆ

ಈ ಸಂದರ್ಭದಲ್ಲಿ ರಥದ ಸಮೀಪದಲ್ಲಿದ್ದ ನಾಗಮ್ಮ ಎಂಬ ಮಹಿಳೆ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ರಥದ ಚಕ್ರಕ್ಕೆ ಸಿಲುಕಿಕೊಂಡಿದ್ದಾರೆ. ಪರಿಣಾಮವಾಗಿ ರಥದ ಚಕ್ರವು ಅವರ ಕಾಲಿನ ಮೇಲೆ ಹರಿದಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳದಲ್ಲಿದ್ದ ಜನರು ತಕ್ಷಣವೇ ಅವರನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ನಾಗಮ್ಮಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರು ಗಮನ ಹರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Dattatraya Patil

ಮೂಲತಃ ಕಲಬುರಗಿ ಜಿಲ್ಲೆಯವರಾದ ದತ್ತಾತ್ರೇಯ ಪಾಟೀಲ್ ಸಧ್ಯ ಟಿರ್ವಿ ಕನ್ನಡ ವಾಹಿನಿಯ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ 9 ವರ್ಷಗಳಿಂದ ಟಿರ್ವಿ ಸಂಸ್ಥೆಯಲ್ಲಿ ಕೆಲಸ‌ ಮಾಡುತ್ತಿದ್ದು ಜ,2015 ರಿಂದ 22 ರವೆಗೆ ಹುಬ್ಬಳ್ಳಿಯ ವರದಿಗಾರಾಗಿ, ಕಳೆದೊಂದು ವರ್ಷ ಕೊಪ್ಪಳ ಸಧ್ಯ ಮೂರು ತಿಂಗಳಿಮದ ಕಲಬುರಗಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದು, ಕೊರೊನಾ ಸಮಯದಲ್ಲಿ ವೈದ್ಯರ ಕಳ್ಳಾಟದ ಮಾಡಿದ ರಹಸ್ಯ ಕಾರ್ಯಚರಣೆ.ಆಪರೇಷನ್ ಕಮಲದ ಕುರಿತು ಸ್ಪೋಟಕ ಬಿಎಸ್ ವೈ ವಿಡಿಯೋ ದ ಎಕ್ಸಕ್ಲೂಸಿವ್ ವರದಿಯ ಜೊತೆಗೆ ರಾಜಕೀಯ ವರದಿಗಾರಿಕೆಯಲ್ಲಿಯೂ ಆಸಕ್ತಿ ಹೊಂದಿದ್ದು, ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು,ಪ್ರೇಕ್ಷಣೀಯ ಹಾಗೂ ಐತಿಹಾಸಿಕ ಸ್ಥಳಗಳ ಪ್ರವಾಸ,ಮತ್ತು ಟ್ರೆಕ್ಕಿಂಗ್ ಹವ್ಯಾಸ ರೂಢಿಸಿಕೊಂಡಿದ್ದಾರೆ.

Read More
Follow Us