ರಾಜ್ಯ ಸರ್ಕಾರವೇನೋ ನಾನಾ ಸಾಧಕರು, ಶರಣ ಹೆಸರಿನ ಮೇಲೆ ಅಧ್ಯಯನ ಪೀಠಗಳೇನೋ ಮಾಡಿದೆ. ಶರಣ ವಚನ, ವೈಚಾರಿಕತೆಗಳನ್ನ ಅಧ್ಯಯನ ಮಾಡಲಿ ಎನ್ನೋ ಆಶಯವಿತ್ತು. ಆದ್ರೆ ಆಶಯಕ್ಕೆ ಎಳ್ಳು ನೀರು ಬಿಡಲಾಗಿದೆ. ಕಲಬುರಗಿ ಗುಲ್ಬರ್ಗಾ ವಿವಿಯಲ್ಲಿರೋ ಅಧ್ಯಯನ ಪೀಠಗಳು ಹಾಳು ಕೊಂಪೆಗಳಾಗ್ತಿವೆ.
ಹೌದು. ವಿಧಾನ ಪರಿಷತ್ ಸದಸ್ಯರು ಏಕಾಏಕಿ ಕಲಬುರಗಿಯ ಅಂಬಿಗರ ಚೌಡಯ್ಯ ಅಧ್ಯಯನ ಪೀಠಕ್ಕೆ ಭೇಟಿ ನೀಡಿದರು. ಆ ವೇಳೆ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಅಂದಹಾಗೇ ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣರದಲ್ಲಿ ತಲೆ ಎತ್ತಿ ನಿಂತಿರೋ ಈ ಅಧ್ಯಯನ ಪೀಠವೂ ಹಾಳು ಕೊಂಪೆಯಾಗಿ ಮಾರ್ಪಡುತ್ತಿದೆ. ಸಂಜೆಯಾದ್ರೆ ಸಾಕು ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ. ಅಲ್ಲದೇ ಸಂಜೆಯಾದ್ರೆ ಬೀದಿ ನಾಯಿಗಳ ತಾಣವಾಗಿ ಬಿಡುತ್ತೆ. ಅಧ್ಯಯನ ಪೀಠವಾಗಿ ಸಾಕಷ್ಟು ವರ್ಷ ಕಳೆದರೂ, ಒಬ್ಬನೇ ಒಬ್ಬ ವಿದ್ಯಾರ್ಥಿ ಇಲ್ಲಿ ಬಂದು ಅಂಬಿಗರ ಚೌಡಯ್ಯನವರ ಬಗ್ಗೆ ಅವರ ಬದುಕಿನ ತತ್ವಾದರ್ಶಗಳ ಬಗ್ಗೆ ಸಣ್ಣ ಅಧ್ಯಯನ ಕೂಡಾ ಮಾಡಿಲ್ಲ!
ಅಲ್ಲದೇ ಕೂತೂಹಲಕ್ಕೂ ಯಾವೊಬ್ಬ ವಿದ್ಯಾರ್ಥಿಯೂ ಈ ಕಡೆ ತಿರುಗಿಯೂ ನೋಡಿಲ್ಲ. ಇದಕ್ಕೆ ಕಾರಣ ಅಧ್ಯಯನ ಪೀಠದಲ್ಲಿರೋ ಅಧಿಕಾರಿಗಳು. ಯಾಕೆಂದ್ರೆ ಅಧಿಕಾರಗಳು ಪೀಠಕ್ಕೆ ಬರೋ ಅನುದಾನವನ್ನ ಖರ್ಚು ಮಾಡೋಕೆ ಮಾತ್ರ ಸೀಮಿತವಾಗಿದ್ದಾರೆ. ಇಲ್ಲಿ ಯಾವುದೇ ಅಭಿವೃದ್ಧಿ ಕೆಲಸವಾಗ್ತಿಲ್ಲ, ಬದಲಾಗಿ ಅನುದಾನದಲ್ಲಿ ಗೋಲ್ಮಾಲ್ ಮಾಡ್ತಿದ್ದಾರೆ ಎಂದು ಎಂಎಲ್ ಸಿ ತಿಪ್ಪಣ್ಣಪ್ಪ ಕಮಕನೂರ ಅವರು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
Also Read: ರಾತ್ರಿ 12 ಗಂಟೆವರೆಗೂ ತೆರೆದಿರುತ್ತದೆ ಈ ಗ್ರಂಥಾಲಯ, ರಾಜ್ಯದಲ್ಲೇ ಮೊದಲ ಪ್ರಯತ್ನ – ಯಾವ ಜಿಲ್ಲೆಯಲ್ಲಿ?
ಇನ್ನು ಕೇವಲ ಅಂಬಿಗರ ಚೌಡಯ್ಯ ಪೀಠವಷ್ಟೆ ಅಲ್ಲದೇ, ವಿಶ್ವವಿದ್ಯಾಲಯ ಆವರಣದಲ್ಲಿರುವ ನಾಲ್ಕೈದು ಪೀಠಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವೇನೂ ಇಲ್ಲ. ಸರ್ಕಾರದಿಂದ ಬರೋ ಅನುದಾನ ಕೇವಲ ಆಯಾ ಶರಣರ ಜಯಂತಿಗಳಿಗೆ ಸೀಮಿತವಾಗಿದೆ. ಅಲ್ಲದೇ ಆಯಾ ಸಮುದಾಯದ ನಾಯಕರನ್ನ ಕೂಡಾ ಇಲ್ಲಿನ ಅಧಿಕಾರಿಗಳು ಹಾಗೂ ವಿವಿ ಅಧಿಕಾಗಳು ಆಹ್ವಾನವೇ ನೀಡುವದಿಲ್ಲವಂತೆ.
ಹೀಗಾಗಿಯೇ ಇದ್ರಿಂದ ಕೋಪಗೊಂಡ ಪರಿಷತ್ ಸದಸ್ಯರು ನೂರಾರು ಕೋಟಿ ಖರ್ಚು ಮಾಡಿ ಅನುದಾನ ಹಾಕಿಕೊಂಡು ಬಂದಿರುತ್ತೇವೆ. ಆದ್ರೆ ಈ ಅಧಿಕಾರಿಗಳು ಅನುದಾನವನ್ನ ಜೇಬಿಗಳಿಸೋದು ಬಿಟ್ರೆ ನಯಾ ಪೈಸೆ ಕೆಲಸ ಮಾಡಿಲ್ಲ ಎಂದು ಗರಂ ಆದ್ರು. ಅಲ್ಲದೇ ಇದೇ ಮೊದಲ ಬಾರಿ ಇಲ್ಲಿಗೆ ಭೇಟಿ ನೀಡಿದ್ದೇನೆ. ಹೀಗಾಗಿ ಯಾರ ಮೇಲೂ ಕ್ರಮ ಕೈಗೊಳ್ಳಲ್ಲ. ಆದರೆ ಇದೇ ಪರಿಸ್ಥಿತಿ ಮುಂದುವರೆದ್ರೆ ಖಂಡಿತ ಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ರು.
ಇದನ್ನೂ ಓದಿ: ಪಕ್ಕದ ಮನೆ ದಂಪತಿಯ ಸರಸ ಸಲ್ಲಾಪದಿಂದ ಕಿರಿಕಿರಿ, ಪೊಲೀಸ್ ಠಾಣೆಗೆ ದೂರು ನೀಡಿದ ಮಹಿಳೆ
ಒಟ್ನಲ್ಲಿ ಸರ್ಕಾರ ಶರಣರ ವಚನಗಳು, ಸಾಧಕರ ಸಾಧೆನೆಗಳನ್ನ ಪರಿಚಯಿಸೋಕೆ ಈ ಅಧ್ಯಯನ ಪೀಠಗಳನ್ನ ಮಾಡಿತ್ತು. ಆದ್ರೆ ಸದ್ಯ ಸರ್ಕಾರದ ಆಶಯಗಳೇ ತಿರುಗುಮರಗು ಆಗ್ತಿರೋದು ನಿಜಕ್ಕೂ ದುರಂತವೇ ಸರಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:51 pm, Wed, 20 March 24