Mallikarjun Kharge: ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೋವಿಡ್ ಪಾಸಿಟಿವ್

| Updated By: ಆಯೇಷಾ ಬಾನು

Updated on: Jan 13, 2022 | 2:10 PM

ದೆಹಲಿ ಕಚೇರಿಯ ಐವರು ಸಿಬ್ಬಂದಿ ಸೇರಿದಂತೆ ಕಾರ್ಯದರ್ಶಿಗಳಿಗೆ ಕೂಡಾ ಕೊರೊನಾ ಪಾಸಿಟಿವ್ ಆಗಿದ್ದು ಅವರೆಲ್ಲ ಹೋಮ್ ಐಸೋಲೇಷನ್‌ನಲ್ಲಿದ್ದು ಸುಧಾರಿಸಿಕೊಳ್ಳುತ್ತಿದ್ದಾರೆ.

Mallikarjun Kharge: ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೋವಿಡ್ ಪಾಸಿಟಿವ್
ಮಲ್ಲಿಕಾರ್ಜುನ ಖರ್ಗೆ
Follow us on

ಕಲಬುರಗಿ: ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊರೊನಾ ಸೋಂಕು ತಗುಲಿದೆ. ನಿನ್ನೆ (ಜ.12) ರಂದು ನಡೆಸಿದ ಆರ್ಟಿಪಿಸಿಆರ್ ಟೆಸ್ಟ್ನಲ್ಲಿ ಕೊರೊನಾ ಪಾಸಿಟಿವ್ ಆಗಿರುವುದು ಪತ್ತೆಯಾಗಿದೆ. ಪ್ರಸ್ತುತ ಮಲ್ಲಿಕಾರ್ಜುನ ಖರ್ಗೆ ಅವರು ಹೋಮ್ ಐಸೋಲೇಷನ್ನಲ್ಲಿ ಇದ್ದಾರೆ. ಅವರು ಈಗಾಗಲೇ ಎರಡು ಡೋಸ್ ಲಸಿಕೆ ಪಡೆದಿದ್ದು, ಎರಡನೆಯ ಡೋಸ್ ಪಡೆದ ನಂತರ 9 ತಿಂಗಳು ಅವಧಿ ಪೂರ್ಣಗೊಳಿಸಬೇಕಾಗಿರುವುದರಿಂದ ಅವರು ಇನ್ನೂ ಬೂಸ್ಟರ್ ಡೋಸ್ ಪಡೆಯಲು ಅರ್ಹರಾಗಿಲ್ಲ.

ದೆಹಲಿ ಕಚೇರಿಯ ಐವರು ಸಿಬ್ಬಂದಿ ಸೇರಿದಂತೆ ಕಾರ್ಯದರ್ಶಿಗಳಿಗೆ ಕೂಡಾ ಕೊರೊನಾ ಪಾಸಿಟಿವ್ ಆಗಿದ್ದು ಅವರೆಲ್ಲ ಹೋಮ್ ಐಸೋಲೇಷನ್‌ನಲ್ಲಿದ್ದು ಸುಧಾರಿಸಿಕೊಳ್ಳುತ್ತಿದ್ದಾರೆ. ಹಿರಿಯ ನಾಗರಿಕರು ಸೇರಿದಂತೆ ಅರ್ಹರಿರುವ ಎಲ್ಲರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕೆಂದು ಈ ಸಂದರ್ಭದಲ್ಲಿ ಅವರು ಮನವಿ ಮಾಡಿರುವುದಾಗಿ ಕಾರ್ಯದರ್ಶಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಕಳೆದೆರಡು ದಿನಗಳಿಂದ ಖರ್ಗೆ ಅವರೊಂದಿಗೆ ಸಂಪರ್ಕದಲ್ಲಿದ್ದ ಎಲ್ಲರೂ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಗಾಗುವಂತೆ ಮನವಿ ಮಾಡಲಾಗಿದೆ.

ಇದನ್ನೂ ಓದಿ: ‘ಡಾ. ಅಂಬೇಡ್ಕರ್​ ರಾಷ್ಟ್ರ ಪ್ರಶಸ್ತಿ’ ಪಡೆದ ‘ಬಜರಂಗಿ ಭಾಯಿಜಾನ್​’ ನಟಿ; ಈಗ ಹೇಗಿದ್ದಾಳೆ ಮುನ್ನಿ?

Simple One Electric Scooter: ಸಿಂಪಲ್​ ಒನ್ ಎಲೆಕ್ಟ್ರಿಕ್ ಸ್ಕೂಟರ್ ದರ ಮತ್ತಿತರ ವಿವರದ​ ಬಗ್ಗೆ ಇಲ್ಲಿದೆ ಮಾಹಿತಿ