Simple One Electric Scooter: ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ದರ ಮತ್ತಿತರ ವಿವರದ ಬಗ್ಗೆ ಇಲ್ಲಿದೆ ಮಾಹಿತಿ
ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ, ವಿಶೇಷ ಮತ್ತಿತರ ಮಾಹಿತಿಗಳು ಈ ಲೇಖನದಲ್ಲಿ ಇವೆ. ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಬೇಕು ಅಂತಿರುವವರಿಗೆ ಉತ್ತಮ ಆಯ್ಕೆ ಆಗಬಲ್ಲದು.
ಎಲೆಕ್ಟ್ರಿಕ್ ವಾಹನ ಅಭಿಮಾನಿಗಳಿಗೆ ಇಲ್ಲಿ ಒಳ್ಳೆ ಸುದ್ದಿ ಇದೆ. ಸಿಂಪಲ್ ಎನರ್ಜಿ ಇದೀಗ ಭಾರತದಲ್ಲಿ ಸಿಂಪಲ್ ಒನ್ ಇ ಸ್ಕೂಟರ್‌ನ ವಿತರಣೆಯನ್ನು ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ಘೋಷಣೆ ಮಾಡಿದೆ. ಹೌದು, ಸ್ವದೇಶಿ ನಿರ್ಮಿತ ಇವಿ ತಯಾರಕ 2022ರ ಜೂನ್ನಿಂದ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ನ ಗ್ರಾಹಕ ವಿತರಣೆ ಪ್ರಾರಂಭಿಸುವುದಾಗಿ ಮಾಹಿತಿ ಹಂಚಿಕೊಂಡಿದೆ. ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ರೂ. 1.1 ಲಕ್ಷ (ಎಕ್ಸ್-ಶೋರೂಮ್) ಇದ್ದು, ಕಳೆದ ವರ್ಷದ ಆಗಸ್ಟ್‌ನಿಂದ ರೂ. 1947ರ ಟೋಕನ್ ಮೊತ್ತಕ್ಕೆ ಬುಕಿಂಗ್‌ಗೆ ಲಭ್ಯವಿದೆ. ಸಿಂಪಲ್ ಎನರ್ಜಿ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ 30,000ಕ್ಕೂ ಹೆಚ್ಚು ಆರ್ಡರ್‌ಗಳನ್ನು ಸ್ವೀಕರಿಸಿದೆ.
ಸಿಂಪಲ್ ಎನರ್ಜಿಯ ಸಂಸ್ಥಾಪಕ ಮತ್ತು ಸಿಇಒ ಸುಹಾಸ್ ರಾಜ್‌ಕುಮಾರ್ ಮಾತನಾಡಿ, “ಎಲೆಕ್ಟ್ರಿಕ್ ಮೊಬಿಲಿಟಿಗೆ ಭವಿಷ್ಯ ಇದೆ ಎಂದು ನಾವು ಅರ್ಥ ಮಾಡಿಕೊಂಡಿದ್ದೇವೆ ಮತ್ತು ದ್ವಿಚಕ್ರ ವಾಹನಗಳು ಜನಸಾಮಾನ್ಯರ ವಾಹನವಾಗಿದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗದಲ್ಲಿ ಕ್ರಾಂತಿ ಉಂಟು ಮಾಡುವುದು ನಮ್ಮ ದೃಷ್ಟಿಕೋನ. ಮತ್ತು ಪ್ರೀಮಿಯಂ ಎಲೆಕ್ಟ್ರಿಕ್ ಮೊಬಿಲಿಟಿ ಸಲ್ಯೂಷನ್ಸ್ ಜನರಿಗೆ ಕೈಗೆಟುಕುವಂತೆ ಮತ್ತು ತಲುಪುವಂತಿದೆ. ಸಿಂಪಲ್ ಒನ್‌ಗೆ ಮಾರುಕಟ್ಟೆಯ ಪ್ರತಿಕ್ರಿಯೆಯಿಂದ ನಾವು ಉತ್ಸುಕರಾಗಿದ್ದೇವೆ. ಸಿಂಪಲ್ ಒನ್‌ಗಾಗಿ ಬಳಸಲಾದ ತಂತ್ರಜ್ಞಾನವು ಈ ಉದ್ಯಮದಲ್ಲಿ ನಮ್ಮ ಭವಿಷ್ಯವನ್ನು ಹೇಳುತ್ತದೆ ಮತ್ತು ಸಕ್ರಿಯಗೊಳಿಸುತ್ತದೆ. ಭಾರತದ ಅತ್ಯುತ್ತಮವಾದ ಪ್ರತಿಭೆಗಳು ನಮ್ಮ ಉತ್ಪನ್ನಗಳಿಗೆ ಸಂಶೋಧನೆ ಹಾಗೂ ಅಭಿವೃದ್ಧಿ, ವಿನ್ಯಾಸ ಮತ್ತು ಎಂಜಿನಿಯರಿಂಗ್ ಮಾಡುತ್ತಿವೆ. ಮತ್ತು ಸಿಂಪಲ್ ಒನ್ ಗ್ರಾಹಕರ ನಿರೀಕ್ಷೆಗಳನ್ನು ಮೀರಿಸುತ್ತದೆ ಎಂದು ನಾವು ನಂಬುತ್ತೇವೆ,” ಎಂದಿದ್ದಾರೆ.
ಭಾರತದಲ್ಲಿ ತಯಾರಿಸಿದ ಎಲೆಕ್ಟ್ರಿಕ್ ಸ್ಕೂಟರ್ 4.8 kWh ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿರುತ್ತದೆ ಮತ್ತು ಇದು 6 bhp ಎಲೆಕ್ಟ್ರಿಕ್ ಮೋಟಾರ್ ಪವರ್ ಇರುತ್ತದೆ. ಸಿಂಪಲ್ ಒನ್ 2.95 ಸೆಕೆಂಡ್‌ಗಳಲ್ಲಿ ಶೂನ್ಯದಿಂದ 40 ಕಿಮೀ/ಗಂಟೆಗೆ ಹೋಗಲು ಮತ್ತು ಗಂಟೆಗೆ 105 ಕಿಮೀ ವೇಗವನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳುತ್ತದೆ. ಇ- ಸ್ಕೂಟರ್ ನಾಲ್ಕು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ, ಅವುಗಳೆಂದರೆ, ಇಕೋ, ರೈಡ್, ಡ್ಯಾಶ್ ಮತ್ತು ಸೋನಿಕ್. ಇಕೋ ಮೋಡ್‌ನಲ್ಲಿ ಸಿಂಪಲ್ ಒನ್‌ನ ರೈಡಿಂಗ್ ಶ್ರೇಣಿಯು 240 ಕಿಮೀ/ಚಾರ್ಜ್ ಎಂದು ಹೇಳಲಾಗುತ್ತದೆ. ಆದರೆ ಈ ನಿರ್ದಿಷ್ಟ ಮೋಡ್‌ನಲ್ಲಿ ಗರಿಷ್ಠ ವೇಗವು 45 ಕಿಮೀ/ಗಂಟೆಯಿಂದ 50 ಕಿಮೀ/ಗಂಟೆಗೆ ಮಧ್ಯೆ ಇರುತ್ತದೆ. ಇದು ವಿಶ್ವದ ಯಾವುದೇ ಎಲೆಕ್ಟ್ರಿಕ್ ಸ್ಕೂಟರ್ ನೀಡುವ ಅತ್ಯುತ್ತಮ ಶ್ರೇಣಿಯಾಗಿದೆ ಎಂದು ಕಂಪೆನಿ ಹೇಳಿಕೊಂಡಿದೆ.
ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಚಾರ್ಜ್ ಮಾಡಲು ಸಿಂಪಲ್ ಲೂಪ್ ಫಾಸ್ಟ್ ಚಾರ್ಜರ್ ಅನ್ನು ಬಳಸುವುದರಿಂದ ಮಾಲೀಕರು ಸ್ಕೂಟರ್‌ನ ಬ್ಯಾಟರಿಯನ್ನು ನಿಮಿಷಕ್ಕೆ 2.5 ಕಿಮೀ ದರದಲ್ಲಿ ಚಾರ್ಜ್ ಮಾಡಲು ಅನುಮತಿಸುತ್ತದೆ. ಆದ್ದರಿಂದ ಲೂಪ್‌ನೊಂದಿಗೆ 30 ನಿಮಿಷಗಳ ಚಾರ್ಜಿಂಗ್ ಸಮಯದೊಂದಿಗೆ ಇ ಸ್ಕೂಟರ್ ಸುಮಾರು 75 ಕಿಮೀ ಸವಾರಿಗೆ ಅನುವು ನೀಡುತ್ತದೆ.
ಇದನ್ನೂ ಓದಿ: ಹೊಸ ವರ್ಷದ ಉಡುಗೊರೆ: ಈ ಕಂಪನಿಯು ಎಲೆಕ್ಟ್ರಿಕ್ ವಾಹನ ಖರೀದಿಗೆ ಉಚಿತವಾಗಿ 3 ಲಕ್ಷ ರೂ. ನೀಡುತ್ತಿದೆ..!