Kalaburagi News: ಬಸವ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಕಲ್ಲು ತೂರಾಟ, ಗಾಜು ಪುಡಿ-ಪುಡಿ: ಪ್ರಯಾಣಿಕರಿಗೆ ಗಾಯ

| Updated By: ರಮೇಶ್ ಬಿ. ಜವಳಗೇರಾ

Updated on: Jul 20, 2023 | 7:13 AM

ಕಲಬುರಗಿ ಬಳಿ ಬಸವ ಎಕ್ಸ್​ಪ್ರೆಸ್​ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಘಟನೆಯಲ್ಲಿ ಕೆಲ ಪ್ರಯಾಣಿಕೆಗೆ ಗಾಯಗಳಾಗಿರುವ ಘಟನೆ ನಡೆದಿದೆ.

Kalaburagi News: ಬಸವ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಕಲ್ಲು ತೂರಾಟ, ಗಾಜು ಪುಡಿ-ಪುಡಿ: ಪ್ರಯಾಣಿಕರಿಗೆ ಗಾಯ
Follow us on

ಕಲಬುರಗಿ, (ಜುಲೈ 20): ಕರ್ನಾಟಕದಲ್ಲಿ ರೈಲಿನ ಮೇಲೆ ಕಲ್ಲು ತೂರಾಟ ಪ್ರಕರಣಗಳು ಹೆಚ್ಚಾಗುತ್ತಿದೆ. ಇತ್ತೀಚೆಗೆ ವಂದೇ ಭಾರತ್ ಎಕ್ಸ್​ಪ್ರೆಸ್ ಹಾಗೂ ಕಲಬುರಗಿ-ಬೀದರ್​ ಪ್ಯಾಸೆಂಜರ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ ಬೆನ್ನಲ್ಲೇ ಇದೀಗ ಮತ್ತೊಂದು ಘಟನೆ ಮರುಕಳಿಸಿದೆ. ಹೌದು… ಬಸವ ಎಕ್ಸ್‌ಪ್ರೆಸ್‌ ರೈಲಿನ ((basava express train) )ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ(Stone Pelting) ನಡೆಸಿರುವ ಘಟನೆ ನಡೆದಿದೆ. ಕಲಬುರಗಿ(Kalaburagi) ತಾಲೂಕಿನ ಬಬಲಾದ ಗ್ರಾಮದ ಬಳಿ ಜುಲೈ 19ರ ರಾತ್ರಿ ಬಸವ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ದುಷ್ಕರ್ಮಿ ಕಲ್ಲು ಎಸೆದಿದ್ದಾರೆ. ಇದರಿಂದ ರೈಲಿನ AC A1 ಬೋಗಿಯ ಗಾಜು ಪುಡಿ-ಪುಡಿಯಾಗಿದ್ದು, ಘಟನೆಯಲ್ಲಿ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಇದನ್ನೂ ಓದಿ: ಕಲಬುರಗಿ-ಬೀದರ್​ ಪ್ಯಾಸೆಂಜರ್ ರೈಲಿನ ಮೇಲೆ ಕಲ್ಲು ತೂರಾಟ; ಓರ್ವ ಮಹಿಳೆಗೆ ಗಾಯ

ಅಲ್ಲದೇ ರೈಲಿನ ಇಂಜಿನ್ ಮೇಲೆ ಸಹ ಕಲ್ಲು ಎಸೆದಿದ್ದು, ಗಾಜು ಪುಡಿ ಪುಡಿಯಾಗಿದೆ. ಬಾಗಲಕೋಟೆ, ಮೈಸೂರು ಮಧ್ಯೆ ನಿತ್ಯ ಸಂಚರಿಸುವ ಬಸವ ಎಕ್ಸ್‌ಪ್ರೆಸ್‌ ರೈಲು, ಕಲಬುರಗಿ, ವಾಡಿ, ಯಾದಗಿರಿ ಮಾರ್ಗವಾಗಿ ಸಂಚಾರಿಸುತ್ತದೆ. ಈ ಬಗ್ಗೆ ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ