ಸೋರುತ್ತಿರುವ ಸರ್ಕಾರಿ ಶಾಲೆ ಕೊಠಡಿಗಳು; ಪ್ರಾಣ ಭಯದಲ್ಲಿಯೇ ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಥಿಲಾವ್ಯಸ್ಥೆಗೆ ತಲುಪಿದೆ. 180 ಮಕ್ಕಳಿರುವ ಶಾಲೆಯಲ್ಲಿ 16 ಕೊಠಡಿಗಳಿವೆ. ಪಾಠ ಮಾಡಲು ಉತ್ತಮ ಶಿಕ್ಷಕರೂ ಇದ್ದಾರೆ. ಆದರೆ, ಕೊಠಡಿಗಳು ಮಳೆ ಬಂದಾಗ ಸೋರುತ್ತಿದ್ದು, ಪ್ರಾಣ ಭಯದಲ್ಲಿಯೇ ಮಕ್ಕಳು ಪಾಠ ಮಾಡುವ ಸ್ಥಿತಿ ಬಂದಿದೆ.

ಸೋರುತ್ತಿರುವ ಸರ್ಕಾರಿ ಶಾಲೆ ಕೊಠಡಿಗಳು; ಪ್ರಾಣ ಭಯದಲ್ಲಿಯೇ ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು
ಕಲಬುರಗಿಯಲ್ಲಿ ಸೋರುತ್ತಿರುವ ಸರ್ಕಾರಿ ಶಾಲೆಗಳು
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಕಿರಣ್ ಹನುಮಂತ್​ ಮಾದಾರ್

Updated on:Jul 19, 2023 | 11:46 AM

ಕಲಬುರಗಿ, ಜು.19: ರಾಜ್ಯದಲ್ಲಿ ತಡವಾಗಿಯಾದರೂ ಮಳೆ ಆರಂಭವಾಗಿದ್ದು, ಅದರಲ್ಲೂ ಕಲಬುರಗಿ(Kalaburagi) ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ಇಷ್ಟು ದಿನ ಮಳೆಗಾಗಿ ಜನ ಕಾದಿದ್ದರು. ಆದರೆ, ಇದೀಗ ಸರ್ಕಾರಿ ಶಾಲೆ(Government School) ಯ ಮಕ್ಕಳು ಯಾಕಾದರೂ ಮಳೆಗಾಲ ಆರಂಭವಾಯಿತೆಂದು ಚಿಂತಿಸುವಂತಾಗಿದೆ. ಮಳೆಗಾಲ ಆರಂಭವಾದ್ರೆ ಸಾಕು, ಆ ಮಕ್ಕಳಿಗೆ ಶಾಲೆಗೆ ಹೋಗಲು ಭಯ ಆರಂಭವಾಗುತ್ತದೆ. ಹೌದು ಸರ್ಕಾರಿ ಶಾಲೆಯ ಅನೇಕ ಕೊಠಡಿಗಳು ಸೋರುತ್ತಿದ್ದು, ಅನೇಕ ಕಡೆ ಬೀಳುವ ಹಂತದಲ್ಲಿವೆ. ಇನ್ನೂ ಅನೇಕ ಕಡೆ ಮೇಲ್ಛಾವಣಿ ಕುಸಿದು ಬೀಳುವ ಆತಂಕವಿದೆ. ಸರ್ಕಾರ ಹತ್ತಾರು ಭಾಗ್ಯಗಳನ್ನು ನೀಡುತ್ತಿದೆ. ಆದ್ರೆ, ಆಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಮಾತ್ರ ದೌರ್ಬಾಗ್ಯ ಕಾಡುತ್ತಿದ್ದು, ಸೋರುತ್ತಿರುವ ಕೋಣೆಯಲ್ಲಿ ಮಕ್ಕಳ ಭವಿಷ್ಯ ಸೊರಗುತ್ತಿದೆ.

ಸೋರುತಿರುವ ಸರ್ಕಾರಿ ಶಾಲೆಗಳು

ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದ್ದು, ಶಾಲೆಯಲ್ಲಿ 180 ಮಕ್ಕಳಿದ್ದಾರೆ. ಹದಿನಾರು ಕೊಠಡಿಗಳಿವೆ. ಪಾಠ ಮಾಡಲು ಉತ್ತಮ ಶಿಕ್ಷಕರೂ ಇದ್ದಾರೆ. ಮಕ್ಕಳ ಸಂಖ್ಯೆ ಕೂಡ ಹೆಚ್ಚಾಗಿದೆ. ಆದರೆ, ಶಾಲೆಗೆ ಬರಲು ಮಕ್ಕಳಿಗೆ ಭಯ ಕಾಡುತ್ತಿದೆ. ಇರುವ 16 ಕೊಠಡಿಗಳ ಪೈಕಿ ಮೂರು ಕೊಠಡಿಗಳು ಮಾತ್ರ ಚೆನ್ನಾಗಿದ್ದು, ಉಳಿದ ಕೊಠಡಿಗಳು ಶಿಥಿಲಾವ್ಯಸ್ಥೆಯಲ್ಲಿವೆ. ಇನ್ನು ಅನೇಕ ಕೊಠಡಿಗಳು ಸೋರುತ್ತಿವೆ. ಪ್ರತಿವರ್ಷ ಮಳೆಗಾಲ ಬಂದಾಗ ಮಕ್ಕಳು ಮಳೆಯಲ್ಲಿಯೇ ಕೂತು ಪಾಠ ಕೇಳುವಂತಹ ಸ್ಥಿತಿ ನಿರ್ಮಾಣವಾಗಿದೆ. ಕೆಲವು ಸಲ ಬಾರಿ ಮಳೆ ಬಂದಾಗ, ಮಕ್ಕಳ ಪುಸ್ತಕಗಳು ಕೂಡ ಮಳೆ ನೀರಿನಿಂದ ಹಾಳಾಗಿ ಹೋಗಿವೆಯಂತೆ.

ಇದನ್ನೂ ಓದಿ:ಬೆಳಗಾವಿ: ಸರ್ಕಾರಿ ಶಾಲೆ ಆವರಣದಲ್ಲಿ ಯುವಕನ‌ ಹತ್ಯೆ ಕೇಸ್; ಇಬ್ಬರು ಆರೋಪಿಗಳ ಬಂಧನ

ಇನ್ನು ಶಿಕ್ಷಕರು ಶಾಲೆಯಲ್ಲಿನ ಕೊಠಡಿಗಳ ನಿರ್ಮಾಣ ಮತ್ತು ಇರುವ ಕೊಠಡಿಗಳಿಗೆ ದುರಸ್ಥಿಯಾದ್ರು ಮಾಡಿ ಎಂದು ಅನೇಕ ಸಲ ಅಧಿಕಾರಿಗಳಿಗೆ ಮನವಿ ಮಾಡಿದ್ದಾರಂತೆ. ಆದ್ರೆ, ಯಾವುದೇ ಪ್ರಯೋಜನವಿಲ್ಲವಂತೆ. ಹೀಗಾಗಿ ವಿದ್ಯಾರ್ಥಿಗಳು ಮಳೆಗಾಲದಲ್ಲಿ ಪರದಾಡುತ್ತಿದ್ದಾರೆ. ಕಡಗಂಚಿಯಲ್ಲಿ 5 ದಶಕಗಳ ಹಿಂದೆ ನಿರ್ಮಾಣವಾಗಿರುವ ಕೊಠಡಿಗಳಿವೆ. ಹೊಸದಾಗಿ ಮೂರು ಕೊಠಡಿಗಳನ್ನು ಮಾತ್ರ ನಿರ್ಮಾಣ ಮಾಡಿದ್ದು, ಅವುಗಳನ್ನು ಬಿಟ್ಟರೆ ಉಳಿದ ಬಹುತೇಕ ಕೊಠಡಿಗಳು ಸೋರುತ್ತಿವೆ.

ಶಿಥಿಲಾವ್ಯಸ್ಥೆಯಲ್ಲಿರುವ 1200 ಶಾಲಾ ಕೊಠಡಿಗಳು

ಕೊಠಡಿಗಳು ಸೋರುವುದು, ಬೀಳುವ ಆತಂಕ ಇರುವುದು ಕೇವಲ ಎರಡು ಗ್ರಾಮದ ಸ್ಥಿತಿ ಮಾತ್ರವಲ್ಲ. ಕಲಬುರಗಿ ಜಿಲ್ಲೆಯಲ್ಲಿ ಬಹುತೇಕ ಕಡೆ ಇದೇ ಪರಿಸ್ಥಿತಿಯಿದೆ. ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ವರಗೆ ಸರ್ಕಾರಿ ಮತ್ತು ಅನುಧಾನಿತ ಶಾಲೆಯಲ್ಲಿ ಐದುವರೆ ಲಕ್ಷ ಮಕ್ಕಳು ಓದುತ್ತಿದ್ದಾರೆ. ಇನ್ನು ಜಿಲ್ಲೆಯಲ್ಲಿ ಸದ್ಯ 1200 ಕ್ಕೂ ಹೆಚ್ಚು ಕೊಠಡಿಗಳು ಶಿಥಿಲಾವ್ಯಸ್ಥೆಯಲ್ಲಿರುವ ಬಗ್ಗೆ ಸ್ವತಃ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಆದ್ರೆ, ಹೊಸ ಕೊಠಡಿಗಳ ನಿರ್ಮಾಣಕ್ಕೆ ಮತ್ತು ಸೋರುತ್ತಿರುವ ಶಾಲೆಗಳ ದುರಸ್ಥಿಗೆ ಸರ್ಕಾರ ಮನಸು ಮಾಡುತ್ತಿಲ್ಲ. ಇದರಿಂದ ಸರ್ಕಾರಿ ಶಾಲೆಯ ಮಕ್ಕಳು ಆತಂಕದಲ್ಲಿಯೇ ಶಾಲೆಗೆ ಬಂದು ಪಾಠ ಕೇಳುತ್ತಿದ್ದಾರೆ.

ಇದನ್ನೂ ಓದಿ:ಸರ್ಕಾರಿ ಶಾಲೆ ಮುಚ್ಚುವುದನ್ನು ತಪ್ಪಿಸಲು 16 ಲಕ್ಷ ರೂ. ವೆಚ್ಚದಲ್ಲಿ ತರಗತಿ ಕೊಠಡಿಗಳನ್ನು ನಿರ್ಮಿಸಿಕೊಟ್ಟ ಸುಳ್ಯದ ರೈತ

ಸರ್ ಮಳೆಗಾಲದಲ್ಲಿ ಕೊಠಡಿಗಳು ಸೋರುತ್ತವೆ. ಅನೇಕ ಸಲ ನಮ್ಮ ಪುಸ್ತಕಗಳ ಮೇಲೆ ನೀರು ಬಿದ್ದು ಹಾಳಾಗಿವೆ. ಹೀಗಾಗಿ ಹೊಸ ಕೊಠಡಿಗಳ ನಿರ್ಮಾಣ ಮಾಡಿಕೊಡಬೇಕೆಂದು ಕಡಗಂಚಿ ಗ್ರಾಮದ ವಿದ್ಯಾರ್ಥಿ ಸರ್ಕಾರಕ್ಕೆ ಮನವಿ ಮಾಡಿದ್ದಾನೆ. ಇನ್ನು ಜಿಲ್ಲೆಯಲ್ಲಿನ ಕೊಠಡಿಗಳ ದುಸ್ಥಿತಿ ಬಗ್ಗೆ ಪ್ರತಿಕ್ರಿಯೇ ನೀಡಿರುವ ಕಲಬುರಗಿ ಡಿಡಿಪಿಐ ಸಕ್ರೆಪ್ಪಗೌಡ್, ‘ಜಿಲ್ಲೆಯಲ್ಲಿನ ಕೊಠಡಿಗಳ ದುಸ್ಥಿತಿ ಬಗ್ಗೆ ಈಗಾಗಲೇ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಮಳೆ ಬಂದಾಗ, ಮಕ್ಕಳನ್ನು ಚೆನ್ನಾಗಿರುವ ಕೊಠಡಿಗಳಲ್ಲಿ ಕೂರಿಸಿ ಪಾಠ ಮಾಡಲು ಶಿಕ್ಷಕರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಇತ್ತೀಚೆಗೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಸೌಲಭ್ಯಗಳ ಕೊರತೆಯಿಂದ ಅನೇಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ. ಹತ್ತಾರು ಭಾಗ್ಯಗಳನ್ನು ನೀಡುತ್ತಿರುವ ಸರ್ಕಾರ, ಮಕ್ಕಳ ಭವಿಷ್ಯವನ್ನು ರೂಪಿಸುವ ಸರ್ಕಾರಿ ಶಾಲೆಗಳ ದುರಸ್ಥಿ ಮತ್ತು ಹೊಸ ಕೊಠಡಿಗಳ ನಿರ್ಮಾಣ ಭಾಗ್ಯವನ್ನು ಕೂಡ ನೀಡಬೇಕಿದೆ. ಆ ಮೂಲಕ ಮಕ್ಕಳು ಭಯಮುಕ್ತ, ಆತಂಕಮುಕ್ತವಾಗಿ ಪಾಠ ಕೇಳುವಂತಹ ಸ್ಥಿತಿ ನಿರ್ಮಾಣ ಮಾಡಬೇಕಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:02 am, Wed, 19 July 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ