ಸರ್ಕಾರಿ ಶಾಲೆ ಮುಚ್ಚುವುದನ್ನು ತಪ್ಪಿಸಲು 16 ಲಕ್ಷ ರೂ. ವೆಚ್ಚದಲ್ಲಿ ತರಗತಿ ಕೊಠಡಿಗಳನ್ನು ನಿರ್ಮಿಸಿಕೊಟ್ಟ ಸುಳ್ಯದ ರೈತ

ಸುಳ್ಯ ತಾಲೂಕಿನ ಗ್ರಾಮಾಂತರ ಪ್ರದೇಶವಾದ ಅಟ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಯೂ ಆಗಿರುವ ರೈತ ರವಿಪ್ರಕಾಶ್ ಅಟ್ಲೂರು ತರಗತಿ ಕೊಠಡಿಗಳನ್ನು ನಿರ್ಮಿಸಿದ್ದಾರೆ.

ಸರ್ಕಾರಿ ಶಾಲೆ ಮುಚ್ಚುವುದನ್ನು ತಪ್ಪಿಸಲು 16 ಲಕ್ಷ ರೂ. ವೆಚ್ಚದಲ್ಲಿ ತರಗತಿ ಕೊಠಡಿಗಳನ್ನು ನಿರ್ಮಿಸಿಕೊಟ್ಟ ಸುಳ್ಯದ ರೈತ
ಸಾಂದರ್ಭಿಕ ಚಿತ್ರ
Follow us
|

Updated on: Jun 29, 2023 | 7:54 PM

ಮಂಗಳೂರು: ಸರಕಾರಿ ಶಾಲೆ (Government School) ಮುಚ್ಚುವುದನ್ನು ತಪ್ಪಿಸಲು ಸುಳ್ಯ (Sullia) ಪ್ರಗತಿಪರ ರೈತರೊಬ್ಬರು (Farmer) 16 ಲಕ್ಷ ರೂ. ವೆಚ್ಚದಲ್ಲಿ ಎರಡು ತರಗತಿ ಕೊಠಡಿಗಳನ್ನು ನಿರ್ಮಿಸಿದ್ದು, ಅದನ್ನು ಸಂಸ್ಥೆಗೆ ಹಸ್ತಾಂತರಿಸಲಿದ್ದಾರೆ ಎಂದು ವರದಿಯಾಗಿದೆ. ಸುಳ್ಯ ತಾಲೂಕಿನ ಗ್ರಾಮಾಂತರ ಪ್ರದೇಶವಾದ ಅಟ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಯೂ ಆಗಿರುವ ರೈತ ರವಿಪ್ರಕಾಶ್ ಅಟ್ಲೂರು ತರಗತಿ ಕೊಠಡಿಗಳನ್ನು ನಿರ್ಮಿಸಿದ್ದಾರೆ. ಇದಕ್ಕೆ ಅವರ ಸಹೋದರಿ ಪದ್ಮಲತಾ ಅವರ ಹೆಸರನ್ನು ಇಡಲಾಗಿದೆ. ಅವರು ಕೂಡ ಹಳೆ ವಿದ್ಯಾರ್ಥಿಯಾಗಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಕಾನೂನು ಪದವೀಧರರಾದ ಅಟ್ಲೂರು ಅವರು ಜೀವನೋಪಾಯಕ್ಕಾಗಿ ಕೃಷಿಯನ್ನು ಆಯ್ದುಕೊಂಡರು. ಈ ಶಾಲೆಯನ್ನು 1959ರಲ್ಲಿ ತಮ್ಮ ತಾತ ಆರಂಭಿಸಿದ್ದರು ಎಂದಿದ್ದಾರೆ. ಶಾಲೆಯು ಅಟ್ಲೂರ್ ಕುಟುಂಬಕ್ಕೆ ಹತ್ತಿರದಲ್ಲಿದೆ, ಏಕೆಂದರೆ ಅದು ಆ ದಿನಗಳಲ್ಲಿ ನಮ್ಮ ಮನೆಯ ಜಗುಲಿಯಲ್ಲಿ ಪ್ರಾರಂಭವಾಗಿತ್ತು. ನನ್ನ ಅಜ್ಜ ಮೊದಲ ಶಿಕ್ಷಕರಾಗಿದ್ದರು. ನಂತರ, ಇದು ಶಾಶ್ವತ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಆ ಕಟ್ಟಡವನ್ನೂ ಅಟ್ಲೂರ್ ಕುಟುಂಬದಿಂದ ನಿರ್ಮಿಸಲಾಗಿತ್ತು. ಒಂದರಿಂದ ನಾಲ್ಕನೇ ತರಗತಿವರೆಗೆ ಸುಮಾರು 40 ವಿದ್ಯಾರ್ಥಿಗಳು ಓದುತ್ತಿದ್ದರು. ದಾಖಲಾತಿ ಕಡಿಮೆಯಾಗುತ್ತಿದ್ದಂತೆಯೇ ನಮ್ಮ ಕುಟುಂಬವು 2012 ರಲ್ಲಿ ಶಾಲೆಯನ್ನು ದತ್ತು ತೆಗೆದುಕೊಂಡಿತು. ಈ ತರಗತಿ ಕೊಠಡಿಗಳು ಶಾಲೆಗೆ ನಮ್ಮ ಸಣ್ಣ ಕೊಡುಗೆಯಾಗಿದೆ ಎಂದು ಅಟ್ಲೂರ್ ಅವರು ತಿಳಿಸಿರುವುದಾಗಿ ‘ಟೈಮ್ಸ್ ಅಫ್ ಇಂಡಿಯಾ’ ವರದಿ ಮಾಡಿದೆ.

2012 ರಲ್ಲಿ ಶಾಲೆಯನ್ನು ದತ್ತು ಪಡೆದ ನಂತರ ಅಟ್ಲೂರ್ ಕುಟುಂಬವು ಶಾಲೆಗೆ ಲೇಖನ ಸಾಮಗ್ರಿಗಳು, ಸಮವಸ್ತ್ರಗಳು, ಗೌರವ ಶಿಕ್ಷಕರು ಮತ್ತು ಇತರ ಸೌಲಭ್ಯಗಳನ್ನು ಒದಗಿಸುತ್ತಿದೆ. ಪ್ರಸ್ತುತ ಒಂದರಿಂದ ಎಂಟನೇ ತರಗತಿವರೆಗೆ ಹಿಂದುಳಿದ ಸಮುದಾಯದ 60 ಮಂದಿ ಸೇರಿದಂತೆ 78 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ದಾಖಲಾತಿ ಅಷ್ಟೊಂದು ಉತ್ತೇಜನಕಾರಿಯಾಗಿಲ್ಲ. ಏಕೆಂದರೆ ಪೋಷಕರು ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳಿಗೆ ಆದ್ಯತೆ ನೀಡುತ್ತಾರೆ. ಈ ಶಾಲೆಯಲ್ಲಿ ಓದಿದ ನಾನು ಮತ್ತು ನನ್ನ ಕುಟುಂಬವು ಸೌಲಭ್ಯಗಳನ್ನು ಸುಧಾರಿಸುವ ಮೂಲಕ ಮುಂದಿನ ದಿನಗಳಲ್ಲಿ ಶಾಲೆಯು ಅಭಿವೃದ್ಧಿ ಹೊಂದಲಿ ಎಂದು ಆಶಿಸುತ್ತೇವೆ ಎಂದು ಅಟ್ಲೂರ್ ಹೇಳಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಹೆಚ್ಚುವರಿ ಮೂಲಸೌಕರ್ಯಕ್ಕಾಗಿ ಶಾಲೆಯವರು ಬಹಳ ದಿನಗಳಿಂದ ಬೇಡಿಕೆ ಸಲ್ಲಿಸುತ್ತಿದ್ದಾರೆ. ಆದರೆ, ಸರಕಾರದ ಪ್ರತಿಕ್ರಿಯೆ ನೀರಸವಾಗಿ. ಅಲ್ಲದೆ, ಹಣ ಮಂಜೂರು ಮಾಡಲು ಮತ್ತು ಸೌಲಭ್ಯಗಳನ್ನು ನಿರ್ಮಿಸಲು ವರ್ಷಗಳೇ ತೆಗೆದುಕೊಳ್ಳುತ್ತವೆ. ಆದ್ದರಿಂದ, ನಾನು ಸ್ವಂತವಾಗಿ ತರಗತಿನ ಕೊಠಡಿಗಳನ್ನು ನಿರ್ಮಿಸಲು ನಿರ್ಧರಿಸಿದೆ. ಸಂಪೂರ್ಣ ಕಾಮಗಾರಿಯನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ ಎಂದು ವರದಿ ಹೇಳಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಮೆಟ್ರೋದಲ್ಲಿ ಪರ್ಸ್ ಕದಿಯುವಾಗ ಸಿಕ್ಕಿಬಿದ್ದ ಕಳ್ಳನಿಗೆ ಥಳಿಸಿದ ಪ್ರಯಾಣಿಕರು
ಮೆಟ್ರೋದಲ್ಲಿ ಪರ್ಸ್ ಕದಿಯುವಾಗ ಸಿಕ್ಕಿಬಿದ್ದ ಕಳ್ಳನಿಗೆ ಥಳಿಸಿದ ಪ್ರಯಾಣಿಕರು
ನೀರಲ್ಲಿ ಕಾರು ಕೊಚ್ಚಿಹೋದರೂ ಅದರಲ್ಲಿದ್ದ ನಾಲ್ವರು ಬದುಕುಳಿದಿದ್ದು ಪವಾಡ
ನೀರಲ್ಲಿ ಕಾರು ಕೊಚ್ಚಿಹೋದರೂ ಅದರಲ್ಲಿದ್ದ ನಾಲ್ವರು ಬದುಕುಳಿದಿದ್ದು ಪವಾಡ
ನಡುರಸ್ತೆಯಲ್ಲೇ ಚೂಪಾದ ಆಯುಧದಿಂದ ಥಳಿಸಿ ಕೊಂದ ಜನರು; ವಿಡಿಯೋ ವೈರಲ್
ನಡುರಸ್ತೆಯಲ್ಲೇ ಚೂಪಾದ ಆಯುಧದಿಂದ ಥಳಿಸಿ ಕೊಂದ ಜನರು; ವಿಡಿಯೋ ವೈರಲ್
ಪ್ರತಾಪ್ ಕುಡಿತದ ದಾಸನಾಗಿದ್ದ, ಮಕ್ಕಳಿಲ್ಲದ ಕೊರಗು ಕಾಡುತಿತ್ತು: ಪಾಟೀಲ್
ಪ್ರತಾಪ್ ಕುಡಿತದ ದಾಸನಾಗಿದ್ದ, ಮಕ್ಕಳಿಲ್ಲದ ಕೊರಗು ಕಾಡುತಿತ್ತು: ಪಾಟೀಲ್
ಜು.12ಕ್ಕೆ ದರ್ಶನ್ ನಟನೆಯ ‘ಶಾಸ್ತ್ರಿ’ ಮರು ಬಿಡುಗಡೆ; ಏನಿದು ಪ್ಲ್ಯಾನ್?
ಜು.12ಕ್ಕೆ ದರ್ಶನ್ ನಟನೆಯ ‘ಶಾಸ್ತ್ರಿ’ ಮರು ಬಿಡುಗಡೆ; ಏನಿದು ಪ್ಲ್ಯಾನ್?
ಉಡುಪಿಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಯ ವಿಡಿಯೋ ವೈರಲ್
ಉಡುಪಿಯಲ್ಲಿ ಪ್ರವಾಹದ ನೀರಿನಲ್ಲಿ ಸಿಲುಕಿದ್ದ ನಾಯಿಯ ರಕ್ಷಣೆಯ ವಿಡಿಯೋ ವೈರಲ್
ರಷ್ಯಾಗೆ ಆಗಮಿಸಿದ ಮೋದಿಗೆ ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ
ರಷ್ಯಾಗೆ ಆಗಮಿಸಿದ ಮೋದಿಗೆ ಭಾರತೀಯರಿಂದ ನೃತ್ಯದ ಮೂಲಕ ಅದ್ದೂರಿ ಸ್ವಾಗತ
ಮಹಾರಾಷ್ಟ್ರ: ಉಕ್ಕಿದ ಹಿರಣ್ಯಕೇಶಿ ನದಿ, ಬೆಳಗಾವಿ ಗಡಿಭಾಗಕ್ಕೆ ಹರಿದ ನೀರು
ಮಹಾರಾಷ್ಟ್ರ: ಉಕ್ಕಿದ ಹಿರಣ್ಯಕೇಶಿ ನದಿ, ಬೆಳಗಾವಿ ಗಡಿಭಾಗಕ್ಕೆ ಹರಿದ ನೀರು
ದರ್ಶನ್​ರನ್ನು ನೋಡಲು ವಕೀಲನ ಜತೆ ಸೆಂಟ್ರಲ್ ಜೈಲಿಗೆ ಬಂದ ನಿರ್ಮಾಪಕ ಕೆ ಮಂಜು
ದರ್ಶನ್​ರನ್ನು ನೋಡಲು ವಕೀಲನ ಜತೆ ಸೆಂಟ್ರಲ್ ಜೈಲಿಗೆ ಬಂದ ನಿರ್ಮಾಪಕ ಕೆ ಮಂಜು
‘ನನಗೂ ಅಶ್ಲೀಲ ಮೆಸೇಜ್​ಗಳು ಬರುತ್ತವೆ’: ಕಹಿ ಸತ್ಯ ವಿವರಿಸಿದ ನಟಿ ಅಪೂರ್ವಾ
‘ನನಗೂ ಅಶ್ಲೀಲ ಮೆಸೇಜ್​ಗಳು ಬರುತ್ತವೆ’: ಕಹಿ ಸತ್ಯ ವಿವರಿಸಿದ ನಟಿ ಅಪೂರ್ವಾ