Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದಿ ಪಾಲಾಗುವ ನವಜಾತ ಶಿಶುಗಳ ಭವಿಷ್ಯ ಉಜ್ವಲಗೊಳಿಸುತಿದೆ ‘ಮಮತೆಯ ತೊಟ್ಟಿಲು’!

ಕಲಬುರಗಿ:ಅನೇಕರು ಮಕ್ಕಳ ಭಾಗ್ಯವಿಲ್ಲವಲ್ಲ ಅಂತ ಪಡಬಾರದ ಕಷ್ಟ ಪಡ್ತಿದ್ದಾರೆ. ಹತ್ತಾರು ದೇವರಿಗೆ ನೂರಾರು ರೀತಿಯ ಹರಕೆ ಹೊರ್ತಾರೆ. ಆದ್ರೆ ಇನ್ನೂ ಕೆಲವರು ಮಕ್ಕಳು ಹುಟ್ಟಿದ್ದೆ ದೊಡ್ಡ ತಪ್ಪು ಎನ್ನುವ ರೀತಿ ಅನೇಕರು ಬೇಡವಾದ ಮಕ್ಕಳನ್ನು ಸಿಕ್ಕಲ್ಲಿ ಬಿಸಾಕಿ ಹೋಗ್ತಾರೆ. ಹೀಗಾಗಿ ಬೇಡವಾದ ಅದೆಷ್ಟೋ ನವಜಾತ ಶಿಶುಗಳು ನಾಯಿಗಳ ಪಾಲಾಗುತ್ತವೆ. ಕಸದ ತೊಟ್ಟಿಯಲ್ಲಿ ಬಿದ್ದು ನರಳುತ್ತವೆ. ಇದನ್ನು ತಪ್ಪಿಸಲೆಂದು ಸರ್ಕಾರ ಮಮತೆಯ ತೊಟ್ಟಿಲನ್ನು ಕೆಲ ತಿಂಗಳ ಹಿಂದೆ ಪ್ರಾರಂಭಿಸಿತ್ತು. ಆ ಮೂಲಕ ಬೇಡವಾದ ಮಕ್ಕಳು ಬಾರದ ಲೋಕಕ್ಕೆ ಹೋಗುವುದನ್ನು […]

ಬೀದಿ ಪಾಲಾಗುವ ನವಜಾತ ಶಿಶುಗಳ ಭವಿಷ್ಯ ಉಜ್ವಲಗೊಳಿಸುತಿದೆ ‘ಮಮತೆಯ ತೊಟ್ಟಿಲು’!
Follow us
ಆಯೇಷಾ ಬಾನು
|

Updated on:Jun 05, 2020 | 3:31 PM

ಕಲಬುರಗಿ:ಅನೇಕರು ಮಕ್ಕಳ ಭಾಗ್ಯವಿಲ್ಲವಲ್ಲ ಅಂತ ಪಡಬಾರದ ಕಷ್ಟ ಪಡ್ತಿದ್ದಾರೆ. ಹತ್ತಾರು ದೇವರಿಗೆ ನೂರಾರು ರೀತಿಯ ಹರಕೆ ಹೊರ್ತಾರೆ. ಆದ್ರೆ ಇನ್ನೂ ಕೆಲವರು ಮಕ್ಕಳು ಹುಟ್ಟಿದ್ದೆ ದೊಡ್ಡ ತಪ್ಪು ಎನ್ನುವ ರೀತಿ ಅನೇಕರು ಬೇಡವಾದ ಮಕ್ಕಳನ್ನು ಸಿಕ್ಕಲ್ಲಿ ಬಿಸಾಕಿ ಹೋಗ್ತಾರೆ. ಹೀಗಾಗಿ ಬೇಡವಾದ ಅದೆಷ್ಟೋ ನವಜಾತ ಶಿಶುಗಳು ನಾಯಿಗಳ ಪಾಲಾಗುತ್ತವೆ.

ಕಸದ ತೊಟ್ಟಿಯಲ್ಲಿ ಬಿದ್ದು ನರಳುತ್ತವೆ. ಇದನ್ನು ತಪ್ಪಿಸಲೆಂದು ಸರ್ಕಾರ ಮಮತೆಯ ತೊಟ್ಟಿಲನ್ನು ಕೆಲ ತಿಂಗಳ ಹಿಂದೆ ಪ್ರಾರಂಭಿಸಿತ್ತು. ಆ ಮೂಲಕ ಬೇಡವಾದ ಮಕ್ಕಳು ಬಾರದ ಲೋಕಕ್ಕೆ ಹೋಗುವುದನ್ನು ತಪ್ಪಿಸಲು ಮುನ್ನುಡಿ ಹಾಡಲಾಗಿತ್ತು. ಬೇಡವಾದ ಮಕ್ಕಳನ್ನು ಎಲ್ಲೆಂದರಲ್ಲಿ ಬಿಸಾಡುವ ಬದಲು ಮಮತೆಯ ತೊಟ್ಟಿಲಲ್ಲಿ ಹಾಕಿದ್ರೆ, ಸರ್ಕಾರವೇ ಮಗುವಿನ ಲಾಲನೆ ಪಾಲನೆಯ ಜವಾಬ್ದಾರಿ ನೋಡಿಕೊಳ್ಳುತ್ತದೆ.

ಇಂತಹ ಯೋಜನೆಯಿಂದಾಗಿ ಇದೀಗ ಅನೇಕ ಮಕ್ಕಳು ಬೀದಿ ಪಾಲಾಗುವುದು ತಪ್ಪುತ್ತಿದೆ. ಕಲಬುರಗಿ ನಗರದ ಡಾನ್ ಬಾಸ್ಕೋ ಸಂಸ್ಥೆ ಮುಂದೆಯಿರುವ ಮಮತೆಯ ತೊಟ್ಟಿಲಲ್ಲಿ ಒಂದು ದಿನದ ನವಜಾತ ಹೆಣ್ಣು ಶಿಶುವನ್ನು ಹೆತ್ತವರು ಹಾಕಿ ಹೋಗಿದ್ದಾರೆ. ಹೌದು ಸಂಸ್ಥೆಯ ಮುಂದಿದ್ದ ಮಮತೆಯ ತೊಟ್ಟಿಲಲ್ಲಿ ಮಗು ಅಳುವ ಸದ್ದು ಕೇಳಿತ್ತು.

ಸದ್ದನ್ನು ಕೇಳಿದ ಸಂಸ್ಥೆಯ ಸಿಬ್ಬಂದಿ, ಹೋಗಿ ನೋಡಿದಾಗ ಮಮತೆಯ ತೊಟ್ಟಿಲಲ್ಲಿ ಒಂದು ದಿನದ ನವಜಾತ ಶಿಶುವಿತ್ತು. ತಕ್ಷಣವೇ ಮಗುವನ್ನು ರಕ್ಷಿಸಿ, ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗು ಆರೋಗ್ಯವಾಗಿದೆ. ಮಮತೆಯ ತೊಟ್ಟಿಲು ಮಗುವನ್ನು ರಕ್ಷಿಸಿದೆ. ಯಾಕಂದ್ರೆ ಹೆತ್ತವರಿಗೆ ಮಗು ಬೇಡವಾಗಿತ್ತು. ಹೀಗಾಗಿ ಮಗುವನ್ನು ಬೀದಿ ಪಾಲು ಮಾಡದೇ ಮಮತೆಯ ತೊಟ್ಟಿಲಲ್ಲಿ ಹಾಕಿ ಹೋಗಿದ್ದಾರೆ.

ನಿಮ್ಮ ಸಂಬಂಧಕ್ಕೆ ಸಾಕ್ಷಿ ಬೇಡ್ವಾ?

ಮದುವೆಗೆ ಮುನ್ನವೆ ಅನೈತಿಕ ಸಂಬಂಧಕ್ಕೆ ಹುಟ್ಟಿದ ಮಗುವನ್ನು ಅನೇಕ ತಾಯಿಂದಿರು ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಿದ್ದರು. ರಸ್ತೆ ಪಕ್ಕದಲ್ಲಿ, ಮುಳ್ಳು ಕಂಟಿಯಲ್ಲಿ, ಕಸದ ತೊಟ್ಟಿಯಲ್ಲಿ ನವಜಾತ ಶಿಶುಗಳನ್ನು ಬಿಟ್ಟು ಹೋಗ್ತಿದ್ದರು. ಇನ್ನು ಅನೇಕರು ತಮಗೆ ಬೇಕಾದ ಮಗು ಹುಟ್ಟದಿದ್ದಾಗ ಹಾಗೂ ಹೆಣ್ಣು ಮಗು ಹುಟ್ಟಿದಾಗ ಸಾಕಲು ಇಷ್ಟವಿಲ್ಲದೆ. ಅಥವಾ ಅತ್ತೆ ಮಾವನ ಕಾಟದಿಂದ ರಸ್ತೆ ಬದಿಯಲ್ಲಿ ಬಿಟ್ಟು ಹೋಗಿರುವ ಅನೇಕ ಘಟನೆಗಳು ಕಲಬುರಗಿ ಜಿಲ್ಲೆ ಸೇರಿದಂತೆ ಅನೇಕ ಕಡೆ ವರದಿಯಾಗುತ್ತಲೆ ಇವೆ.

ಆದ್ರೆ ಅಂತಹ ನವಜಾತ ಶಿಶುಗಳು ನಾಯಿ ಪಾಲಾಗುತ್ತವೆ. ಅನೇಕ ಮಕ್ಕಳಿಗೆ ಆರೈಕೆ ಇಲ್ಲದೆ ದೇವರ ಮಡಿಲನ್ನು ಸೇರುತ್ತವೆ. ಕಳೆದ ವರ್ಷ ರಾಜ್ಯಾದ್ಯಂತ ಜಾರಿಗೊಳಿದ ಮಮತೆಯ ತೊಟ್ಟಿಲು ಯೋಜನೆಯಿಂದ ಅಂತಹ ಮಕ್ಕಳು ಜಗತ್ತನ್ನು ನೋಡುವಂತಾಗಿದೆ. ಅದರಂತೆ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿಯೂ ಆಯ್ದ ಸ್ಥಳಗಳಲ್ಲಿ ಮಮತೆಯ ತೊಟ್ಟಿಲನ್ನು ಇಡಲಾಗಿದೆ.

ಪುಟ್ಟ ಮಕ್ಕಳಿಗೆ ಮಮತೆಯ ಮಡಿಲು

ಕಲಬುರಗಿ ಜಿಲ್ಲೆಯಲ್ಲಿ, ಜಿಲ್ಲಾ ಆಸ್ಪತ್ರೆ, ರೈಲ್ವೆ ನಿಲ್ದಾಣ, ಮಕ್ಕಳ ಅಮುಲ್ಯ ಶಿಶುಗೃಹ, ಚಿಂಚೋಳಿ ಪಟ್ಟಣದ ಸರ್ಕಾರಿ ಆಸ್ಪತ್ರೆ, ಡಾನಾ ಬಾಸ್ಕೋ ಸಂಸ್ಥೆಯ ಮುಂಭಾಗ ಸೇರಿದಂತೆ ಅನೇಕ ಕಡೆ ಮಮತೆಯ ತೊಟ್ಟಿಲನ್ನು ಇಡಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮತ್ತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಪ್ರತಿಯೊಂದು ಜಿಲ್ಲೆಯಲ್ಲಿ ಕೂಡಾ ಮಮತೆಯ ತೊಟ್ಟಿಲನ್ನು ಇಡಲಾಗಿದೆ.

ಮಕ್ಕಳು ಬೇಡವಾದವರು ಈ ಮಮತೆಯ ತೊಟ್ಟಿಲಲ್ಲಿ ಮಗುವನ್ನು ಹಾಕಿ ಹೋದ್ರೆ, ಆ ಮಗುವನ್ನು ರಕ್ಷಣೆ ಮಾಡುವ ಜವಾಬ್ದಾರಿ ಇಲಾಖೆಯೇ ಹೊರಲಿದೆ. ಪ್ರತಿಯೊಂದು ಜಿಲ್ಲೆಯಲ್ಲಿರುವ ಅಮುಲ್ಯಾ ಶಿಶುಗೃಹದಲ್ಲಿ ಮಕ್ಕಳನ್ನು ನೋಡಿಕೊಳ್ಳಲಾಗುತ್ತದೆ. ಅವುಗಳಿಗೆ ಚಿಕಿತ್ಸೆ ಸೇರಿದಂತೆ ಪ್ರತಿಯೊಂದು ಖರ್ಚು ವೆಚ್ಚವನ್ನು ಸರ್ಕಾರ ನೋಡಿಕೊಳ್ಳುತ್ತದೆ. ಇನ್ನು ಮಕ್ಕಳನ್ನು ಯಾರಾದ್ರು ಕಾನೂನು ರೀತಿಯಲ್ಲಿ ದತ್ತು ಸ್ವೀಕರಿಸಲು ಮುಂದೆ ಬಂದ್ರೆ ಅವರಿಗೆ ದತ್ತು ಕೊಡ್ತಾರೆ. ಇಲ್ಲವೇ, 18 ವರ್ಷ ಆಗುವವರಗೆ ಸರ್ಕಾರವೇ ನೋಡಿಕೊಳ್ಳುತ್ತದೆ. ಇದರಿಂದ ಬೀದಿ ಪಾಲಾಗುವ ಮಕ್ಕಳ ಭವಿಷ್ಯ ಉಜ್ವಲವಾಗುತ್ತಿದೆ. (ವಿಶೇಷ ಬರಹ-ಸಂಜಯ್)

Published On - 2:14 pm, Fri, 5 June 20

ಸಂಸದರಾಗಿ 50ನೇ ಬಾರಿಗೆ ವಾರಾಣಸಿಗೆ ಪ್ರಧಾನಿ ಮೋದಿ ಭೇಟಿ
ಸಂಸದರಾಗಿ 50ನೇ ಬಾರಿಗೆ ವಾರಾಣಸಿಗೆ ಪ್ರಧಾನಿ ಮೋದಿ ಭೇಟಿ
ಕರಡಿಗಳಲ್ಲಿ ಮಾನವರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ, ಕೆಲವೊಮ್ಮೆ ಮಾರಣಾಂತಿಕ
ಕರಡಿಗಳಲ್ಲಿ ಮಾನವರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ, ಕೆಲವೊಮ್ಮೆ ಮಾರಣಾಂತಿಕ
ಒಂದೇ ಸ್ಟ್ರಾಟಿಜಿ ಎಲ್ಲ ಪಂದ್ಯಗಳಿಗೆ ನಡೆಯಲ್ಲ, ಬದಲಾಯಿಸಬೇಕು: ಅಭಿಮಾನಿ
ಒಂದೇ ಸ್ಟ್ರಾಟಿಜಿ ಎಲ್ಲ ಪಂದ್ಯಗಳಿಗೆ ನಡೆಯಲ್ಲ, ಬದಲಾಯಿಸಬೇಕು: ಅಭಿಮಾನಿ
ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್
‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್
ಹುಬ್ಬಳ್ಳಿ: ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!
ಹುಬ್ಬಳ್ಳಿ: ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!
ಹಾಟ್​ ಏರ್​ ಬಲೂನ್ ರೈಡ್ ಮಾಡುವಾಗ ಹಗ್ಗ ತುಂಡಾಗಿ ವ್ಯಕ್ತಿ ಸಾವು
ಹಾಟ್​ ಏರ್​ ಬಲೂನ್ ರೈಡ್ ಮಾಡುವಾಗ ಹಗ್ಗ ತುಂಡಾಗಿ ವ್ಯಕ್ತಿ ಸಾವು
ಹೋಮಕ್ಕೆ ತುಪ್ಪ ಹಾಗೂ ಧಾನ್ಯಗಳ ಹವಿಸ್ಸು ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಹೋಮಕ್ಕೆ ತುಪ್ಪ ಹಾಗೂ ಧಾನ್ಯಗಳ ಹವಿಸ್ಸು ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಈ ರಾಶಿಯವರು ಇಂದು ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ
ಈ ರಾಶಿಯವರು ಇಂದು ಉತ್ತಮ ಭವಿಷ್ಯದ ಕನಸುಗಳನ್ನು ಕಟ್ಟಿಕೊಳ್ಳುವ ಸಮಯ
‘ವಿದ್ಯಾಪತಿ’ ಸಿನಿಮಾ ನೋಡಿ ನಾಗಭೂಷಣ ಬಗ್ಗೆ ಮನಸಾರೆ ಮಾತಾಡಿದ ತಾರಾ
‘ವಿದ್ಯಾಪತಿ’ ಸಿನಿಮಾ ನೋಡಿ ನಾಗಭೂಷಣ ಬಗ್ಗೆ ಮನಸಾರೆ ಮಾತಾಡಿದ ತಾರಾ